
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಗಾಂಧೀ ಜಯಂತಿ ಅಂಗವಾಗಿ ಬ್ಯಾಂಕ್ ಆಪ್ ಬರೋಡಾ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಯೋಗ ಬಳಗ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಗಾಂಧೀ ಚಿಂತನೆಯ ಪ್ರಸ್ತುತತೆ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯ ಸಭಾ ಸದಸ್ಯ ಬಸವರಾಜ ಪಾಟೀಲ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಸನ್ನವೇಶದಲ್ಲಿ ಗಾಂಧೀಜಿಯವರ ಆದರ್ಶಗಳು ನಮಗೆ ಪ್ರೇರಣೆಯಾಗಬೇಕಿದೆ. ಅವರ ಆದರ್ಶದ ಮಾರ್ಗದಲ್ಲಿ ಎಲ್ಲರೂ ನಡೆದಲ್ಲಿ ಸಾಮರಸ್ಯದಿಂದ ಬದುಕಲು ಸಾಧ್ಯವಿದೆ. ನಾವೇಲ್ಲಾ ಮಹಾನ ವ್ಯಕ್ತಿಗಳ ಆದರ್ಶಗಳನ್ನು ಮುಂದಿನ ಪಿಳಿಗೆಗೆ ತಿಳಿಸುವ ಮೂಲಕ ಸಾಮರಸ್ಯ ಜೀವನಕ್ಕೆ ದಾರಿ ತೋರಿಸಬೇಕು ಎಂದರು.
ವೀರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಚಾಣಕ್ಯ ಕರಿಯರ್ ಆಕಾಡೆಮಿಯ ಎನ್.ಎಂ. ಬಿರಾದಾರ, ಸಾಹಿತಿ ಸಿದ್ದಣ್ಣ ಲಂಗೋಟಿ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಹನಮಂತ್ರಾಯ ಬಿರಾದಾರ, ಹೈಕೋರ್ಟ ನ್ಯಾಯವಾದಿ ಪರಶುರಾಮ ಯತ್ನಾಳ, ಸ್ತಿçÃರೋಗ ತಜ್ಞೆ ಡಾ| ಎಸ್.ಬಿ. ಕಂಬಿ, ಯೋಗ ಶಿಕ್ಷಕ ಆರ್.ಎಸ್. ಕೋಟುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧ್ಯಕ್ಷ ಎಂ.ಎಸ್. ನಿಜಗುಲಿ, ಪ್ರಧಾನಕಾರ್ಯದರ್ಶಿ ಎಸ್.ವಿ. ಪಾಟೀಲ, ವೆಂಕಟೇಶ ಹಿರೇರಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗಾಂಧೀ ಚಿಂತನೆಯ ಪ್ರಸ್ತುತತೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮೂವರು ಶಿಕ್ಷಕರಿಗೆ ಸನ್ಮಾನಿಸಲಾಯಿತು.


