
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಹಾರೂಗೇರಿಯ ಪ್ರಗತಿ ಕ್ರೆಡಿಟ್ ಸೌಹಾರ್ದ ಸಂಘ ನಿ, ಇದರ 6ನೇ ನೂತನ ಶಾಖೆಯನ್ನು ಮುಳ್ಳೂರ ಅನ್ನದಾನೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
ಈ ವೇಳೆ ಹಾರೂಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಶ್ರೀ ಐ.ಆರ್. ಮಠಪತಿ ಮಾತನಾಡಿದ ಅವರು 1904 ರಲ್ಲಿ ದಿ. ಸಿದ್ದನಗೌಡ ಪಾಟೀಲ ಅವರು ಹುಟ್ಟು ಹಾಕಿದ ಸಹಕಾರ ಸಂಘಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ ಎಂದು ಹರ್ಷವ್ಯಕ್ತಪಡಿಸಿದರು.
ವಿರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ನೂತನ ಶಾಖೆಯ ಸೇಪ್ ಲಾಕರ್ ಉದ್ಘಾಟಿಸಿ ಮಾತನಾಡಿ, ಸಂಘ ಸಂಸ್ಥೆಗಳು ಸ್ಥಾಪಿಸುವುದು ಮುಖ್ಯವಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಮುನ್ನೆಡೆಸಿಕೊಂಡು ಹೋಗುವುದು ಮುಖ್ಯವಾಗಿದೆ. ಗ್ರಾಹಕರಿಗೆ ಮೋಸ ಮಾಡದ ರೀತಿಯಲ್ಲಿ ಸಂಘಗಳು ನಡೆಸಿದರೆ ಗ್ರಾಹಕರಲ್ಲಿ ವಿಶ್ವಾಸ ಮೂಡುತ್ತದೆ ಎಂದರು.
ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಠೇವಣಿ ಪತ್ರ ವಿತರಿಸಿ ಮಾತನಾಡಿ, ಖಾಸಗಿ ಆರ್ಥಿಕ ಸಂಸ್ಥೆಗಳು ಇಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಮಾನವಾಗಿ ವ್ಯವಹಾರ ಮಾಡುತ್ತಿವೆ. ಪ್ರಗತಿ ಕ್ರೆಡಿಟ್ ಸೌಹಾರ್ದ ಸಂಸ್ಥೆಯು ಉತ್ತಮ ವಹಿವಾಟ ಮಾಡುವ ಮೂಲಕ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಬಿರಾದಾರ ಮಾತನಾಡಿ, ಪ್ರಗತಿ ಕ್ರೆಡಿಟ್ ಸೌಹಾರ್ದ ಸಂಘವು ಈಗಾಗಲೆ 6 ಶಾಖೆಗಳನ್ನು ಹೊಂದಿದ್ದು, ಇನ್ನೂ ಎರಡು ಶಾಖೆಗಳನ್ನು ಪ್ರಾರಂಭಿಸಲಾಗುವುದು. 28.60 ಕೋಟಿ ರೂ. ದುಡಿಯುವ ಬಂಡವಾಳ, 26ಕೋಟಿ ಠೇವಣಿ ಹೊಂದಿದ್ದು, 22.50 ಕೋಟಿ ರೂ. ಸಾಲ ನೀಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 48 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ಸಹಕಾರ ಅಭಿವೃಧ್ದಿ ಅಧಿಕಾರಿ ಗಿರೀಶ್ ಯಾವಗಲ್, ಮಾಜಿ ಜಿ.ಪಂ ಸದಸ್ಯ ರೇಣಪ್ಪ ಸೋಮಗೊಂಡ, ಆಡಳಿತ ಮಂಡಳಿಯ ಸದಸ್ಯರಾದ ಎಂ.ವಿ.ಗದಗ, ಎಂ.ಎಂ.ಬಿರಾದಾರ, ಆರ್.ಆರ್.ಗುರವ, ವಿ.ಡಿ.ಹಂಜೆ, ಡಾ. ಆರ್.ಐ.ಕೊಪ್ಪಳ, ಡಾ. ಸಂಜೀವ ತಿಗಣಿ, ರವಿಂದ್ರ ಬಿರಾದಾರ, ಎಸ್.ಎಂ.ಮಿರಜಕರ, ಸ್ಥಾನಿಕ ಸಮಿತಿಯ ಅಧ್ಯಕ್ಷ ಗೋಪಾಲರಡ್ಡಿ ಸಂಶಿ, ಉಪಾಧ್ಯಕ್ಷ ಮಾರುತಿ ಬಸಿಡೋಣಿ, ನಿರ್ದೇಶಕರಾದ ಎಸ್.ಎಂ ಸಕ್ರಿ, ರವಿ ಗಲಬಿ, ಪ್ರಕಾಶ ಚವಲಿ, ಮಹೇಶ ಹುಕ್ಕೇರಿ, ಮಲ್ಲಿಕಾರ್ಜುನರಡ್ಡಿ ಗೊಂದಿ, ವೀರಣ್ಣ ಚಿಕ್ಕರಡ್ಡಿ, ಈರನಗೌಡ ಪಾಟೀಲ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.


