ಬೆಳಗಾವಿ: ಲೋಕಾಪುರದಿಂದ ಧಾರವಾಡಕ್ಕೆ ನೂತನ ರೈಲು ಮಾರ್ಗಕ್ಕಾಗಿ 2019 ರಲ್ಲಿ ನಡೆದ ಸಮೀಕ್ಷೆಯ ವರದಿಯಲ್ಲಿ ಕೆಲವು ಅಂಕಿಸಂಖ್ಯೆಗಳ ವ್ಯತ್ಯಾಸದಿಂದ ಈ ಯೋಜನೆಗೆ ತಡೆ ನೀಡಲಾಗಿತ್ತು. ಈಗ ಮತ್ತೇ ಈ ಯೋಜನೆ ಅನುಷ್ಠಾನಕ್ಕೆ ಬರುವುದು ನಿಶ್ಚಿತ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿದರು.
ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರುಗಳ ನಿಯೋಗವು ರವಿವಾರ ಸಂಸದ ಜಗದೀಶ್ ಶೆಟ್ಟರಿಗೆ ಅವರ ಕಾಡಾ ಕಚೇರಿಯಲ್ಲಿ ಭೇಟಿ ಮಾಡಿ ಲೋಕಾಪುರದಿಂದ ಧಾರವಾಡ ನೂತನ ರೈಲು ಮಾರ್ಗದ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರಿಗೆ ಒತ್ತಾಯಿಸ ಬೇಕೆಂದು ಸಂಸದರಿಗೆ ಮನವಿ ಸಲ್ಲಿಸಿದರು.
ಲೋಕಾಪುರದಿಂದ ಧಾರವಾಡ ರೈಲು ಮಾರ್ಗದ ನಡುವೆ ಅನೇಕ ಐತಿಹಾಸಿಕ ಧಾರ್ಮಿಕ ಕೇಂದ್ರಗಳು,ಕಾರ್ಖಾನೆಗಳಿವೆ. ಇಲ್ಲಿ ವರ್ಷಪೂರ್ತಿ ಬೇರೆ ಬೇರೆ ರಾಜ್ಯಗಳಿಂದ ಕೋಟ್ಯಂತರ ಭಕ್ತರು, ವಿದ್ಯಾರ್ಥಿಗಳು, ರೈತರು ಬರುತ್ತಾರೆ. ಇವರೆಲ್ಲರ ಅನುಕೂಲಕ್ಕಾಗಿ ಲೋಕಾಪುರದಿಂದ ಧಾರವಾಡ ನೂತನ ರೈಲು ಮಾರ್ಗ ಆಗಬೇಕೆಂದು ಕಳೆದ 20 ವರ್ಷಗಳಿಂದ ಕನಸನ್ನು ಇಟ್ಟುಕೊಂಡು ಒತ್ತಾಯಿಸುತ್ತ ಬರಲಾಗಿದೆ.
