WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಟ ಗ್ರಾಮದ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ . ಖಾನಪೇಟ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ -2025 ರ ಚುನಾವಣೆಯನ್ನು ರಾಮದುರ್ಗದ ಹೊರವಲಯದ ಶ್ರೀಮತಿ ಈರಮ್ಮ ಕೊಂ ಶಿವಲಿಂಗಪ್ಪ ಯಾದವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರಗಿಸಲಾಯಿತು.
ಈ ವೇಳೆ ಮತದಾನ ಮಾಡಲು ಬಂದ ಬಾಗಲಕೋಟ್ ಜಿಲ್ಲೆಯ ಬದಾಮಿ ತಾಲೂಕಿನ ಮಣೇರಿ ಗ್ರಾಮದ ಬಸನಗೌಡ ಹನಮಂತಗೌಡ. ಅಯ್ಯನಗೌಡ್ರ ಇವರು ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಶೇರುದಾರರಾಗಿದ್ದು ಶೇರಿನ ಕ್ರಮ ಸಂಖ್ಯೆ 6635 ಹೊಂದಿದ್ದು ಇವರು ಮತದಾನ ಮಾಡಲು ಬಂದಾಗ ತಲೆಸುತ್ತಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ರಾಮದುರ್ಗ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ ವ್ಯಕ್ತಿ ಸಾವನ್ನಪ್ಪಿದ ಬಗ್ಗೆ ತಿಳಿದು ಬಂದಿದೆ.
ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



