ರಾಮದುರ್ಗ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಭಕ್ತ ಮಂಡಳಿ ರಾಮದುರ್ಗ ವತಿಯಿಂದ ಪ್ರತಿ ಮಂಗಳವಾರ ಸಾಯಂಕಾಲ 8 ಗಂಟೆಗೆ ನಗರದ ತೇರಬಜಾರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದು, ನೆನ್ನೆ ಮಂಗಳವಾರ ದಿನಾಂಕ 01/07/2025 ರಂದು ವಿಶ್ವ ವೈದ್ಯ ದಿನದ ಪ್ರಯುಕ್ತ ನಗರದ ಖ್ಯಾತ ವೈದ್ಯರಾದ ಶ್ರೀಯುತ ಡಾ. ವೆಂಕಟೇಶ ಹೆಬ್ಬಳ್ಳಿ ಇವರನ್ನು ಸತ್ಕರಿಸುವ ಮೂಲಕ ಸಮಾಜಕ್ಕೆ ವೈದ್ಯರು ಮಾಡುತ್ತಿರುವ ಸೇವೆಯನ್ನು ಸ್ಮರಿಸಿಕೊಳ್ಳಲಾಯಿತು. ಪುರಾಣಗಳಲ್ಲಿಯೇ ಹೇಳುವಂತೆ ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯನನ್ನು ಭಗವಂತನಾದ ಹರಿಗೆ ಹೋಲಿಸಿದ್ದು ಅವರು ಮಾಡುವ ಕಾರ್ಯವು ದೈವ ಕಾರ್ಯ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸದ್ಭಕ್ತರ ಪುಟ್ಟ ಸತ್ಕಾರವನ್ನು ಸ್ವೀಕರಿಸಿದ ವೈದ್ಯರು ಭಕ್ತರನ್ನು ಉದ್ದೇಶಿಸಿ ಪ್ರಸ್ತುತ ಕಾಯಿಲೆಗಳಿಂದ ದೂರವಿರಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅಗತ್ಯ ಆಹಾರ ಕ್ರಮಗಳು ಮತ್ತು ದಿನಚರಿಯನ್ನು ತಿಳಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಯುತ ಲಲ್ಲುದಾಸ್ ಮಹಾರಾಜ್ ಅವರು ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಯಾದವಾಡ ಅವರು ವಹಿಸಿದ್ದರು. ಅತಿಥಿಗಳಾಗಿ ಮುರಳಿ ಹಂಪಿಹೊಳಿ ಅವರು ಇದ್ದರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀ ಪ್ರಕಾಶ ಸೂಳಿಭಾವಿ ಅವರು ಸ್ವಾಗತಿಸಿದರು ಸತ್ಕಾರ್ಯ ಫೌಂಡೇಶನ್ ಅಧ್ಯಕ್ಷರಾದ ಸಂಗಮೇಶ ಉದಪುಡಿ ಪರಿಚಯಿಸಿದರು ನಿವೃತ್ತ ಯೋಧರಾದ ಮಾಳಿ ಅವರು ತಮ್ಮ ಅನಿಸಿಕೆ ಹಂಚಿಕೊಂಡರು ವಕೀಲರಾದ ಶ್ರೀ ರಾಜು ಕೋಪರ್ಡೇ ಅವರು ವಂದಿಸಿದರು. ಮೋಹನ ವಾಳಿ ಪುರುಷೋತ್ತಮ ಲಾಹೋಟಿ ಜಾಧವ ಗುರೂಜಿ ಸಾಬಣ್ಣ ದೊಡಮನಿ ಗಣಪತಿ ಬಟಕುರ್ಕಿ ಸಿದ್ದು ಹುಗ್ಗಿ ಮುಂತಾದ ಭಕ್ತರು ಹಾಗೂ ಮಹಿಳೆಯರು ಮಕ್ಕಳು ಹಾಗೂ ತಾಯಂದಿರು ಉಪಸ್ಥಿತರಿದ್ದರು.
ವಿಶ್ವ ವೈದ್ಯ ದಿನದ ಪ್ರಯುಕ್ತ ವೈದ್ಯರಾದ ಡಾ. ವೆಂಕಟೇಶ ಹೆಬ್ಬಳ್ಳಿ ರವರಿಗೆ ಸನ್ಮಾನ.

WhatsApp Group
Join Now


