ಸುರೇಬಾನ ಟ್ಯಾಕ್ಟರ್ ಮೂಲಕ ಅಕ್ರಮ ಮರಳು ಸಾಗಾಟ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ
ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ತಡೆಯಬೇಕಿದ್ದ ಅಧಿಕಾರಿಗಳು ಮಾತ್ರ ಇಲ್ಲಿ
ಏನು ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನದ ಪ್ರದರ್ಶನ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಮರಳು ದಂಧೆಕೋರರಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳಿಂದಲೇ ದಂಧೆಕೋರರಿಗೆ ಸಾಥ್ ಸಿಗುತ್ತಿದೆಯೋ ?
ಸುರೇಬಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಗಳು ರಾಜಾರೋಷವಾಗಿ ಹಾದು ಹೋಗುತ್ತಿವೆ.
ಅಕ್ರಮ ಮರಳು ದಂಧೆ ರಾಜಾರೋಷವಾಗಿ ಸುರೇಬಾನ, ಕಿತ್ತೂರು, ಜಾಲಿಕಟ್ಟಿ, ಕಲ್ಲೂರು, ಮುಳ್ಳೂರು ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಹಳ್ಳದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ಸುರೇಬಾನ ಸಮೀಪದ ಕಿತ್ತೂರು ಗ್ರಾಮದ ಗದಿಗೆಪ್ಪ ಭಜಂತ್ರಿ ಅವರ ಅಕ್ರಮ ಮರಳನ್ನು ಟ್ಯಾಕ್ಟರ್ ಮೂಲಕ ಸಾಗಿಸುವುದಲ್ಲದೆ ಅಕ್ರಮ ಮರಳಿನ ಬಗ್ಗೆ ಮಾಧ್ಯಮದವರು ವಿಡಿಯೋ ಮಾಡಿದರೆ ನೀ ಯಾರು ನನ್ನ ಗಾಡಿ ಫೋಟೋ ತೆಗೆಯೋದಕ್ಕೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಇವನ ಮೇಲೆ ಆದಷ್ಟು ಕಾನೂನಿನ ರೀತಿ ಕ್ರಮ ಜರಗಿಸಬೇಕು.

About The Author