ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಖಾನಪೇಟ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ -2025

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಟ ಗ್ರಾಮದ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಖಾನಪೇಟ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ -2025 ರ ಚುನಾವಣೆಯನ್ನು ರಾಮದುರ್ಗದ ಹೊರವಲಯದ ಶ್ರೀಮತಿ ಈರಮ್ಮ ಕೊಂ ಶಿವಲಿಂಗಪ್ಪ ಯಾದವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರವಿವಾರ ಜರಗಿಸಲಾಯಿತು.

ಮತದಾರರಿಗೆ ಅನುಕೂಲವಾಗಲೆಂದು
1 ರಿಂದ 50 ಮತಗಟ್ಟೆಯನ್ನು ನಿರ್ಮಾಣ ಮಾಡಲಾಗಿದ್ದು ಅದರಲ್ಲಿ 1 ರಿಂದ 48 ಮತಗಟ್ಟೆವರೆಗೆ ಒಂದು ಮತಗಟ್ಟೆಯಲ್ಲಿ 400 ಮತದಾರರನ್ನು ಹೊಂದಿದ್ದು. 48 ಮತಗಟ್ಟೆಯಲ್ಲಿ ಒಟ್ಟು-19063 ಅ ವರ್ಗದ ಕಬ್ಬು ಬೆಳೆಗಾರರ ಮತದಾರರನ್ನು ಹೊಂದಿದೆ.
ಹಾಗೂ 49ನೇ ಮತಗಟ್ಟೆ ಸಂಖ್ಯೆಯಲ್ಲಿ ಬ ವರ್ಗ ಸದಸ್ಯ ಸಹಕಾರ ಸಂಘಗಳು 1 ರಿಂದ 52 ಮತದಾರರನ್ನು ಹೊಂದಿದ್ದು. ಹಾಗೂ 50ನೇ ಮತಗಟ್ಟೆ ಸಂಖ್ಯೆಯಲ್ಲಿ ಡ ವರ್ಗ ಕಬ್ಬು ಬೆಳೆಗಾರರಲ್ಲದ ಸದಸ್ಯರು 1 ರಿಂದ 396 ರವರೆಗೆ ಮತದಾರರನ್ನು ಹೊಂದಿದ್ದು ಶಾಂತಿಯುತವಾಗಿ ಬಿಸಿಲಿನಲ್ಲಿ ನಿಂತು ಮತವನ್ನು ಚಲಾಯಿಸಿದರು.

ಟ್ರಾಫಿಕ್ ಜಾಮ್ ಮುಳ್ಳೂರು ಗುಡ್ಡದ ಶಿವನ ಮೂರ್ತಿಯಿಂದ ರಂಕಲಕೊಪ್ಪ ಪೆಟ್ರೋಲ್ ಪಂಪ್ ವರೆಗೂ ಕನಿಷ್ಠ ಮೂರು ತಾಸುಗಂಟಲೆ ಟ್ರಾಫಿಕ್ ಜಾಮ್ ಆಗಿದೆ.

About The Author