ಸುಂದರ ಕಾಂಡ ಹನುಮಾನ್ ಚಾಲೀಸಾ ವಾರ್ಷಿಕೋತ್ಸವದ ಕಾರ್ಯಕ್ರಮ ಯಶಸ್ವೀ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಂದರ ಕಾಂಡ,ಹನುಮಾನ್ ಚಾಲೀಸಾ ವಾರ್ಷಿಕೋತ್ಸವ ಅತೀ ವಿಜೃಂಭಣೆಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಜರಗಿತು.

ಈ ಕಾರ್ಯಕ್ರಮವು ಸಾಮೂಹಿಕ ಹನುಮಾನ್ ಚಾಲೀಸಾ ಪಟನೆಯೊಂದಿಗೆ ಪ್ರಾರಂಭವಾಗಿ ನಂತರ 108 ಬಾರಿ ರಾಮ್ ನಾಮ ಜಪಿಸಿ ಪುಷ್ಪರ್ಚನೆ ತುಳಸಿ ಅರ್ಚನೆ ಮಾಡುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು

ಈ ಸಂದರ್ಭದಲ್ಲಿ ಸತ್ಸಂಗ ಪ್ರಮುಖರಾದ್ ವಿಜೇಯಂದ್ರ ಜೋಶಿ ಮಾತನಾಡಿ ನಮ್ಮ ರಾಮದುರ್ಗದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಹಾಗೂ ಪ್ರತಿ ಹುಣ್ಣಿಮೆಯಂದು ಸುಂದರಕಾಂಡ ಪಟನೆಗಳು ಸಾರ್ವಜನಿಕವಾಗಿ ನಡೆಯುತವೇ ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಿ ನಂತರ ಅವರು ಸುಂದರ ಕಾಂಡ್ ಹಾಗೂ ಹನುಮಾನ್ ಚಾಲೀಸಾ ಕುರಿತು ಸ್ವವಿಸ್ತಾರವಾಗಿ ಎಲ್ಲ ಭಕ್ತರಿಗೆ ಜಾಗೃತಿ ಮೂಡಿಸುವ ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಟ್ಟರು.

ನಿರಂತರವಾಗಿ ಹನುಮಾನ್ ಚಾಲೀಸಾ ಪಟನೆಯಲ್ಲಿ ಭಾಗಿಯಾದಂತ ಮುದ್ದು ಮಕ್ಕಳು ಪ್ರಗತಿ ಮ ರಾಮದುರ್ಗ, ಸನವಿ ಸಿ ಹರಗುಲ್, ಅಬ್ಬತಾ ಮ ನವಲಗುಂದ,
ಸಮೃದ್ಧಿ ಹರಗೂಲ್, ಚೇತನ್ ಬ ಹಿರೇಮಠ್,
ಅವನಿ ರು ಪತ್ತಾರ್, ವೈಷ್ಣವಿ ಮಾ ನರಗುಂದ,
ವಿಜಶ್ರೀ ವೇ ಯಂಕಚ್ಚಿ, ಸಾಕ್ಷಿ ಈ ನರಗುಂದ,
ಅರ್ಪಿತಾ ಮ ಹರಗೂಲ್, ಲಷ್ಮಿ ಸಿ ಹರಗೂಲ್ ಮಕ್ಕಳಿಗೆ ಸನ್ಮಾನ ಮಾಡುವ ಮುಖಾಂತರ ವೆಂಕಟೇಶ್ವರ ಭಕ್ತಮಂಡಳಿಯ ವತಿಯಿಂದ ಮುದ್ದು ಮಕ್ಕಳಿಗೆ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಲಲುದಾಸ್ ಮಹಾರಾಜರು (ಅರ್ಚಕರು) ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಸದಸ್ಯ ಶ್ರೀ ಗಂಗಾಧರ್ ಬೋಸಲೇ ವಿಶ್ವ ಹಿಂದೂ ಪರಿಷತ್ ತಾಲೂಕಾ ಅಧ್ಯಕ್ಷರು ಶ್ರೀ ಪ್ರಕಾಶ್ ಸುಳಿಭಾವಿ ಪುರುಷೋತ್ತಮ್ ಲಾಹೋಟಿ ಸಿದ್ದು ಹುಗ್ಗಿ ಸಂಜು ಕುಲಕರ್ಣಿ ಬಾಳು ರಾಟಿ ಗಣಪತಿ ಬಟಕುರ್ಕಿ ಮೋಹನ್ ವಾಳಿ ರಾಮಣ್ಣ ಗಂಟಿ ದುರ್ಗಪ್ಪ ತೇರದಾಳ ಮುರಳಿ ಹಂಪಿಹೊಳಿ ಎಚ್ಚರಪ್ಪಾ ಕಲಾಲ್ ದಿನೇಶ್ ದರಕ್ ಅರುಣ್ ಬಾಳಿಕಾಯಿ ಮನೋಜ್ ಕಾಂಕಾನಿ ಇನ್ನು ಮುಂತಾದವರು ಉಪಸ್ಥಿತರಿದ್ದರು

ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಪುಂಡಲೀಕ್ ನಡಗಡ್ಡಿ ಅವರು ನೆರೆವೇರಿಸಿದರು.

About The Author