
ಬೆಳಗಾವಿ ಜಿಲ್ಲಾಧ್ಯಂತಹ ಎಲ್ಲಾ ತಾಲ್ಲೂಕು, ಹಾಗೂ ಹಳ್ಳಿಗಳಲ್ಲಿ ಪಡಿತರ ವಿತರಣೆಗೆ ಸಮಯದಲ್ಲಿ ಸರ್ವರ್ ಸಮಸ್ಯೆ ಆಗುತ್ತಿರುವದರಿಂದ, ಪಡಿತರ ಕಾರ್ಡುದಾರರಿಗೆ ಸಾಕಷ್ಟು ತೊಂದರೆ ಆಗಿ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಾರ್ಡುದಾರರಿಂದ ಸರ್ವರ್ ನಿಧಾನ ಆಗುತ್ತಿರುವುದಕ್ಕೆ ಎಷ್ಟು ನಿಧಾನ ಎಂದು ಕಿರುಕುಳ ನೀಡುತ್ತಿದ್ದಾರೆ.
ಅದರಿಂದ ಇಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಹಾದೇವಪ್ಪ ಲಕ್ಷ್ಮಪ್ಪ ಕಾಮಣ್ಣವರ ಇವರ ನೇತೃತ್ವದಲ್ಲಿ ಜಿಲ್ಲೆ ಹಾಗೂ ಎಲ್ಲಾ ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಬೆಳಗಾವಿ ಜಿಲ್ಲೆಯ ಆಹಾರ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಇವರಿಗೆ ಸರ್ವರ್ ಸಮಸ್ಯೆಯನ್ನು ಬೇಗನೆ ಬಗೆಹರಿಸಬೇಕೆಂದು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಹಾದೇವಪ್ಪ ಲಕ್ಷ್ಮಪ್ಪ ಕಾಮಣ್ಣವರ, ಕಾರ್ಡುದಾರರು ಪ್ರತಿ ದಿನ ನ್ಯಾಯ ಬೆಲೆ ಅಗಂಡಿಗಳ ಮುಂದೆ ಬೆಳಿಗ್ಗೆಯಿಂದ ಸಂಜೆವರೆಗೆ ಪಡಿತರ ಕಾರ್ಡುದಾರರು ಸಾಲುಗಟ್ಟಿ ನಿಂತು ಸರ್ವರ್ ಬರದೇ ವಂಚಿತರಾಗಿ ಮರಳಿ ಹೋಗುತ್ತಿದ್ದಾರೆ, ಕಾರ್ಡುದಾರರಿಗೆ ಒಂದು ಕಡೆ ಕೆಲಸಕ್ಕೂ ಹೋಗದೆ, ಒಂದು ಕಡೆ ರೇಷನ್ ಸಿಗದೇ, ಕಾರ್ಡುದಾರರಿಂದ ರೇಷನ್ ಅಂಗಡಿ ಮಾಲೀಕರಿಗೆ ದಿನನಿತ್ಯ ತೊಂದರೆ ಆಗುತ್ತಿದೆ… ಅಧಿಕಾರಿಗಳು ಕೂಡಲೇ ಸರ್ವರ್ ಸಮಸ್ಯೆ ಬಗೆ ಹರಿಸಬೇಕು, ಮುಖ್ಯವಾಗಿ ಹೊಸ ಸರ್ವರನಲ್ಲಿ BPL ಸ್ಟೇಟ್ ಕಾರ್ಡುಗಳು ತೆಗೆದುಕೊಳ್ಳುವಂತಗಬೇಕು ಮತ್ತು ಮೊದಲಿನಂತೆ OTP ಮುಖಾಂತರ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡಬೇಕು, ಇನ್ನೂ ಮುಂತಾದವುಗಳ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಮನವಿ ಮಾಡಿಕೊಂಡರು…
ಬೆಳಗಾವಿ ಆಹಾರ ಉಪನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಇವರು ತಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸುವುದಾಗಿ ಜಿಲ್ಲಾಧ್ಯಕ್ಷರಾದ ಮಹಾದೇವಪ್ಪ ಕಾಮಣ್ಣವರ, ಹಾಗೂ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಭರವಸೆ ನೀಡಿದರು…
ಈ ವೇಳೆ ಜಿಲ್ಲಾ ಕಾರ್ಯಧರ್ಶಿ ಶ್ರೀ ಸದಾನಂದ ಅಳಜ, ಜಿಲ್ಲಾ ಕಮಿಟಿ ಸದಸ್ಯರಾದ ಶ್ರೀ ಜಗದೀಶ ನರಸನ್ನವರ, ಸೋಮಲಿಂಗ ಕಾಮಣ್ಣವರ, ಹಾಗೂ ಎಲ್ಲಾ ತಾಲ್ಲೂಕು ಅಧ್ಯಕ್ಷರು ಹಾಗೂ ಕಾರ್ಯಧರ್ಶಿಗಳು ಮತ್ತು ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಪಾಲ್ಗೊಂಡಿದ್ದರು


