ಅಕ್ರಮವಾಗಿ ಸಾಗಿಸುತ್ತಿದ್ದ 4,750 ಕೆಜಿ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

WhatsApp Group Join Now

ಪಡಿತರ ಅಕ್ಕಿ ಅಕ್ರಮ ಸಾಗಣೆ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿತಹಸೀಲ್ದಾರ್ ಎಂ.ಎಸ್ .ತನ್ಮಯ್ ಸೂಚನೆಯಂತೆ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು.

ಗುಂಡ್ಲುಪೇಟೆ ಪಟ್ಟಣದ ಹಳ್ಳದಕೇರಿ ಬಳಿ ಸರಕು ಸಾಗಣೆ ವಾಹನವನ್ನು ಪರಿಶೀಲಿಸುವ ಸಲುವಾಗಿ ತಡೆಯಲಾಯಿತು. ಈ ವೇಳೆ ಚಾಲಕ ಸರಕು ತುಂಬಿದ್ದ ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾದ. ಬಳಿಕ ಪರಿಶೀಲನೆ ನಡೆಸಿದಾಗ ವಾಹನದಲ್ಲಿ 4,750 ಕೆಜಿ ಪಡಿತರ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲದಲ್ಲಿತುಂಬಿ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು.

ನಂತರ ವಾಹನ ಸಹಿತ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಯಿತು. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ ಎಂದು ಆಹಾರ ಇಲಾಖೆ ಶಿರಸ್ತೇದಾರ್ ಅರವಿಂದ್ ತಿಳಿಸಿದ್ದಾರೆ.

ಈ ವೇಳೆ ಆಹಾರ ನಿರೀಕ್ಷಕಿ ಪೂರ್ಣಿಮಾ, ಎಎಸ್ ಐ ವೆಂಕಟೇಶ್ ಮೂರ್ತಿ, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ದೇವರಹಳ್ಳಿಕಾಳಪ್ಪ, ಕೃಷ್ಣ ಹಾಜರಿದ್ದರು.

About The Author