ರಾಮದುರ್ಗ ಪುರಸಭೆ ವತಿಯಿಂದ ಬೀಡಾಡಿ ದನಗಳನ್ನು ಗೋ ಶಾಲೆಗೆ ಸೇರ್ಪಡೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ
ಪಟ್ಟಣದ ತೇರ ಬಜಾರದಲ್ಲಿ ಹಲವು ವರ್ಷಗಳಿಂದ ಬಿಡಾಡಿ ದನಗಳು ಅಲ್ಲಲ್ಲಿ ಸಾರ್ವಜನಿಕರ, ವಯೋವೃದ್ಧರ, ಮಹಿಳೆಯರ ಮೇಲೆ ದಾಳಿ ಮಾಡಿದ ಪರಿಣಾಮ ರಾಮದುರ್ಗ ಪುರಸಭೆ ವತಿಯಿಂದ ಬೀಡಾಡಿ ದನಗಳನ್ನು ಗೋ ಶಾಲೆಗೆ ಸೇರ್ಪಡೆ ಮಾಡಲಾಯಿತು.

ಕೆಲವು ವಾರಸುದಾರರು ಇಲ್ಲದ ದನಗಳು ಒಂದೆಡೆಯಾದರೆ, ಹಲವು ದನಗಳು ವಾರಸುದಾರರು ಇದ್ದರೂ ತಮ್ಮ ದನಗಳನ್ನು ಮನೆಯಲ್ಲಿ ಕಟ್ಟದೇ ಎಲ್ಲೆಂದರಲ್ಲಿ ಬಿಟ್ಟು ತಮಗೆ ಬೇಕಾದಾಗ ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.

ಬಿಡಾಡಿ ದನಗಳ ಹಾವಳಿಯಿಂದ ರಾತ್ರಿ ವೇಳೆಯಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗುತ್ತಿತ್ತು.

ಸ್ವಂತ ಮಾಲಿಕರ ದನಗಳನ್ನು ತಮ್ಮ ತಮ್ಮ ದನಕರಗಳನ್ನು ತಮ್ಮ ಮನೆಯಲ್ಲಿ ಕಟ್ಟಿಕೊಳ್ಳಬೇಕು ತಪ್ಪಿದ್ದಲ್ಲಿ ನಿಯಮಾನುಸಾರ ರಸ್ತೆಯಲ್ಲಿ ಸಂಚರಿಸುವ ಬೀಡಾಡಿ ದನಗಳಿಗೆ ಪಶು ಪಾಲನ ಇಲಾಖೆಯಿಂದ ಗಣತಿಯನ್ನು ಮಾಡಿಸಿ ಅವುಗಳಿಗೆ ಬೀಡಾಡಿ ದನಗಳೆಂದು ಗುರುತಿಸಿ ಅವುಗಳನ್ನು ಗೋ ಶಾಲೆಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು ಕೂಡ ದನಗಳನ್ನು ರಸ್ತೆ ಮೇಲೆ ಬಿಟ್ಟರೆ ದನಕರುಗಳನ್ನು ಮಾಲಿಕರಿಗೆ ಅಸ್ತಾ-ಸ್ಥರಿಸುವುದಿಲ್ಲ.
ಇವುಗಳು ನಮ್ಮ ದನಕರುಗಳು ಎಂದು ಬಂದರೆ ಅವರ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಲಾಗುವುದು ಎಂದು ಖಡಕ್ಕಾಗಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ದನಕರ ಮಾಲೀಕರಿಗೆ ಧ್ವನಿವರ್ಧಕ ಮೂಲಕ ಪಟ್ಟಣದ ಬೀದಿ ಬೀದಿಯಲ್ಲಿ ವಾಹನದ ಮೂಲಕ ಎಚ್ಚರಿಕೆ ನೀಡಿದ್ದಾರೆ

ಪುರಸಭೆ ಮುಖ್ಯಾಧಿಕಾರಿಗಳಾದ ಈರಣ್ಣ ಗುಡದಾರಿ ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಾದ ಗಿರೀಶ್ ಪಾಟೀಲ್ ಇವರು ಬೀಡಾಡಿ ದನಗಳ ಕಿವಿಗೆ ಟ್ಯಾಗನ್ನು ಹಾಕಿ ಬೀಡಾಡಿ ದನಗಳನ್ನು ಗೋ ಶಾಲೆಗೆ ಸೇರ್ಪಡೆ ಮಾಡಿದರು

About The Author