ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಜೈಂಟ್ಸ ಗ್ರುಫ್‍ ಸಹಯೋಗದೊಂದಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ.

WhatsApp Group Join Now

ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಜೈಂಟ್ಸ ಗ್ರುಫ್‍ ಸಹಯೋಗದೊಂದಿಗೆ ಎಮ್.ಎಲ್.ಇ.ಎಸ್. ಆಂಗ್ಲ ಮಾದ್ಯಮ ಶಾಲೆ, ಮುನವಳ್ಳಿಯಲ್ಲಿ “ನಾಲ್ಸಾ (ಸಾಗಾಣಿಕೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆಯ ಬಲಿಪಶುಗಳು) ಯೋಜನೆ-2015” ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು.

ಪ್ರಧಾನ ಹಿರಿಯ ಶ್ರೇಣಿ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ. ಸಿದ್ದರಾಮ, ರವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮದ ಉದ್ಪಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಶಾಲಾ ವಿದ್ಯಾರ್ಥಿಗಳು ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿದುಕೊಳ್ಳವುದು ಅತೀ ಅವಶ್ಯಕವಾಗಿದೆ ಎಂದರು. ಯಾವುದೇ ಅನಾಮಿಕ ವ್ಯಕ್ತಿ ಏನಾದರೂ ಆಮಿಶ ತೋರಿಸಿ ಕರೆದರೆ ಯಾವುದೇ ಕಾರಣಕ್ಕೂ ಅವನೊಟ್ಟಿಗೆ ಹೋಗಬಾರದು ವಿಶೇಷವಾಗಿ ಹೆಣ್ಣು ಮಕ್ಕಳು ಪ್ರೀತಿ ಪ್ರೇಮ ಅಂತಾ ಸಣ್ಣ ವಯಸ್ಸಿನಲ್ಲಿಯೇ ಅದರ ಪರಿಕಲ್ಪನೆ ಇಲ್ಲದೆಯೇ ಅನೇಕ ತೊಂದರೆಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಕಳ್ಳ ಸಾಗಾಣಿಕೆಯಿಂದ ಹೆಣ್ಣು ಮಕ್ಕಳ ಜೀವನ ಹಾಳಾಗುತ್ತಿದೆ. ನಿಮಗೆ ಅಗತ್ಯತೆ ಇರವುದಕ್ಕೆ ಮಾತ್ರ ನೀವು ಗಮನ ಕೊಡಬೇಕು. ಯಾವುದೇ ವ್ಯಕ್ತಿ ಲಾಭವಿಲ್ಲದೇ ಯಾವುದೇ ಸಹಾಯ ಮಾಡಲಾರ ಎಲ್ಲರೂ ಜಾಗೃತವಾಗಿರಬೇಕು. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳ ಮಾತನ್ನು ಮಾತ್ರ ಕೇಳಬೇಕು ನಿಮ್ಮ ನೆರೆಹೊರೆಯವರಲ್ಲಿ ಮಕ್ಕಳಿಗೆ ಏನಾದರೂ ತೊಂದರೆಯಾಗುತ್ತಿದ್ದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ವಿಷಯ ತಿಳಿಸಬೇಕು ಎಂದರು. ವಿದ್ಯಾರ್ಥಿಗಳು ತಮಗೆ ಯಾವುದೇ ವ್ಯಕ್ತಿಯಿಂದ ತೊಂದರೆಯಗುತ್ತಿದ್ದರೆ ಸುಮ್ಮನೇ ಇರಬಾರದು ವಿನಾಃಕಾರಣ ಮನಸ್ಸಿನಲ್ಲಿ ನೊಂದುಕೊಂಡು ನೋವು ಅನುಭವಸದೇ ನಿಮ್ಮ ತಂದೆ ತಾಯಿಗಳಿಗಾಗಲಿ ಅಥವಾ ನಿಮ್ಮ ಆತ್ಮಿಯರೊಂದಿಗಾಗಲಿ ವಿಷಯ ತಿಳಿಸಬೇಕು ಎಂದರು. ಕೆಟ್ಟದ್ದನ್ನು ವಿಚಾರ ಮಾಡಬೇಕು ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಮನೆಗೆ ಒಳ್ಳೆಯ ಮಕ್ಕಳಾಗಬೇಕು, ಶಾಲೆಗೆ ಒಳ್ಳೆಯ ವಿದ್ಯಾರ್ಥಿಯಾಗಬೇಕು, ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.

