ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು, ಬೆಳಗಾವಿ ನಗರದ ಜಿಲ್ಲಾ ಔಷಧ ಉಗ್ರಾಣಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಉಗ್ರಾಣದ ಸ್ಟೊರ್ ಹಾಗೂ ಸಿಬ್ಬಂದಿಗಳ ಹಾಜರಾತಿ ಬಗ್ಗೆ ಮಾಹಿತಿ, ಔಷಧ ತಂತ್ರಾಂಶದ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗಿದೆ ಪರಿಶೀಲನೆ ನಡೆಸಿದರು. ಬೆಳಗಾವಿ ಆರೋಗ್ಯ ಸಂಸ್ಥೆಗಳ ಔಷಧಿಗಳ ಸರಬರಾಜಿನ ಬಗ್ಗೆ ಆರೋಗ್ಯ ಸಂಸ್ಥೆಗಳ ಬೇಡಿಕೆಗೆ ಅನುಗುಣವಾಗಿ ಸರಬರಾಜು ಆಗುತ್ತಿರುವ ಕುರಿತು ಪರಿಶೀಲನೆ. ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳ ರೋಗಿಗಳ ಸಂಖ್ಯೆಯು ಒಂದೇ ವೈದ್ಯಕೀಯ ರೋಗಿಗಳ ಸಂಖ್ಯೆ ಮತ್ತು ಅನುಗುಣವಾಗಿ ಆರೋಗ್ಯ ಸಂಸ್ಥೆಗಳ ಅವಶ್ಯಕತೆಗನುಗುಣವಾಗಿ ವಿತರಿಸಲು ಪ್ರಭಾರಧಾರಕರಿಗೆ ನಿರ್ದೇಶನ ನೀಡಲಾಗಿದೆ. ಔಷಧಗಳ ಅವಧಿ ಮೀರದಂತೆ ನಿಗಾವಹಿಸುವುದು ಹಾಗೂ ಅವಧಿ ಮೀರಿದ ಔಷಧಗಳನ್ನು ಬಳಸಲು ವಿಲೇವಾರಿ ಮಾಡಲು ಕ್ರಮ ವಹಿಸಲು ಪ್ರಕಟಣೆ. ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಸ್ಥಳೀಯವಾಗಿ ಖರೀದಿಸಿದ ಔಷಧಿಗಳನ್ನು ಇ-ಔಷಧ ತಂತ್ರಾಂಶದಲ್ಲಿ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಬಸವರಾಜ ಅಡವಿಮಠ, ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ: ಐ.ಪಿ.ಗಡದ್, ಜಿಲ್ಲಾ ಔಷಧ ಉಗ್ರಾಣದ ಪ್ರಭಾರಧಾರಕ ಶಿವಾನಂದ ಸೊಂಟಕ್ಕಿ ಹಾಗೂ ಉಗ್ರಾಣದ ಸಿಬ್ಬಂದಿಗಳು.
ಬೆಳಗಾವಿ ಜಿಲ್ಲಾ ಉಗ್ರಾಣಕ್ಕೆ ದಿಢೀರ ಭೇಟಿ ನೀಡಿದ : ಜಿಪಂ ಸಿಇಒ ರಾಹುಲ್ ಶಿಂಧೆ

WhatsApp Group
Join Now


