ಸವದತ್ತಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣವನ್ನು ಶಾಸಕ ವಿಶ್ವಾಸ ವೈದ್ಯ ನೆರವೇರಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ತಾಲೂಕಾಡಳಿತದ ವತಿಯಿಂದ, ಕೆ.ಎಲ್.ಐ. ಸಂಸ್ಥೆಯ ಎಸ್.ಕೆ. ಪ್ರೌಢ ಶಾಲಾ ಮೈದಾನದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣವನ್ನು ಶಾಸಕ ವಿಶ್ವಾಸ ವೈದ್ಯ ಅವರು ನೆರವೇರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ.

ಈ ವೇಳೆ ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡದ ಪರಂಪರೆ ಮತ್ತು ಏಕೀಕರಣವನ್ನು ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ನಾಡಗೀತೆ, ಜಾನಪದ ನೃತ್ಯ ಎಲ್ಲರ ಮನಸೂರೆಗೊಂಡವು. ಈ ಮೂಲಕ ಕನ್ನಡದ ಗೌರವ ಮತ್ತು ಏಕತೆಯ ಸಂದೇಶವನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಸಾರಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ತಾಲೂಕಿನ ಪ್ರಮುಖ ಸಾಧಕರಿಗೆ ಮತ್ತು ಕನ್ನಡಪರ ಹೋರಾಟಗಾರರಿಗೆ ಈ ವೇದಿಕೆಯ ಮೇಲೆ ರಾಜ್ಯೋತ್ಸವದ ಗೌರವ ಸನ್ಮಾನ ಮಾಡಲಾಯಿತು.

ಈ ವೇಳೆ ತಾಲೂಕಆಡಳಿತ ಅಧಿಕಾರಿಗಳು, ಸ್ಥಳೀಯ ಮುಖಂಡರು, ಪುರಸಭೆ ಅಧ್ಯಕ್ಷರು, ಸದಸ್ಯರು, ಎಪಿಎಂಸಿ ಅಧ್ಯಕ್ಷರು,ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author