ಹುಬ್ಬಳ್ಳಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಅಣ್ಣಿಗೇರಿ ತಾಲ್ಲೂಕಿನ ಗ್ರಾಮ ಪಂಚಾಯತಿ ನಲವಡಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ಮಶಾನ ಕಾಮಗಾರಿ ಮುಕ್ತಿವನ, ಕೂಸಿನ ಮನೆ ವೀಕ್ಷಣೆ ಮಾಡಿದರು. ಹಾಗೂ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮತ್ತು ಅಣ್ಣಿಗೇರಿ ತಾಲ್ಲೂಕಿನ ಗ್ರಾಮ ಪಂಚಾಯತಿ ಹಳ್ಳಿಕೇರಿಯ ಪಾಂಡುರಂಗ ದೇವಸ್ಥಾನದಲ್ಲಿ ಉಚಿತ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ.ಅಣ್ಣಿಗೇರಿ, ತಹಶಿಲ್ದಾರರು, ಸಹಾಯಕ ನಿರ್ದೇಶಕರು ಗ್ರಾ ಮತ್ತು ಉ ತಾ.ಪಂ.ಅಣ್ಣಿಗೇರಿ, ಸಹಾಯಕ ನಿರ್ದೇಶಕರು ಪಂಚಾಯತ ರಾಜ್ ತಾ.ಪಂ.ಅಣ್ಣಿಗೇರಿ ಹಾಗೂ ಪಿಡಿಒ ಗ್ರಾ.ಪಂ.ಹಳ್ಳಿಕೇರಿ, ಗ್ಯಾರಂಟಿ ಯೋಜನೆ ಸದಸ್ಯರು, ಎಲ್ಲಾ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ ಅಧ್ಯಕ್ಷರು, ಗ್ರಾ.ಪಂ. ಉಪಾಧ್ಯಕ್ಷರು, ಗ್ರಾಮ ಪಂಚಾಯ ಸರ್ವ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ, ಗುರು ಹಿರಿಯರು, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಅಹವಾಲು ನೀಡಿದ ನಾಗರಿಕರು ಉಪಸ್ಥಿತರಿದ್ದರು.



