ಗುತ್ತಿಗೆದಾರನ ಬೇಜವಾಬ್ದಾರಿತನ ಕೆಸರು ಗದ್ದೆಯಾದ ಮುಖ್ಯ ರಸ್ತೆ! ವಾಹನ ಸವಾರರ ನಿತ್ಯ ಪರದಾಟ

WhatsApp Group Join Now

ಛೇ. ಇದೇನು ರಸ್ತೆ. ಎಲ್ಲೆಂದರಲ್ಲಿ ತುಂಬಿದ ಕೆಸರು ರಾಡಿ ರಸ್ತೆಗಳು. ಸಂಪೂರ್ಣ ಹಾಳಾದ ಮುಖ್ಯ ರಸ್ತೆಗಳು. ಜನ ಸಂಚಾರ ಹಾಗೂ ವಾಹನ ಸವಾರರಿಗೆ ಸಂಕಷ್ಟ

ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್ ಪಾಟೀಲ ಅವರು ಇತ್ತ ಕಡೆ ಗಮನ ಹರಿಸಿ ರಸ್ತೆ ಸುಧಾರಣೆ ಮಾಡಿ ರೈತರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿ ಕೊಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರುದಿಂದ ರೋಣ ವರೆಗೆ ಮುಖ್ಯ ರಸ್ತೆ ಇದೆ ಅದರಲ್ಲಿ ಹುನಗುಂಡಿ ಕ್ರಾಸದಿಂದ ಕುರಹಟ್ಟಿ ಹೋಗುವ ರಸ್ತೆ ಮಧ್ಯದಲ್ಲಿರುವ 3 ಕಿ.ಮೀ ವರಿಗೆ ಲೋಕೋಪಯೋಗಿ ಇಲಾಖೆಯಿಂದ ಹೊಸ ರಸ್ತೆ ನಿರ್ಮಾಣ ಮಾಡುತ್ತಿದ್ದು ಗುತ್ತಿಗೆದಾರಣ ಬೇಜವಾಬ್ದಾರಿತನದಿಂದ ರಸ್ತೆ ಸಂಪೂರ್ಣ ಅದಿಗೆಟ್ಟು ರಸ್ತೆ ತುಂಬೆಲ್ಲ ಕೆಸರು ನಿಂತು ರೈತರು ಹಾಗೂ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಿದೆ ಗ್ರಾಮದ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ರೈತರು ತಮ್ಮ ಜಮೀನುಗಳಿಗೆ ಹೋಗಲು ದ್ವಿಚಕ್ರ ಸೇರಿದಂತೆ ಹಲವು ವಾಹನಗಳ ಎಷ್ಟೋ ಬಾರಿ ಆಯತಪ್ಪಿ ಬಿದ್ದಿರುವ ಘಟನೆಗಳು ಕೂಡ ನಡೆದಿವೆ ಎಂದು ಈ ಗ್ರಾಮದ ನಿವಾಸಿಗಳು ಹೇಳುತ್ತಿದ್ದಾರೆ.
ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟಬುತ್ತಿಯಾಗಿದೆ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿವೆ. ಇದು ದ್ವಿಚಕ್ರ ಸೇರಿದಂತೆ ಆಟೊ, ಕಾರು, ಬೈಕ್, ಟ್ರ್ಯಾಕ್ಟರ್, ರೈತರ ಎತ್ತಿನ ಬಂಡಿ ಸೇರಿದಂತೆ ಹಲವು ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ.
ವಾಹನ ಸವಾರರಿಗೆ ಏನಾದರೂ ಅನಾಹುತವಾದರೆ ಇದಕ್ಕೆ ಯಾರು ಹೊಣೆಗಾರರು ಲೋಕೋಪಯೋಗಿ ಇಲಾಖೆನ ಅಥವಾ ಗುತ್ತಿಗೆದಾರರ ಅಥವಾ ಶಾಸಕರು ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ ?
ಆದಷ್ಟು ಬೇಗ ರಸ್ತೆಯನ್ನು ಸುಧಾರಣೆ ಮಾಡಿ ರೈತರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು

About The Author