ಉಪನ್ಯಾಸ ಭಾಷಣ ಮಾಡಿದ ನ್ಯಾಯವಾದಿಗಳಾದ ಶ್ರೀ. ವಾಯ್.ಪಿ.ರಾಮಜಾರ ರವರು ಮಾತನಾಡಿ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಕಾನೂನಿನ ಚೌಕಟ್ಟಿನೊಳಗೆ ಬದುಕಬೇಕು. ಎಲ್ಲಾ ವಯಸ್ಸಿನ ಮಹಿಳೆಯರು ಸೇರಿದಂತೆ ಕಳ್ಳಸಾಗಣೆಯ ಬಲಿಪಶುಗಳ ಕಳವಳಗಳನ್ನು ಪರಿಹರಿಸಲು ಕಾನೂನು ಸೇವೆಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಮತ್ತು ಪ್ರತಿಯೊಂದು ಹಂತದಲ್ಲೂ ಅಂದರೆ ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ ಈ ಅಂಚಿನಲ್ಲಿರುವ ಗುಂಪುಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಮಾರ್ಗಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ, ಇದರಿಂದಾಗಿ ಅವರು ಸಾಮಾಜಿಕವಾಗಿ ಸೇರಿಸಲ್ಪಡುತ್ತಾರೆ ಮತ್ತು ಸಾಮಾನ್ಯ ನಾಗರಿಕರಿಗೆ ಲಭ್ಯವಿರುವ ಎಲ್ಲಾ ಸಾಮಾಜಿಕ ರಕ್ಷಣೆಗಳನ್ನು ಪಡೆಯುತ್ತಾರೆ. ಕಾನೂನು ಸೇವೆಗಳ ಅಧಿಕಾರಿಗಳ ಮಧ್ಯಸ್ಥಿಕೆಗಳು ಬಲಿಪಶುಗಳ ಘನತೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು, ಇದು ಯಾವುದೇ ಇತರ ನಾಗರಿಕರಂತೆ ಅವರ ಮೂಲಭೂತ ಹಕ್ಕಾಗಿದೆ. ಈಗಾಗಲೇ ಅಂಚಿನಲ್ಲಿರುವ ಸ್ವಯಂಸೇವಾ ಲೈಂಗಿಕ ಕಾರ್ಯಕರ್ತರನ್ನು ಕಾನೂನು ಸೇವಾ ಅಧಿಕಾರಿಗಳ ನೆರವಿನಿಂದ ಹೊರಗಿಡದಿರಲು, ಈ ಉದ್ದೇಶಕ್ಕಾಗಿ ಕಳ್ಳಸಾಗಣೆ ಮಾಡಲಾಗುವ ಮಕ್ಕಳು ಮತ್ತು ವಯಸ್ಕರನ್ನು ಹೊರತುಪಡಿಸಿ, ಅವರನ್ನು ಸಹ ವಾಣಿಜ್ಯ ಲೈಂಗಿಕ ಶೋಷಣೆಯ ಬಲಿಪಶುಗಳೆಂದು ಪರಿಗಣಿಸಲಾಗುತ್ತದೆ ಎಂದು ಯೋಜನೆಯ ಸಂಪೂರ್ಣ ವಿವರಣೆ ನೀಡಿದರು ಲೈಂಗಿಕ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅತೀ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಚೇರಮನ್‍ ‍ ಯು.ಎಸ್.ಬಾಳಿ, ಜೈಂಟ್ಸ ಗ್ರುಪಿನ ಅಧ್ಯಕ್ಷ ಭುಜಂಗರಾವ ನಿಕ್ಕಂ, ಶಾಲೆಯ ಮುಖ್ಯೋಪಾದ್ಯಾಯ ಎ.ವಿ.ರೋಣದ, ಹಾಗೂ ನ್ಯಾಯವಾದಿಗಳಾದ ಎಸ್.ಎಸ್.ಮಾನೆ, ಎಸ್.ಎಮ್.ಗೊಂದಕರ, ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಿರ್ಮಲಾ ಗದವಾಲ ಸ್ವಾತಿಸಿದರು, ಅಂಜುಮ ತೋಟಗಟ್ಟಿ ನಿರೂಪಿಸಿದರು, ನೀಪಾ ಪೆನಾಲ ವಂದಿಸಿದರು.

About The Author