12 August 2026
Advertisement
ರಾಜ್ಯ

ಹುಬ್ಬಳ್ಳಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ದರೋಡೆಕೋರರು

Untitled design - 1
WhatsApp Group Join Now

ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಉದ್ಯಮಿ ದರೋಡೆ ಪ್ರಕರಣವನ್ನು ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿ ಪಂಚನಾಮೆ ನಡೆಸುವಂತ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ದರೊಡೆಕೋರರ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಭರತ್,ಹಾಗೂ ಪಾರೂಕ್ ಎಂಬಾತರೇ ಗುಂಡೇಟು ತಿಂದ ನಟೋರಿಯಸ್ ದರೊಡೆಕೋರರಾಗಿದ್ದರೆ ಕಳೆದ ಅಕ್ಟೋಬರ್ 24 ರಂದು ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೇ ಸ್ಟೇಶನ್ ಬಳಿಯ ಬೋಗಿ ಬೋಗಿ ರೆಸ್ಟೋರೆಂಟ್ ಬಳಿ ಈ ಗ್ಯಾಂಗ್ ಹಣ ಸಾಗಾಟ ಮಾಡುತ್ತಿದ್ದ ಉದ್ಯಮಿಯ ಬಳಿ ದರೋಡೆ ಮಾಡಿ ಪರಾರಿಯಾಗಿತ್ತು.

ಈ ಹಿನ್ನೆಲೆ ಶಹರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲು ಮಾಡಿಕೊಂಡ ನಂತರ ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರು ಮಂಗಳೂರು ಮೂಲದ ದರೊಡೆಕೋರರನ್ನು ಬಂಧನ ಮಾಡಿ ಗಬ್ಬುರೂ ಬಳಿಯಲ್ಲಿ ವಿಚಾರಣೆ ನಡೆಸುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.ಆಗ PSI ಸ್ವಾತಿ ಹಾಗೂ ಇನ್ಸ್ಪೆಕ್ಟರ್ ಮಾರುತಿ ಆತ್ಮರಕ್ಷಣೆಗಾಗಿ ಭರತ್ ಹಾಗೂ ಪಾರೂಕ್ ಮೇಲೆ ಫೈರಿಂಗ್ ಮಾಡಿದ್ದಾರೆ ಅಂತಾ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

ಸದ್ಯ ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಖಾಕಿ ಪಡೆ ಈ ಗ್ಯಾಂಗ್ ನಲ್ಲಿ ಇನ್ನು ಹಲವು ನಟೋರಿಯಸ್ ದರೋಡೆಕೋರರು ಭಾಗಿಯಾಗಿರುವ ಮಾಹಿತಿಯನ್ನು ಕಲೆ ಹಾಕಿದ್ದು ಬೇರೆ ಬೇರೆ ರಾಜ್ಯಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಜಾಲವನ್ನು ಬಿಸಿದ್ದಾರೆ.

About The Author