ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಟ ಗ್ರಾಮದ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಖಾನಪೇಟ ಆಡಳಿತ ಮಂಡಳಿ ನಿರ್ದೇಶಕರು ಚುನಾವಣೆ -2025 ರ ಚುನಾವಣೆಯನ್ನು ರಾಮದುರ್ಗದವಲಯದ ಶ್ರೀಮತಿ ಈರಮ್ಮ ಕೋಂ ಶಿವಲಿಂಗಪ್ಪ ಯಾದವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜು ರವಿವಾರ ಜರಗಿಸಲಾಯಿತು.
ಮತದಾರರಿಗೆ ಅನುಕೂಲವಾಗಲೆಂದು
1 ರಿಂದ 50 ಮತಗಟ್ಟೆಯನ್ನು ನಿರ್ಮಾಣ ಮಾಡಿರುವುದರಿಂದ 1 ರಿಂದ 48 ಮತಗಟ್ಟೆವರೆಗೆ ಒಂದು ಮತಗಟ್ಟೆಯಲ್ಲಿ 400 ಮತದಾರರನ್ನು ಹೊಂದಿದ್ದು. 48 ಮತಗಟ್ಟೆಯಲ್ಲಿ ಒಟ್ಟು-19063 ಒಂದು ವರ್ಗದ ಕಬ್ಬು ಬೆಳೆಗಾರರ ಮತದಾರರನ್ನು ಹೊಂದಿದೆ.
ಹಾಗೂ 49ನೇ ಮತಗಟ್ಟೆ ಸಂಖ್ಯೆಯಲ್ಲಿ ಬ ವರ್ಗ ಸದಸ್ಯ ಸಹಕಾರ ಸಂಘಗಳು 1 ರಿಂದ 52 ಮತದಾರರನ್ನು ಹೊಂದಿದ್ದು. ಹಾಗೂ 50ನೇ ಮತಗಟ್ಟೆ ಸಂಖ್ಯೆ ಡ ವರ್ಗ ಕಬ್ಬು ಬೆಳೆಗಾರರಲ್ಲದ ಸದಸ್ಯರು 1 ರಿಂದ 396 ಮತದಾರರನ್ನು ಹೊಂದಿದ್ದು ಶಾಂತಿಯುತವಾಗಿ ಬಿಸಿಲಿನಲ್ಲಿ ನಿಂತು ಮತವನ್ನು ಚಲಾಯಿಸಿದರು.

ರಾಮದುರ್ಗ ತಾಲೂಕಿನ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಖಾನಪೇಟ ನಿರ್ದೇಶಕರ ಚುನಾವಣೆಯಲ್ಲಿ ಮಹಾದೇವಪ್ಪ ಯಾದವಾಡ ಭರ್ಜರಿ ಪೆನೆಲ್ ಗೆಲುವು ಸಾಧಿಸಿದೆ. ಒಟ್ಟು 18 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಹಿರೇರಡ್ಡಿ ರೈತ ರಕ್ಷಣಾ ಸಮಿತಿಯು 7 ಸ್ಥಾನಗಳನ್ನು ಗೆದ್ದಿದೆ.
ಒಟ್ಟು 19,423 ಮತದಾರರಲ್ಲಿ 12,056 ಮಂದಿ ಮತದಾನ ಮಾಡಿ 62.7% ಮತದಾನವಾಗಿದೆ. ಇದರಲ್ಲಿ ಪುರುಷರು 10,720 ಮತ ಹಾಗೂ ಮಹಿಳೆಯರು 1,336 ಮತ ಚಲಾಯಿಸಿದ್ದಾರೆ.