ನಮ್ಮ ರಾಮದುರ್ಗ ರೈಲು ಹೋರಾಟ ಕ್ರಿಯಾ ಸಮಿತಿಯಿಂದ ತಮಗೆ ಮಾಡಿದ ಮನವಿ ಮೇರೆಗೆ ಈಗಾಗಲೇ ತಾವು ಈ ಯೋಜನೆಯ ಅವಶ್ಯಕತೆ ಹಾಗೂ ಅನುಕೂಲದ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿದ್ದರಿಂದ ಸಚಿವರು ತಮಗೆ ಇಲಾಖೆಯಿಂದ ಪ್ರಸತಾವನೆ ಕಲಿಸಲು ತಾವು ಅಧಿಕಾರಿಗಳ ಜೊತೆ ಮಾತನಾಡಿಯಂದು ಪತ್ರ ಬರೆದಿದ್ದಾರೆ. ಆದ್ದರಿಂದ ತಾವು ಲೋಕಾಪುರದಿಂದ ಧಾರವಾಡ ರೈಲ್ವೆ ಮಾರ್ಗ ಯೋಜನೆಯ ಪ್ರಸ್ತಾವನೆಯನ್ನು ದೆಹಲಿ ರೈಲ್ವೆ ಬೊರ್ಡಗೆ ಸಲ್ಲಿಸುವಂತೆ ಹುಬ್ಬಳ್ಳಿ ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸ ಬೇಕೆಂದು ನಿಯೋಗವು ಸಂಸದರಿಗೆ ಮನವಿ ಸಲ್ಲಿಸಿತು
ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಅವರು “ ನಾನು ಸಂಸದನಾದ ಮೇಲೆ ಲೋಕಾಪುರದಿಂದ ಧಾರವಾಡ ರೈಲು ಮಾರ್ಗಕ್ಕೆ ಮೊದಲಿ ನಿಂದಲೂ ಒತ್ತಾಯಿಸುತ್ತ ಬಂದಿದ್ದೇನೆ. ಈ ಯೋಜನೆಗೆ 2019ರಲ್ಲಿ ನಡೆದ ಸಮೀಕ್ಷೆಯ ವರದಿಯಲ್ಲಿ ಕೆಲವು ಅಂಕಿಸಂಖ್ಯೆಗಳ ವ್ಯತ್ಯಾಸದಿಂದ ಯೋಜನೆಗೆ ಹಿನ್ನಡೆಯಾಗಿತ್ತು. ಆದ್ದರಿಂದ ಮರುಸಮೀಕ್ಷೆಯಾಗಿ ಸರಿಯಾದ ಅಂಕಿಸಂಖ್ಯೆಗಳು ರೈಲ್ವೆ ಮಂತ್ರಿ ಮತ್ತು ದೆಹಲಿ ರೈಲ್ವೆ ಬೊರ್ಡಗೆ ತಲುಪಿದರೆ ಲೋಕಾಪುರದಿಂದ ಧಾರವಾಡಕ್ಕೆ ರೈಲು ಮಾರ್ಗ ಬರುವುದು ಖಚಿತ.
ಅದರ ಜತೆಗೆ ಹೋರಾಟ ಮಾಡುವುದು ಜನರ ಹಕ್ಕು ಆದ್ದರಿಂದ ರಾಮದುರ್ಗ ರೈಲು ಹೋರಾಟ ಸಮಿತಿಯವರು ತಮ್ಮ ಹೋರಾಟಗಳ ಮುಖಾಂತರ ಒತ್ತಡ ತರಬಹುದು ಅದರ ಜತೆ ನಾನು ಕೂಡ ಸಂಸದನಾಗಿ ಕೇಂದ್ರ ಸಚಿವರ ಮೇಲೆ ಒತ್ತಡ ತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.
ಕೇಂದ್ರ ರೈಲ್ವೆ ಮಂತ್ರಿಗಳ ಹತ್ತಿರ ನೀಯೋಗ ಒಯ್ಯುವ ಅವಶ್ಯಕತೆ ಸದ್ಯಕ್ಕಿಲ್ಲ. ಸಂಧರ್ಭ ಬಂದರೆ ನಾನೇ ರೈಲ್ವೆ ಮಂತ್ರಿಗಳ ಕಡೆ ನಿಯೋಗವನ್ನು ಕರೆದೊಯ್ಯುತ್ತೇನೆ” ಎಂದು ತಿಳಿಸಿದರು.
ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಮುಖಂಡರುಗಳಾದ ಗೈಬು ಜೈನೆಖಾನ, ಪ್ರೊಪೋಸರ್ S G ಚಿಕ್ಕನರಗುಂದ, ಚಂದ್ರು ಮಾಳದಕರ್, ಶಶಿಕಾಂತ್ ನೆಲ್ಲೋರ್, A A ಪಠಾಣ,ಎಂ ಕೆ ಯಾದವಾಡ, ದಾದಾಪೀರ ಕೆರೂರ, ಮಹಮ್ಮದ್ ಶಫಿ ಬೆಣ್ಣಿ ನಿಯೋಗದಲ್ಲಿದ್ದರು.



