ಭಾರತೀಯ ಅಂಚೆ ನೌಕರರಿಂದ ಶಿವಮೊಗ್ಗ ಜಿಲ್ಲೆ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಅಹೋರಾತ್ರಿ ಪ್ರತಿಭಟನೆ

WhatsApp Group Join Now

ಕೇಂದ್ರ ಕಛೇರಿ ದೆಹಲಿ ಸುತ್ತೋಲೆ ಮೇರೆಗೆ ಬಿಜೆ ಸುಂದರೇಶ್ ನೇತೃತ್ವದಲ್ಲಿ ಭಾರತೀಯ ಅಂಚೆ ನೌಕರರಿಂದ ನಗರದ ಶಿವಮೊಗ್ಗ ಜಿಲ್ಲೆ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ 5:45 ಸಮಯದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಂತಹ ಬಿಜೆ ಸುಂದರೇಶ್ ರವರು ಪ್ರತಿಭಟನೆಯ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರಿ 8 ವೇತನ ಆಯೋಗದ ರಚನೆ ಸೇರಿದಂತೆ 42 ಹಳೆಯ ಬೇಡಿಕೆಗಳನ್ನು ಹಿಡೇರಿಸಬೇಂಕೆದು ಸಾರ್ವಜನಿಕ ಸಂಪರ್ಕ ಅಂಚೆ ಅಧಿಕಾರಿ ಮತ್ತು ಅಖಿಲ ಭಾರತ ಅಂಚೆ ನೌಕರರ ಸಂಘದ ಕಾರ್ಯಾಧ್ಯಕ್ಷರು ಆದಂತಹ ಬಿಜೆ ಸುಂದರೇಶ್ ರವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯ ಸಂದರ್ಭದಲ್ಲಿ ಮೂರು ಸಂಘಟನೆಯ ಎಲ್ಲಾ ಸದಸ್ಯರು ಪ್ರತಿಭಟನೆಯಲ್ಲಿ ಉಪಸ್ಥಿತಿಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಯಾಗಿ ಪರಿಣಮಿಸಿದರು. ಈ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದಂತಹ ಕೆಆರ್ ನಾಗರಾಜ್. ಸದಸ್ಯರಾದ ಹಿಮಂತರಾಜ.ಎಸ್.ಜೆ. ಬಿಕೆ ರವಿಕುಮಾರ್. ಅಂಚೆ ಸಹಾಯಕರಾದ ಎ ಸುರೇಶ್. ಕರಿಬಸವ. ಉಪ ಅಂಚೆಪಾಲಕರಾದ ಅಬ್ದುಲ್ ಅಜಿಜ್. ಕಾರ್ಯದರ್ಶಿಯಾದ ಸಂತೋಷ. ಉಪಸ್ಥಿತಿಯಲ್ಲಿ ಭಾಗವಹಿಸಿದರು. ಈ ಪ್ರತಿಭಟನೆಯು ಶಿವಮೊಗ್ಗ ನಗರದ ಅಂಚೆ ಅಧೀಕ್ಷಕರ ಕಾರ್ಯಾಲಯ ದಲ್ಲಿ ಯಶಸ್ವಿಯಾಗಿ ನಡೆಯಿತು.
ವರದಿ : ಹೇಮಂತ್ ರಾಜ್ ಶಿವಮೊಗ್ಗ

About The Author