ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಸಂಘಕ್ಕೆ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ಯಾದವಾಡ ನೇಮಕ

WhatsApp Group Join Now

ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಕಾರ್ಯನಿರತರ ಸಂಘದ ಪದಾಧಿಕಾರಿಗಳ ಸಭೆಯು ಗುರುವಾರ ಬಾಗಲಕೋಟ ನಗರದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಜರುಗಿತು.

ಸಭೆಯಲ್ಲಿ ಸಂಘದ ಸರ್ವ ಪದಾಧಿಕಾರಿಗಳು ಸೇರಿ ಒಮ್ಮತದಿಂದ ಪತ್ರಕರ್ತ ಎಂ ಕೆ ಯಾದವಾಡ ಅವರನ್ನು ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಕಾರ್ಯನಿರತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಂ ಕೆ ಯಾದವಾಡ ಅವರಿಗೆ ಸನ್ಮಾನಿಸುವ ಮೂಲಕ ಸಂಘದಲ್ಲಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಕಾರ್ಯನಿರತರ ಸಂಘದ ರಾಜ್ಯಾಧ್ಯಕ್ಷರಾದ ಮಶಾಕ್ ಸಂತೆಶಿರೂರ ಅವರು ಮಾತನಾಡಿ “ ಇವತ್ತು ನಾವೆಲ್ಲರೂ ಸೇರಿ ಎಂ ಕೆ ಯಾದವಾಡ ಅವರನ್ನು ನಮ್ಮ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದೇವೆ. ಅವರನ್ನು ನಮ್ಮ ಸಂಘಕ್ಕೆ ಸ್ವಾಗತಿಸುತ್ತೇವೆ. ಇವತ್ತು ಎಲ್ಲ ಡಿಜಿಟಲ್ ಮಿಡಿಯಾ ಪತ್ರಕರ್ತರು ಸಂಘಟಿತರಾಗುವ ಅವಶ್ಯಕತೆ ಇದೆ. ನಾವು ಸಂಘಟಿತರಾದರೆ ಸರ್ಕಾರಕ್ಕೆ ಒತ್ತಾಯಿಸಿ ಪತ್ರಕರ್ತರಿಗೆ ಇನ್ಸೂರೆನ್ಸ್,ಉಚಿತ ಬಸ್ ಪಾಸ್, ನೀವೆಶನ ದಂತಹ ಯೋಜನೆಗಳನ್ನು ಜಾರಿ ಮಾಡಿಸಬಹುದು. ಈ ಕುರಿತು ನಮ್ಮ ಸಂಘಟನೆಯಿಂದ ಕೂಡ ಸರ್ಕಾರಕ್ಕೆ ಒತ್ತಾಯಿಸಲಾಗುವುದು” ಎಂದರು.

ನಂತರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಎಂ ಕೆ ಯಾದವಾಡ ಅವರು ಮಾತನಾಡಿ “ ನಾನು ಮಾಡಿದ ಸಮಾಜ ಸೇವೆ ಹಾಗೂ ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಇವತ್ತು ನನಗೆ ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಕಾರ್ಯನಿರತರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಇದಕ್ಕೆ ಎಲ್ಲರಿಗೂ ಧನ್ಯವಾದಗಳು. ಮತ್ತು ಎಲ್ಲ ಯೂಟ್ಯೂಬ್ ಚಾನಲ್, ಡಿಜಿಟಲ್ ಮಿಡಿಯಾ ಹಾಗೂ ಪತ್ರಿಕೆಗಳ ಪತ್ರಕರ್ತರು ನಮ್ಮ ಸಂಘದ ಸದಸ್ಯತ್ವವನ್ನು ಪಡೆದು ಸಂಘಟನೆಯನ್ನು ಬಲಗೊಳಿಸಬೇಕು ಮತ್ತು ಸಂಘಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಮೈನುದ್ದಿನ ರಂಗಾಪೂರ, ಗೌರವಾಧ್ಯಕ್ಷ ಮಿಯಾಖಾನ ಪಠಾಣ, ರಾಜ್ಯಾಧ್ಯಕ್ಷ ಮಶಾಕ ಸಂತೆಶಿರೂರ, ಉಪಾಧ್ಯಕ್ಷ ಮಹಾಂತೇಶ ಚೌಹಾಣ್,ರಾಜ್ಯ ಪ್ರದಾನ ಕಾರ್ಯದರ್ಶಿ ಎಂ ಕೆ ಯಾದವಾಡ, ರಾಜ್ಯ ಖಜಾಂಚಿ ಫಯಾಜ್ ತೇಲಿ, ಸಹ ಕಾರ್ಯದರ್ಶಿ ಕಲೀಂ ಮುಲ್ಲಾ ರೋಣ, ಕಾರ್ಯದರ್ಶಿ ಅನ್ವರ ಅಲಿ ಕೊಣ್ಣೂರ, ರಾಮದುರ್ಗ ತಾಲೂಕಾ ಅಧ್ಯಕ್ಷರಾದ ಅಫ್ತಾಬ ಸರಮುಲ್ಲಾ, ಸದಸ್ಯರಾದ ಖಾಜಾಮಿನ ಜಮಾದಾರ, ತೌಸೀಫ ಕೆರೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About The Author