ಸಾಮಾನ್ಯ “ಅ” ವರ್ಗದ ಕಬ್ಬು ಬೆಳೆಗಾರರ ಮತಕ್ಷೇತ್ರದಿಂದ ಆಯ್ಕೆಯಾದವರು
ಗೋಪಾಲರಡ್ಡಿ ರಾಮಪ್ಪ ಚಿಕರಡ್ಡಿ 4132 ಮತಗಳು
ಈರಪ್ಪ ಶಿವಗೆನಪ್ಪ ಹರನಟ್ಟಿ 4272 ಮತಗಳು
ಪರಪ್ಪಗೌಡ ಪಾಟೀಲ್ 4807 ಮತಗಳು
ಪರತಗೌಡ ಪಾಟೀಲ 4129 ಮತಗಳು
ಬಸವರಾಜ ಬಸವಂತಪ್ಪ ಹಿರೇರಡ್ಡಿ 4377 ಮತಗಳು
ಭೀಮಪ್ಪ ಶಿವಪ್ಪ ಬೆಳವಣಕಿ 4141 ಮತಗಳು
ಬಸವರಾಜ ತುಪ್ಪದ 4160 ಮತಗಳು
ಮಲ್ಲಪ್ಪ ಶಿವಲಿಂಗಪ್ಪ ಯಾದವಾಡ 4874 ಮತಗಳು
ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ 5003 ಮತಗಳು
ಮಹಾದೇವ ಆತಾರ 4061 ಮತಗಳು
ಮಹಿಳಾ ಮೀಸಲು “ಅ” ವರ್ಗದಿಂದ ಗೆದ್ದ ಅಭ್ಯರ್ಥಿಗಳು
ಶಶಿಕಲಾ ಬಸವರಾಜ ಸೋಮಗೊಂಡ 4177 ಮತಗಳು
ಅನ್ನಪೂರ್ಣ ಪಾಟೀಲ್ 3953 ಮತಗಳು
ಪರಿಶಿಷ್ಟ ಪಂಗಡ ಮೀಸಲು “ಅ” ವರ್ಗ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳು ಅಭ್ಯರ್ಥಿ ಭೀಮಪ್ಪ ಬಸಿಡೋಣಿ 4137 ಮತಗಳು
ಪರಿಶಿಷ್ಟ ಜಾತಿ ಮೀಸಲು “ಅ” ವರ್ಗ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ ಚಂದ್ರು ರಜಪೂತ 3917 ಮತಗಳು
ಹಿಂದುಳಿದ “ಅ” ವರ್ಗದ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ ಈರಣ್ಣ ಕಾಮಣ್ಣವರ 4157 ಮತಗಳು
ಹಿಂದುಳಿದ “ಬ” ವರ್ಗ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ ಶಿವಾನಂದ ಮುಷ್ಟಿಗೇರಿ 4863 ಮತಗಳು
“ಬ” ವರ್ಗ ಸಹಕಾರ ಸಂಸ್ಥೆಗಳ ಪ್ರತಿನಿಧಿ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ ಬಸವನಗೌಡ ದ್ಯಾಮನಗೌಡ್ರ 40 ಮತಗಳಿಂದ ಗೆಲುವು
“ಡ” ವರ್ಗ ಕಬ್ಬು ಬೆಳೆಗಾರನಲ್ಲದ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ ಬಸಪ್ಪ ಸಿದರಡ್ಡಿ ಕೇವಲ 1 ಮತ ಅಂತರದಲ್ಲಿ 73 ಮತಗಳಿಂದ
ಮಹಾದೇವಪ್ಪ ಯಾದವಾಡ ಪೆನೆಲ್:
ಮಲ್ಲಣ್ಣ ಯಾದವಾಡ, ಮಹಾದೇವಪ್ಪ ಯಾದವಾಡ, ಬಸವರಾಜ ತುಪ್ಪದ, ಈರಪ್ಪ ಹರನಟ್ಟಿ, ಅನ್ನಪೂರ್ಣ ಪಾಟೀಲ್, ಭೀಮಪ್ಪ ಬೆಳವಣಕಿ, ಮಹಾದೇವ ಆತಾರ, ಶಶಿಕಲಾ ಸೋಮಗೊಂಡ, ಶಿವಾನಂದ ಮುಷ್ಟಿಗೇರಿ, ಚಂದ್ರು ರಾಜಪೂತ, ಬಸವನಗೌಡ ಪಾಟೀಲ.
ರೈತ ಹಿತರಕ್ಷಣಾ ಸಮಿತಿ ಹಿರೆರಡ್ಡಿ ಪೆನೆಲ್:
ಬಸವರಾಜ ಹಿರೇರಡ್ಡಿ, ಪರತಗೌಡ ಪಾಟೀಲ್, ಗೋಪಾಲರಡ್ಡಿ ಚಿಕರಡ್ಡಿ, ಈರಣ್ಣ ಕಾಮಣ್ಣವರ, ಭೀಮಪ್ಪ ಬಸಿಡೋಣಿ, ಬಸಪ್ಪ ಸಿದರಡ್ಡಿ.
ಚುನಾವಣೆಯಲ್ಲಿ ಮಹಾದೇವಪ್ಪ ಯಾದವಾಡ ಪೆನೆಲ್ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 18 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಹಿರೇರಡ್ಡಿ ರೈತ ರಕ್ಷಣಾ ಸಮಿತಿಯು 7 ಸ್ಥಾನಗಳನ್ನು ಗೆದ್ದಿದೆ. ಗೆಲುವಿನ ಹಿನ್ನೆಲೆಯಲ್ಲಿ ಮಹಾದೇವಪ್ಪ ಯಾದವಾಡ ಅವರ ಮನೆ ಮುಂದೆ ಸಂಭ್ರಮದಿಂದ ಪಟಾಕಿ ಮೇಳದೊಂದಿಗೆ ಆಚರಿಸಲಾಯಿತು.




