ಪ್ರತಿ ಶಾಲೆಯ ಕಟ್ಟಕಡೆಯ ವಿದ್ಯಾರ್ಥಿ ಉತ್ತಮ ಶಿಕ್ಷಣ ಮತ್ತು ಫಲಿತಾಂಶ ಪಡೆಯುವುದು ಪ್ರತಿ ಶಾಲೆಯ ಮತ್ತು ಪ್ರತಿ ಶಿಕ್ಷಕರ ಉದ್ದೇಶವಾಗಿರಬೇಕು.ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಆಧರಿಸಿ ವಿಶೇಷ ಕ್ರಿಯಾ ಯೋಜನೆ ತಯಾರಿಸಿ ಬೋಧನೆ ಕೈಗೊಂಡಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ನೂರಕ್ಕೆ ನೂರು ಸಾಧಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ ಎ ಖಾಜಿ ರವರು ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರೌಢಶಾಲೆ ಕಗಧಾಳಕ್ಕೆ ಆಕಸ್ಮಿಕ ಸಂದರ್ಶನ ನೀಡಿದ ಸಂದರ್ಭದಲ್ಲಿ ಶಾಲೆಯ ವತಿಯಿಂದ ಮಾಡಲಾದ ಸನ್ಮಾನ ಸ್ವೀಕರಿಸಿ ಮೇಲಿನಂತೆ ಹೇಳಿದರು.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಫಲಿತಾಂಶ ಉತ್ತಮ ಪಡಿಸಲು ಮಾರ್ಗದರ್ಶನ ಮಾಡಿದರು.”ಶನಿವಾರ ಸಂಭ್ರಮ” ನಿಮಿತ್ತ ಹಮ್ಮಿಕೊಂಡಿದ್ದ “ಸಾರ್ವಜನಿಕ ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತುಗಳ ನಿರ್ವಹಣೆ “ಕಾರ್ಯಕ್ರಮದ ಮಹತ್ವದ ಕುರಿತು ಇದೇ ಸಂದರ್ಭದಲ್ಲಿ ಜಾಗೃತಿ ಮೂಡಿಸಲಾಯಿತು.ಶಾಲೆಯ ಸ್ವಚ್ಛತೆ ಮತ್ತು ಶಿಸ್ತು ಗಮನಿಸಿ ಪ್ರಶಂಸಿಸಿದರು.ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಮಾತನಾಡಿ ಶಾಲಾ ಮಕ್ಕಳ ಗುಣಾತ್ಮಕ ಕಲಿಕೆಗೆ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಪ್ರಯತ್ನಿಸುತ್ತಿರುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಬಿ ಆರ್ ಪಿ ಎಂ ಎನ್ ಕರಡಿಗುಡ್ಡ, ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಸಂತೋಷ ನಿಂಗ ರಡ್ಡಿ,ಶಿಕ್ಷಕರಾದ ಬಿ ಜಿ ಪಾಟೀಲ,ಜೆ ಕೆ ಪಾಟೀಲ್,ಎಸ್ ವ್ಹಿ ಶೆಟ್ಟರ್,ಬಿ ಎಚ್ ನದಾಫ, ಎಚ್ ಎನ್ ಯಡ್ರಾಂವಿ,ಬಿ ಎಸ್ ಜೋತೆನ್ನವರ ಹಾಗೂ ಇತರರು ಉಪಸ್ಥಿತರಿದ್ದರು. ಡಿ ಬಿ ಕೊಡ್ಲಿ ನಿರೂಪಿಸಿದರು .



