ರಾಮದುರ್ಗ: 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಲ್ಲಿರುವ ಗುರುಭವನದಲ್ಲಿ ತಾಲೂಕಾ ಆಡಳಿತ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಜ್ಯೋತಿ ಬೆಳಗಿಸೋದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಶಾಲೆಗಳಲ್ಲಿಂದು ಮಕ್ಕಳ ಕಲಿಕೆಯ ಸಂಖ್ಯೆ ಕಡಿಮೆಯಾಗುತ್ತಿದೆ. ಕಾಲ ಕಾಲಕ್ಕೆ ತಕ್ಕಂತೆ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕಾರ್ಯಕ್ರಮ ಜಾರಿಗೆ ತಂದರು ಪರಿಣಾಮಕಾರಿ ಶಿಕ್ಷಣ ಸುಧಾರಣೆಯಾಗುತ್ತಿಲ್ಲ. ಕನ್ನಡ ಶಾಲೆಯ ಶಿಕ್ಷಕರು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಮಕ್ಕಳಿಗೆ ಶಿಕ್ಷಣ ನೀಡಬೇಕು. ಅಂದರೆ ಮಾತ್ರ ಕನ್ನಡ ಶಾಲೆಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಇದಕ್ಕೆ ಇಲಾಖೆಯ ಪಾತ್ರ ಮುಖ್ಯವಾಗಿದೆ ಎಂದರು.
ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಮೊಬೈಲ ಬಳಕೆಯನ್ನು ಕಡಿಮೆ ಮಾಡಬೇಕು. ಶಾಲೆಯಲ್ಲಿ ನಿತ್ಯ ಹೋಮ್ ವರ್ಕಗಳನ್ನು ವಾಟ್ಸಪ್ ಗಳಿಗೆ ಕಳಿಸುತ್ತಾರೆ ಇದರಿಂದ ನಿತ್ಯ ಮಕ್ಕಳಲ್ಲಿ ಮೋಬೈಲ ಬಳಕೆ ಹೆಚ್ಚಾದಂತೆ, ಬಾಲ್ಯದಲ್ಲಿಯೇ ಮಕ್ಕಳು ಕನ್ನಡಕ ಧರಿಸಿಕೊಂಡು ಬರುತ್ತಾರೆ. ಇದರಿಂದ ಕಣ್ಣಿನ ದೃಷ್ಟಿದೋಷ ಬರುತ್ತಿದೆ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಶಿಕ್ಷಕರು ಈ ಪದ್ದತಿ ಬಿಡಬೇಕು ಎಂದು ಸಲಹೆ ನೀಡಿದರು.
ಯಾದವಾಡ ಬಿ.ಎನ್.ಎಸ್. ಪ.ಪೂ ಕಾಲೇಜಿನ ಉಪನ್ಯಾಸಕಿ ಪ್ರಭಾವತಿ ಕಣವಿ ಕನ್ನಡ ರಾಜ್ಯೋತ್ಸವ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾಲೂಕ ಪಂಚಾಯತ್ ಇಒ ಬಸವರಾಜ ಐನಾಪೂರ, ಡಿವೈಎಸ್ಪಿ ಚಿದಂಬರ ಮಡಿವಾಳರ, ಬಿಇಓ ಎಸ್. ಆರ್. ಕಾಂಬಳೆ, ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ, ತಾಲೂಕಾ ಮಟ್ಟದ ಅಧಿಕಾರಿ ಶಂಕರ ಕುಂಬಾರ, ಪಿ.ಜೆ. ಸತ್ತಿಗೇರಿ. ಎಸ್.ಸಿ. ಮಠ, ರಾಜಶೇಖರ ಹಿರೇಮಠ, ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು, ವಿವಿಧ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಎಸ್.ಐ. ಛಾಯಪ್ಪಗೋಳ ಸ್ವಾಗತಿಸಿದರು.

About The Author