WhatsApp Group
Join Now
ಸವತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಎ. ಖಾಜಿ. ನೇತೃತ್ವದಲ್ಲಿ ಮುಖ್ಯ ಶಿಕ್ಷಕರಾದ ಆರ್ ಎಫ್ ಮಾಗಿ, ಶಾಲಾ ಎಸ್‌ಡಿಎಂಸಿಯ ಅಧ್ಯಕ್ಷರಾದ ಸುರೇಶ್ ಕಾಳಪ್ಪನವರ್ ,, ಶಿಕ್ಷಣ ಸಂಯೋಜಕರು ಹಾಗೂ ತಾಲೂಕ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಸುಧೀರ. ವಾಘೇರಿ ,ಎಸ್ ಎಸ್ ಎಲ್ ಸಿ ವರ್ಗದ ಶಿಕ್ಷಕರಾದ ಪ್ರವೀಣ್ ಬನಕಾರ್ , ಶ್ರೀಮತಿ ಚೈತ್ರಾ ಕೆ ಜಿ. ಹಾಗೂ ಶಿಕ್ಷಕರಾದ ಐ ಬಿ ನೇಸರಗಿ , ಉಮೇಶ್ ನರಗುಂದ, ಪ್ರಸನ್ನ ಹೆಗಡೆ ರವರು ಸವದತ್ತಿಯ ಸರಕಾರಿ ಆದರ್ಶ ವಿದ್ಯಾಲಯ ಯಡ್ರಾವಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆಗಳನ್ನು ಹಾಗೂ BCM ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ ಸವದತ್ತಿ ಗೆ ಶಾಲಾ ಅವಧಿಯ ನಂತರ ಭೇಟಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಅಭ್ಯಾಸದ ಸರಳ ವಿಧಾನಗಳು ,ಮನೆ ವೇಳಾ ಪತ್ರಿಕೆ ಅನ್ವಯ ಅಭ್ಯಾಸದ ಕ್ರಮಗಳು, ಕಠಿಣ ಪರಿಶ್ರಮ, ಗುಂಪಿನಲ್ಲಿ ಓದುವಿಕೆ, ಮುಂತಾದ ವಿಷಯಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು.



