12 August 2026
Advertisement
ರಾಜ್ಯ

ಹೊಸಕೋಟಿ ವಲಯದ ಸಾಲಾಪುರ ಗ್ರಾಮದಲ್ಲಿ ಪೋಷಣ ಮಾಸ ಕಾರ್ಯಕ್ರಮ.

WhatsApp Group Join Now

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆಯಿಂದ ರಕ್ತ ಹೀನತೆ ತಡೆಗಟ್ಟಬಹುದು ಆರೋಗ್ಯವಂತ ಮಗು ಜನನವಾಗುತ್ತದೆ ಎಂದು ಪ್ರಾಸ್ತಾವಿಕ ಮಾತನಾಡಿದರು.

ಗರ್ಭಿಣಿಯರಿಗೆ ಸೀಮಂತ,ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ಅಂಗನವಾಡಿ ಮಕ್ಕಳಿಂದ ವಿವಿಧ ವೇಷಭೂಷಣ ಕಾರ್ಯಕ್ರಮ ಮಕ್ಕಳಿಂದ ಲಂಬಾಣಿ ನೃತ್ಯ ಮಾಡಿಸಲಾಯಿತು.ಪೌಷ್ಠಿಕ ಆಹಾರ ಪ್ರದರ್ಶನ ಮಾಡಲಾಯಿತು.

ಸಾಲಾಪುರ ಗ್ರಾಮ ಪಂಚಾಯತ ಅಧ್ಯಕ್ಷರು ಲಾಲಪ್ಪ ಲಮಾಣಿ,ಸದಸ್ಯರಾದ ದುಂಡಪ್ಪ ದೇವರೆಡ್ಡಿ,ಅನಿಲ್ ಚಾಕಲಬ್ಬಿ, ಆನಂದ್ ಕ್ವಾರಿ, ಕೃಷ್ಣ ಬಂಡಿ ವಡ್ಡರ್,ನಿಂಗಪ್ಪ ಅವರಾದಿ, ಯಲ್ಲವ್ವ ಯರಗಟ್ಟಿ,ರುಕ್ಮವ್ವ ಸುನಗದ, ಲಕ್ಷ್ಮಿ ಮೈಮನ್ನವರ್, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶಂಕರ್ ಕುಂಬಾರ್,ಎಸಿಡಿಪಿಒ ವಿಠ್ಠಲ್ ಸಜ್ಜನ್, ಜಿಲ್ಲಾ ಕಚೇರಿಯಿಂದ ಬಂದಂತಹ ಜಯಶ್ರೀ ಚಿಚಡಿ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು,ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದವರು, ತಾಯಂದಿರು,ಊರಿನ ನಾಗರಿಕರು ಹಾಜರಿದ್ದರು. ಕಾರ್ಯಕ್ರಮವನ್ನು ಎ ಎಸ್ ಗಾಣಗಿ ನಿರೂಪಿಸಿದರು, ಮುಕ್ತಾ ಜಂಬಾಳೆ ಮೇಲ್ವಿಚಾರಕಿ ವಂದನಾರ್ಪಣೆ ಮಾಡಿದರು.

About The Author