12 August 2026
Advertisement
ರಾಜ್ಯ

ಸರ್ಕಾರಿ ಪ್ರಾಥಮಿಕ ಶಾಲೆಯ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವ 12 ಮಕ್ಕಳ ಬಗ್ಗೆ ಸಿವಿಲ್‍ ನ್ಯಾಯಾಧೀಶರಾದ ಸಿದ್ರಾಮ ರೆಡ್ಡಿ ವಿಚಾರಣೆ ನಡೆಸಿದರು.

WhatsApp Group Join Now

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಕಲುಷಿತ ಕುಡಿಯುವ ನೀರು ಸೇವಿಸಿ ಅಸ್ವಸ್ಥಗೊಂಡಿರುವ 12 ಮಕ್ಕಳ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಉಪ ಕಾರ್ಯದರ್ಶಿಗಳು, ಬಾಲ ನ್ಯಾಯ ಸಮಿತಿ, ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ರವರು ಸೂಚಿಸಿದ ಮೇರೆಗೆ, ದಿನಾಂಕಃ 21-07-2025 ರಂದು ಸವದತ್ತಿಯ ಪ್ರಧಾನ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿಯಾದ ಶ್ರೀ. ಸಿದ್ರಾಮ ರೆಡ್ಡಿ ರವರ ಜೊತೆಗೆ ಭೇಟಿ ನೀಡಿದ ಗೌರವಾನ್ವಿತ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಯಾದ ಶ್ರೀ. ಸಂದೀಪ ಪಾಟೀಲ ರವರು ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಮಾತನಾಡಿಸಿದರು 12 ಮಕ್ಕಳ ಹೆಸರು, ವಿಳಾಸ, ಅ್ವಸ್ಥಗೊಂಡಿರುವ ಕಾರಣ, ಅಸ್ವಸ್ಥಗೊಂಡಿರುವ ಮಕ್ಕಳಿಗೆ ನೀಡಿದ ಚಿಕಿತ್ಸೆ, ಹಾಗೂ ಮಕ್ಕಳ ಸದ್ಯದ ಆರೋಗ್ಯದ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದರು.

ನಂತರ ಸ್ಥಳದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್.ಎನ್. ದಂಡಿನ, ಸಿ.ಪಿ.ಐ, ಡಿ.ಎಸ್.ಧರ್ಮಟ್ಟಿ, ಪಿ.ಎಸ್.ಐ, ಎಲ್.ಆರ್.ಗೌಡಿ, ಹೂಲಿಕಟ್ಟಿ ಗ್ರಾಮ ಪಂಚಾಯತ ಅಧಿಕಾರಿ ರಮೇಶ ತಿಪ್ಪನಾಯ್ಕ, ಗ್ರಾಮ ಲೆಕ್ಕಾಧಿಕಾರಿ ರವಿ ಲಮಾನಿ, ಶಾಲೆಯ ಮುಖ್ಯ ಶಿಕ್ಷಕರಾದ ಗೋರಿನಾಯ್ಕ ರವರಿಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಯಾರೋ ಒಬ್ಬ ಅಧಿಕಾರಿ ಹೇಳಿದ ಮೇಲೆ ಕೆಲಸ ಮಾಡಬೇಕು ಅನ್ನುವುದನ್ನು ಎಲ್ಲರೂ ಬಿಡಬೇಕು ನಿಮ್ಮ ಗ್ರಾಮ ಸಂರಕ್ಷಣೆ ನಿಮ್ಮ ಕರ್ತವ್ಯ, ನಿಮ್ಮ ನಿರ್ಲಕ್ಷದಿಂದ ಮಕ್ಕಳಿಗೆ ತೊಂದರೆಯಾಗಿದೆ ಇನ್ನೂ ಮುಂದೆ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಿ ಎಂದರು. ಶಾಲೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು, ಕುಡಿಯುವ ನೀರಿನ ಸ್ವಚ್ಚತೆಯ ಬಗ್ಗೆ ಪ್ರತಿದಿನ ಗಮನ ಕೊಡಬೇಕು, ಟ್ಯಾಂಕರ್‍ ನೀರನ್ನು ಮಕ್ಕಳಿಗೆ ಕುಡಿಯಲು ಕೊಡಬೇಡಿ, ಶುದ್ದ ಕುಡಿಯುವ ನೀರನ್ನು ಉಪಯೊಗಿಸಿ, ಶಾಲೆಯ ಸುತ್ತ ಮುತ್ತ ಸಿ.ಸಿ ಕ್ಯಾಮೇರಾ ಅಳವಡಿಸಿ, ಶಾಲೆಯಲ್ಲಿ ಪ್ಯಾನ್‍ ಮತ್ತು ಕರೆಂಟ್‍ ಅಳವಡಿಸಿ, ಪ್ರತಿದಿನ ಶಾಲೆಯ ಅವಧಿ ಮುಗಿದ ನಂತರ ಸಾರ್ವಜನಿಕರು ಶಾಲೆಯ ಆವರಣ ಒಳಗಡೆ ಬರದಂತೆ ಶಾಲೆಯ ಮುಖ್ಯ ಗೇಟನ್ನು ಬೀಗದಿಂದ ಮುಚ್ಚಬೇಕು ಎಂದು ಸೂಚಿಸಿದರು.

ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ. ಎಚ್.ಎಮ್. ಮಲ್ಲನಗೌಡರ, ಆರೋಗ್ಯಾಧಿಕಾರಿ ಡಾ. ಸಬನೀಸ್,  ಸಿ.ಡಿ.ಪಿ.ಓ ಸಾಣಿಕೊಪ್ಪ, ಇತರರು ಉಪಸ್ಥಿತರಿದ್ದರು.

About The Author