ಸೆ.15 ರಿಂದ ನ.21 ರವರೆಗೆ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ, ಮಾಜಿ ದೇವದಾಸಿ ಕುಟುಂಬಗಳ ಸಮೀಕ್ಷೆ; ಅರ್ಹರು ಸಮೀಕ್ಷೆಯಿಂದ ಹೊರಗುಳಿಯದಂತೆ ಕ್ರಮವಹಿಸಿ: ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಾಗೂ ಮಾಜಿ ದೇವದಾಸಿಯರ ಕುಟುಂಬಗಳ ಮರು ಸಮೀಕ್ಷೆ ಕುರಿತು ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ಚಾಲನೆ ನೀಡಿದರು.

ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರಕಾರವು ಲಿಂಗತ್ವ ಅಲ್ಪ ಸಂಖ್ಯಾತರ ಸಮೀಕ್ಷೆಯನ್ನು ರಾಜ್ಯಾದದ್ಯಂತ ಸೆಪ್ಟೆಂಬರ 15 ರಿಂದ ನವೆಂಬರ 21 ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿಯೂ
ಇದೇ ಸಮಯಕ್ಕೆ ಸಮೀಕ್ಷೆ ನಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಯಾವೊಬ್ಬ ಅರ್ಹ ಫಲಾನುಭವಿ ಸಮೀಕ್ಷೆಯಿಂದ ಹೊರಗುಳಿಯದಂತೆ ಸೂಕ್ತ ಕ್ರಮವಹಿಸಬೇಕು.

ರಾಜ್ಯ ಸರಕಾರವು, ಮಾಜಿ ದೇವದಾಸಿಯರಿಗೆ ವಸತಿ, ಉದ್ಯೋಗ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಲು ಅನುಕೂಲವಾಗುವಂತೆ ಮರು ಸಮೀಕ್ಷೆ ಮಾಡಲು ಅದೇಶಿಸಿದೆ.

ಈ ಸಮೀಕ್ಷೆಯಲ್ಲಿ ಹಿಂದಿನ ಸಮೀಕ್ಷೆಗಳಲ್ಲಿದ್ದು, ಈಗ ಮರಣ ಹೊಂದಿದ್ದರೆ ಅವರ ಮಕ್ಕಳು ಅಥವಾ ಮೊಮ್ಮಕ್ಕಳು ನಮೂನೆ -1 ರಲ್ಲಿ ಮಾಹಿತಿ ಭರ್ತಿ ಮಾಡಬೇಕು. ಹಾಗೂ ಹಿಂದಿನ ಸಮೀಕ್ಷೆಯಲ್ಲಿರದ ಮತ್ತು ಈಗ ಜೀವಂತವಾಗಿದ್ದರೆ ನಮೂನೆ -2 ರಲ್ಲಿ ಮಾಹಿತಿ ಭರ್ತಿ ಮಾಡಬೇಕು. ಮತ್ತು ಹಿಂದಿನ ಸಮೀಕ್ಷೆಯಲ್ಲಿ ಇರದೆ, ಮರಣ ಹೊಂದಿದ್ದರೆ ಅಂತವರ ಕುಟುಂಬ ಸದಸ್ಯರು ನಮೂನೆ -3 ರಲ್ಲಿ ಮಾಹಿತಿ ಭರ್ತಿ ಮಾಡಿ ಸಲ್ಲಿಸಬೇಕು.

ಮಾಜಿ ದೇವದಾಸಿಯರ ಸಮೀಕ್ಷಾ ಅರ್ಜಿಗಳು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ಅರ್ಹರು ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ 15 ರಿಂದ 30 ರವರೆಗೆ ಅರ್ಜಿ ಸಲ್ಲಿಸಬೇಕು. ಅವುಗಳನ್ನು ತಹಶಿಲ್ದಾರ ಅಧ್ಯಕ್ಷತೆಯ ತಾಲೂಕು ಸಮಿತಿಗಳು ನಿಯಮಾನುಸಾರ ಪರಿಶೀಲಿಸಿ, ಜಿಲ್ಲಾ ಸಮಿತಿಗೆ ಕಳುಹಿಸುತ್ತಾರೆ.

ಹೆಚ್ಚಿನ ವಿವರಗಳಿಗೆ NGO ಉಮೇಶ್ ಇವರನ್ನು ಸಂಪರ್ಕಿಸಬಹುದು ಫೋನ್ 9148032969

ಈ ವೇಳೆ ತಾಲೂಕು ದಂಡಾಧಿಕಾರಿಗಳಾದ ಪ್ರಕಾಶ ಹೊಳೆಪ್ಪಗೋಳ,ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಆರ್ ಮಂಜುಳಾ, ಸಿಬ್ಬಂದಿಗಳಾದ ಸುರೇಶ್ ಹೂಲಿ, ದಾದಪೀರ ಕೆರೂರ್, ಉಮೇಶ್ ಕೆ, ಮುಕ್ತಾ ಜಂಬಾಳೆ, ತುಳಸಾಬಾವಿ ಭವಾನಿ, ಶಾರದಾ ಗುಡ್ಡಣ್ಣವರ, ವಿಟ್ಟಲ್ ಕರಿಗೌಡ್ರು, ಮಾರುತಿ ಮಾನೆ, ಇನ್ನಿತರೆ ಸಿಬ್ಬಂದಿಗಳು ಹಾಜರಿದ್ದರು.

About The Author