ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಠ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಲೀಜ್ ಪಡೆದ ಪ್ಯಾರಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಪಿ ಶಿವಸುಬ್ರಮನಿಯನ್ ಅವರಿಗೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು 1 ಟನ್ನ ಕಬ್ಬಿಗೆ ಸರಕಾರದ ಘೋಷಿಸಿದ ಆದೇಶದ ದರದಂತೆ ಹೆಚ್ಚುವರಿ ಹಣವನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈಗಗಾಲೇ ಇಂಚಗೇರಿ ಮಠಧ ಶ್ರೀ ಶಶಿಕಾಂತ ಗುರುಗಳ ನೇತೃತ್ವದಲ್ಲಿ ಗುರ್ಲಾಪೂರ ಕ್ರಾಸ್‌ನಲ್ಲಿ ನಡೆಸಿದ ಪ್ರತಿಭಟನೆಗೆ ಸ್ಪಂದಿಸಿದ ರಾಜ್ಯ ಸರಕಾರ 1 ಟನ್ನ ಕಬ್ಬಿಗೆ ರೂ. 3300 ನೀಡಲು ಆದೇಶಿಸಿದೆ. ಆ ನಿಟ್ಟಿನಲ್ಲಿ ಈ ಗಾಗಲೇ ಪ್ಯಾರಿ ಶುಗರ್ಸ್ ನವರು ಟನ್ನ ಕಬ್ಬಿಗೆ ರೂ.3238 ನೀಡಿದ್ದು. ಸರಕಾರದ ಪ್ರೋತ್ಸಾಹ ಧನ ರೂ.50 ಒಳಗೊಂಡು ರೂ.3288 ಆಗಲಿದೆ. ತಾವು ಇನ್ನೂ 12 ರೂಪಾಯಿಗಳನ್ನು ಸೇರಿಸಿ ಸರಕಾರದ ಆದೇಶದಂತೆ ರೂ.3300 ಹಣವನ್ನು ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಅಲ್ಲದೇ ಕಬ್ಬಿನ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಹೆರಿಕೊಂಡು ಬರುತ್ತಿದ್ದು, ಅವುಗಳಿಗೆ ನಿಲ್ಲಲು ಪ್ರತ್ಯೇಕ ಪಾರ್ಕಿಗ್ ಮಾಡಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಧನಲಕ್ಷ್ಮೀ ಆಡಳಿತ ಮಂಡಳಿಗೆ ಹಾಗೂ ಪ್ಯಾರಿ ಶುಗರ್ಸ್ ಆಡಳಿತಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ಯಾರಿ ಶುಗರ್ಸ್ ಉಪಪ್ರಧಾನ ವ್ಯವಸ್ಥಾಪಕ ರಮೇಶ ಗಂಗರಡ್ಡಿ. ವಲಯ ವ್ಯವಸ್ಥಾಪಕ ಕೆ.ಎಚ್. ಬೂದಿ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ದೇಸಾಯಿ. ಉಪಾಧ್ಯಕ್ಷ ಯಲ್ಲಪ್ಪ ದೊಡಮನಿ, ತಾಲೂಕಾಧ್ಯಕ್ಷ ಸುರೇಶ ಗುಂಜೇರಿ. ಗೌರವಾಧ್ಯಕ್ಷ ಮಹಾದೇವ ತ್ಯಾವಟಗಿ, ಉಪಾಧ್ಯಕ್ಷ ಮಂಜು ದೇಸಾಯಿ. ಕಾರ್ಯದರ್ಶಿ ಈರಣ್ಣ ರಾಜನಾಳ, ಮುಖಂಡರಾದ ಭೀಮಶಿ ಕಡ್ಡೆನ್ನವರ, ಬಸು ನಂದೆಪ್ಪನವರ, ಮಾರುತಿ ಮಾದರ. ದ್ಯಾಮಣ್ಣ ಪೊತಣ್ಣವರ, ಕರಿಯಪ್ಪ ಬಸರಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



