ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಮುದಾಯದಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಜಾಮಿಯಾ ಮಸ್ಜಿದ್ ಎದುರಿಗೆ ಜುಮ್ಮಾ ನಮಾಜ್ ನಂತರ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಮುದಾಯದಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಜಾಮಿಯಾ ಮಸ್ಜಿದ್ ಮೌಲಾನಾ ಜಹುರ್ ಹಾಜಿ,ವಕ್ಸ್ ಕಾಯಿದೆ 1995 ರ ಇತ್ತಿಚೆಗೆ ಅಂಗಿಕರಿಸಲಾದ ತಿದ್ದುಪಡಿಗಳನ್ನು ಹಿಂಪಡೆಯಲು ಒಂದು ಮನವಿ ಪತ್ರವನ್ನು ಸಲ್ಲಿಸಿಲಾಗಿತ್ತು, ಇತ್ತೀಚೆಗೆ 1995ರ ಕಾಯ್ದೆಗೆ ಅಂಗೀಕರಿಸಲಾದ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು ಭಾರತದ ಸಂವಿಧಾನದಲ್ಲಿ ಖಾತರಿ ಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ.
ಈ ತಿದ್ದುಪಡಿಗಳು ಸಂವಿಧಾನದ 14, 25 26 ಮತ್ತು 29ನೆಯ ವಿಧಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಆದ್ದರಿಂದ ನಾವೆಲ್ಲಾ ಜನತೆ ಸೇರಿ ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಈ ಎಲ್ಲಾ ವಿವಾದಾತ್ಮಕ ತಿದ್ದುಪಡಿಗಳನ್ನು,
ರದ್ದುಗೊಳಿಸುವಂತೆ ಗೌರವದೊಂದಿಗೆ ರಾಷ್ಟ್ರಪತಿಯವರಲ್ಲಿ ವಿನಂತಿಸಿದರು.
ಈ ಸಂಧರ್ದಲ್ಲಿ ಮುಸ್ಲಿಂ ಮುಖಂಡರು, ಯುವಕರು ಇನ್ನಿತರರು ಉಪಸ್ಥಿತರಿದ್ದರು.
