ರೈಲು ಹೋರಾಟ ಸಮಿತಿ ರಾಮದುರ್ಗ ವತಿಯಿಂದ ಆಗಷ್ಟ 11 ರಂದು ಉಪವಾಸ ಸತ್ಯಗ್ರಹಕ್ಕೆ ಪೂರ್ವಭಾವಿ ಸಭೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಆಡಳಿತ ಸೌಧದ ಹತ್ತಿರರುವ ಪ್ರವಾಸಿ ಮಂದಿರದಲ್ಲಿ ರಾಮದುರ್ಗ ರೈಲ್ವೆ ಮಾರ್ಗಕ್ಕೆ ಉಪವಾಸ ಸತ್ಯಗ್ರಹಕ್ಕೆ ರೈಲು ಹೋರಾಟ ಸಮಿತಿ ಅಧ್ಯಕ್ಷ   ಬಿ ಯು ಭೈರಕದಾರ  ಅವರ ಅಧ್ಯಕ್ಷತೇಯಲ್ಲಿ ಪೂರ್ವಭಾವಿ  ಸಭೆ ಜರಗಿತು.

ಈ ಪೂರ್ವಭಾವಿ  ಸಭೆಯಲ್ಲಿ ರಾಮದುರ್ಗ ರೈಲ್ವೆ ಮಾರ್ಗಕ್ಕೆ ರಾಮದುರ್ಗದ ಎ ಆರ್ ಪಠಾಣ, ಡಿ ಎಫ್ ಹಾಜಿ, ಶಶಿಕಾಂತ್ ನೇಲೂರ್ ,ಶಿವಾನಂದ ಮಿಲಾನಿ, ಲಕ್ಶ್ಮಣ. ರಾಯಬಾಗ  ತಮ್ಮ ತಮ್ಮ ಅಭಿಪ್ರಾಯ ತಿಳಿಸಿದರು.

ರೈಲು ಹೋರಾಟ ಸಮಿತಿ ಅಧ್ಯಕ್ಷ  ಬಿ ಯು ಬೈರಕದಾರ್ ಎಲ್ಲರ ಅಭಿಪ್ರಾಯ ಕೇಳಿ ನಂತರ್ ಮಾತನಾಡಿ, ನಾವೆಲ್ಲರೂ ಸೇರಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ
ಹೋರಾಟ ಮಾಡಬೇಕಾಗಿದೆ ನಮ್ಮಲ್ಲಿ ಏನಾದರು ಗುಂಪು ಬಗ್ಗೆ ಡೌಟ್ ಇದ್ದರೆ ಬಿಟ್ಟು ಬಿಡಿ ನಾವುಲ್ಲರೂ ಒಂದೇ,  ಮನುಷ್ಯನಿಗೆ ಮೂಲಭೂತ ಸೌಲಭ್ಯದ ಬಗ್ಗೆ ಹೋರಾಟ ಮಾಡಬೇಕು ಇದು ನಮ್ಮ ಹಕ್ಕು.
ರೈಲು ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೂತಬುದ್ದಿನ ಕಾಜಿ ನೇತೃತ್ವದಲ್ಲಿ ಕುಡಚಿ ಬಾಗಲಕೋಟ ರೈಲು ಮಾರ್ಗಕ್ಕಾಗಿ ಮುಧೋಳ ಜಮಖಂಡಿ ನಗರಗಳಲ್ಲಿ ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ.
ರಾಮದುರ್ಗ ಪಟ್ಟಣದಲ್ಲಿ  ಕಳೆದ 10 ವರ್ಷಗಳಿಂದ ರಾಮದುರ್ಗಕ್ಕೆ ರೈಲು ಮಾರ್ಗಕ್ಕೆ ಹೋರಾಟ ಮಾಡುತ್ತಾ ಬಂದಿರುತ್ತೇನೆ. ರಾಮದುರ್ಗಕ್ಕೆ ಹೊಸ ರೈಲು ಮಾರ್ಗಕ್ಕಾಗಿ  ನಾವು ಹಲವಾರು ಬಾರಿ ಮನವಿಗಳನ್ನು ಸಲಿಸಿದ್ದೇವೆ.
ಈಗ ನಾವು ವಿವಿಧ ಸಂಘಟನೆಗಳಿಗೆ, ಮಠಾಧೀಶರಿಗೆ, ಮಾಲ್ವಿಗಳಿಗೆ ಭೇಟಿ ಮಾಡಿ ಅವರೆಲ್ಲರ ಅಭಿಪ್ರಾಯ, ಸಲಹೆ ಪಡೆದುಕೊಂಡು ಆಶೀರ್ವಾದದೊಂದಿಗೆ ನಾವು ಈಗಾಗಲೇ ತೀರ್ಮಾನ  ಮಾಡಿದ್ದೇವೆ ಈ ತೀರ್ಮಾನ ಭಾಗವಾಗಿ ಬರುವ ಆಗಷ್ಟ 11ರಂದು ಉಪವಾಸ ಸತ್ಯಗ್ರಹಕ್ಕೆ ಕುಡುದು ಗ್ಯಾರಂಟಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ರಾಜು ಪಾಟೀಲ ವಕೀಲರು, ರೈಲು ಹೋರಾಟ ಸಮಿತಿ ಯುವ ಮುಖಂಡ ದಾದಾಪೀರ ಕೆರೂರ, ಎಂ ಕೆ ಯಾದವಾಡ, ನೂರಅಹ್ಮದ ಅಕ್ಕೋಜಿ, ಕಾಶಿಮ್ ಪಡದಾರ್, ಶಿಶಿಕಾಂತ್ ನೇಲ್ಲೂರ, ಸಿ ಎಸ್ ಹಿರೇಮಠ್, ವಿಗ್ನೇಶ್ ಹೆಬ್ಬಾರ್,  ಮಂಜುನಾಥ್ ಮಾದರ ಉಪಸ್ಥಿತರಿದ್ದರು

About The Author