ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತೇರ ಬಜಾರದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಸಮಸ್ತ ಭಕ್ತ ಮಂಡಳಿಯ ವತಿಯಿಂದ ಗುರುಪೂರ್ಣಿಮೆಯ ನಿಮಿತ್ಯ ಸತ್ಯನಾರಾಯಣ ಪೂಜೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರಾಮದುರ್ಗ ನಗರದ ಗುರು ಸ್ವರೂಪಿ ಜಂಗಮರನ್ನು ಹಾಗೂ ವಿವಿಧ ದೇವಸ್ಥಾನಗಳ ಅರ್ಚಕರನ್ನು ಪಾದಪೂಜೆ ಮಾಡಿ ಸತ್ಕರಿಸಲಾಯಿತು. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಸಂಗಮೇಶ ಉದಪುಡಿ ಸಂಗೀತ ಸೇವೆಯನ್ನು ಕೃಷ್ಣ ಕೊಳದೂರ ವಂದನಾರ್ಪಣೆಯನ್ನು H K ದಾಸರ ಅವರು ನೆರವೇರಿಸಿ ಕೊಟ್ಟರು ಆಶೀರ್ವಚನವನ್ನು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ವಿಜಯೇಂದ್ರ ಜೋಷಿ ಹಾಗೂ ಎಪಿಎಂಸಿಯಲ್ಲಿರುವ ಮಹಾಂತ ದೇವಸ್ಥಾನದ ಅರ್ಚಕರಾದ ವೀರಯ್ಯ ಹಿರೇಮಠ ಅವರು ನೆರವೇರಿಸಿದರು. ಮಾಜಿ ಸೈನಿಕರಾದ ಶ್ರೀಯುತ ಪುಂಡಲೀಕ ಮಾಳಿ ಹಾಗೂ ರಾಮದುರ್ಗ ತಾಲೂಕ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಪ್ರಕಾಶ ಸೂಳಿಬಾವಿ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಗುರುವಂದನ ಕಾರ್ಯಕ್ರಮದಲ್ಲಿ ರಾಮದುರ್ಗದ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಲಲ್ಲು ದಾಸ್ ಮಹಾರಾಜ್, ಶ್ರೀ ತಪ್ಸಿ ಮಹಾರಾಜ್, ಮುದಕವಿಯ ವೆಂಕಟೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಧರ್ಮದಾಸ ಮಹಾರಾಜ, ಹರ್ಲಾಪುರದ ವೆಂಕಟೇಶ್ವರ ದೇವಸ್ಥಾನದ ಅರ್ಚಕರಾದ ಹನುಮಂತ ಇಂಗಳೇ, ದಾಸ ಸಾಹಿತ್ಯ ಪರಿಷತ್ ಹಾಗೂ ಟಿಟಿಡಿ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಜಯೇಂದ್ರ ಜೋಷಿ, ಅರ್ಚಕರಾದ ಶ್ರೀ ಪ್ರಹ್ಲಾದ ಜೋಶಿ, ನಗರದ ಕುಂಬಾರಗಿರಿ ಮಠದ ಅರ್ಚಕರಾದ ಶ್ರೀ ಆನಂದ್ ಕುಂಬಾರಗಿರಿ ಮಠ, ಅರ್ಚಕರಾದ ನಾಗಯ್ಯ ಹಿರೇಮಠ, ವೀರಯ್ಯ ಹಿರೇಮಠ, ರಾಮಸ್ವಾಮಿ ದೇವಾಂಗಮಠ, ಯಲ್ಲಪ್ಪ ಜಾಧವ, ಈರಯ್ಯ ಹೊಸೂರಮಠ ಇವರಿಗೆ ಪಾದ ಪೂಜೆ ಮಾಡಿ ಸತ್ಕರಿಸುವ ಮೂಲಕ ಗುರುವಂದನೆ ಮಾಡಲಾಯಿತು. ಗಂಗಾಧರ ಭೋಸಲೆ ಪುರುಷೋತ್ತಮ ಲಾಹೋಟಿ ರಾಜು ಕೋಪರ್ಡೇ ರಾಜು ಖಾನಾಪುರ ಮೋಹನ ವಾಳಿ ಅಂಬರೀಶ ಬಟಕುರ್ಕಿ ಅಪ್ಪನ ಗೌಡ ಪಾಟೀಲ್ ಶಿವು ನಾಗರಾಳ ಹಾಗೂ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಎಲ್ಲಾ ಭಕ್ತ ಮಂಡಳಿ ಹಾಗೂ ಟಿಟಿಡಿ ಭಜನಾ ಮಂಡಳಿಯ ತಾಯಂದಿರು ರಾಮದುರ್ಗ ನಗರದ ಸಮಸ್ತ ಭಕ್ತಗಣ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಗುರುವಂದನಾ ಕಾರ್ಯಕ್ರಮವು ಅನ್ನಪ್ರಸಾದೊಂದಿಗೆ ಸಂಪನ್ನವಾಯಿತು.



