ಭಾರತೀಯ ಮಜ್ದೂರ್ ಸಂಘದ 70ನೇ ವರ್ಷದ ಸಂಸ್ಥಾಪನಾ ದಿನಾಚರಣೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಗಾಂಧಿನಗರದ ಪುರಸಭೆ ಗಾರ್ಡನ್ ಆವರಣದಲ್ಲಿ ಭಾರತೀಯ ಮಜ್ದೂರ್ ಸಂಘದ 70ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರ
ಬೆಳಗಾವಿ ಜಿಲ್ಲಾ ಸಂಘಟಿತ ಕಾರ್ಮಿಕ ಗೌರವ ಅಧ್ಯಕ್ಷರು ಚಿದಾನಂದ ದೊಡಮನಿ ಸಸಿಗೆ ನೀರು ಉಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ಈ ರಾಷ್ಟ್ರ ಕಂಡಂತಹ ಪ್ರಮುಖ ಸಾಮಾಜಿಕ ಕಾರ್ಯಕರ್ತ. ಇವರು ಭಾರತೀಯ ಕಾರ್ಮಿಕ ಸಂಘದ ನಾಯಕರು ಮತ್ತು ಸ್ವದೇಶೀ ಜಾಗರಣ್ ಮಂಚ್, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘಗಳ ಸಂಸ್ಥಾಪಕರು. ದತ್ತೋಪಂತ್ ಬಾಪೂ ರಾವ್ ಠೇಂಗಡಿ ಅವರು ಜೀವನವೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದವರು.ಇವರು ದೇಶದ ದುಡಿಯುವ ಸಮುದಾಯದ ಸರ್ವಂಗೀಣ ಶ್ರೇಯೋಭಿವೃದ್ಧಿಗೆ ಹಗಲಿರಳು ಶ್ರಮಿಸಿದ್ದಾರೆ. ಅದೇ ರೀತಿ ಸತತ 20 ವರ್ಷಗಳ ಕಾಲ ಕಾರ್ಮಿಕರ ಸೇವೆಗಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್ ಕಲಾದಗಿ ಅವರು ಸಾಕಷ್ಟು ಸಮಾಜ ಸೇವೆ ಹಾಗೂ ಕಾರ್ಮಿಕ ಸಂಘಕ್ಕೆ ಹಗಲಿರಳು ಶ್ರಮಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ಭಾರತೀಯ ಮಜ್ದೂರ್ ಸಂಘದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ್ ಕಲಾದಗಿ ಮಾತನಾಡಿ ದತ್ತೋಪಂತ್‌ ಬಾಪೂರಾವ್‌ ಠೇಂಗಡಿ ಅವರು ಅನೇಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು. 1955ರಲ್ಲಿ ಭಾರತೀಯ ಮಜ್ದೂರ್ ಸಂಘ, 1979ರಲ್ಲಿ ಭಾರತೀಯ ಕಿಸಾನ್ ಸಂಘ, 1991ರಲ್ಲಿ ಸ್ವದೇಶೀ ಜಾಗರಣ್ ಮಂಚ್, ಸಾಮಾಜಿಕ್ ಸಮರಸತಾ ಮಂಚ್, ಸರ್ವ ಪಂಥ್ ಸಮದಾರ್ ಮಂಚ್, ಪರ್ಯಾವರಣ್ ಮಂಚ್ ಸೇರಿದಂತೆ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು.
ಇಂದು ಭಾರತೀಯ ಮಜ್ದೂರ್ ಸಂಘದ 70ನೇ ವರ್ಷದ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ದೆಹಲಿಯಿಂದ ನೇರ ಪ್ರಸಾರ ಜರಗಲಿದೆ ಎಂದು ಹೇಳಿದರು.
ಈ ವೇಳೆ ಭಾರತೀಯ ಮಜ್ದೂರ್ ಸಂಘದ ಕಾರ್ಮಿಕರಿಗೆ ಹೆರಿಗೆ ಸಹಾಯಧನ, ಕಾರ್ಮಿಕ ಮಕ್ಕಳ ಮದುವೆ ಸಹಾಯಧನ, ಹಾಗೂ ಕಾರ್ಮಿಕರಿಗೆ ವಿವಿಧ ಯೋಜನೆಗಳ ಬಾಂಡ್ ಗಳನ್ನು ಕಾರ್ಮಿಕ ಇಲಾಖೆಯಿಂದ ಭಾರತೀಯ ಮಜ್ದೂರ್ ಸಂಘದ ಕಾರ್ಮಿಕರಿಗೆ ನೀಡಲಾಯಿತು.

ಭಾರತೀಯ ಮಜ್ದೂರ್ ಸಂಘದ ಪದಾಧಿಕಾರಿಗಳಿಗೆ ಹಾಗೂ ಪತ್ರಕರ್ತರಾದ ಅಂಬರೀಶ್ ಬಟಕುರ್ಕಿ, ಪ್ರಶಾಂತ್ ಅಂಗಡಿ ಇವರಿಗೆ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ನಿಂಗಪ್ಪ ಕರಿಗಾರ ಸಮಾಜ ಸೇವಕರು. ಕುರುಬ ಸಮುದಾಯದ ಅಧ್ಯಕ್ಷ ಪಡೆಯಪ್ಪ ಕ್ವಾರಿ, ಕಾರ್ಮಿಕ ಮುಖಂಡ ಭೀಮಶಿ ಶಿಂದೆ, ನಾಗಲಿಂಗಪ್ಪ ಬಡಿಗೇರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ ವಾರ್ತೆಪ್ಪನವರ್, ಮಂಜು ಕಳೇನ್ನವರ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ ಆಲಗುಂಡಿ, ಕುಮಾರ ವಡ್ಡರ್, ಹನುಮಂತ್ ಬಂಡಿವಡ್ಡರ್, ಅಶೋಕ ಬೆಡಗಿ, ಭಾರತೀಯ ಮಜ್ದೂರ್ ಸಂಘದ ಕಾರ್ಮಿಕರು ಉಪಸ್ಥಿತರಿದ್ದರು.

ನಿರೂಪಣೆ ಹಾಗೂ ಪ್ರಾಸ್ತಾವಿಕ ನುಡಿ ಕಾರ್ಮಿಕ ಮುಖಂಡರು ಶಂಕರ ಬನಪ್ಪನವರ, ನಡೆಸಿಕೊಟ್ಟರು

About The Author