ಶಿರಸಂಗಿ : ಶಿಥಿಲಗೊಂಡ ಕಾಲುವೆ ದುರಸ್ತಿಗಾಗಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ.

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ
ಮಲಪ್ರಭಾ ಬಲದಂಡೆ 11ನೇ ಕಿಲೊ ಮಿ 7R ಕಾಲುವೆ ಒಡೆದು ರೈತರಿಗೆ ನೀರು ಬರದೆ ಇದ್ದ ಕಾರಣ ಕಾಲುವೆ ದುರಸ್ತಿಗಾಗಿ ಶಿರಸಂಗಿ ಗ್ರಾಮದ ಲಿಂಗರಾಜ ಸರ್ಕಲ್ ನಲ್ಲಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ ಮಾಡಿದರು.

ಸುಮಾರು ಮೂರು ತಿಂಗಳು ಕಳೆದರೂ ಕೂಡ ಕಾಲುವೆ ದುರಸ್ತಿ ಮಾಡದೆ ಹಾಗೆ ಬಿಟ್ಟಿರುತ್ತಾರೆ ಇದರ ಬಗ್ಗೆ ಸಾಕಷ್ಟು ಬಾರಿ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಇದುವರೆಗೂ ದುರಸ್ತಿ ಮಾಡದೆ ಇರುವ ಕಾರಣ ರಸ್ತೆ ತಡೆದು ರೈತರು ಪ್ರತಿಭಟನೆ ಮಾಡಿದರು.

ಈ ವೇಳೆ ಸವದತ್ತಿ ತಹಸಿಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾಲುವೆ ದುರಸ್ತಿಗಾಗಿ ಮೂರ ರಿಂದ ನಾಲ್ಕು ದಿನದ ಒಳಗಡೆ ಕಾಲಾವಕಾಶ ತೆಗೆದುಕೊಂಡು ಕಾಲುವೆ ದುರಸ್ತಿ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು. ತಹಶೀಲ್ದಾರ್ ನೀಡಿದ ಭರವಸೆಯ ಮೇಲೆ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡರು.

ಈ ಪ್ರತಿಭಟನೆಯಲ್ಲಿ ಪಂಚನಗೌಡ್ರು ದ್ಯಾಮನಗೌಡ. ಹಾಗೂ ಬಸವರಾಜ್ ಕಡಕೋಳ.
ಶಿರಸಂಗಿ, ಕಲ್ಲಾಪುರ ಗ್ರಾಮಗಳ ರೈತ ಮುಖಂಡರು ಎಫ್ಎಂ ಓಬಳಾಪುರ ಮಹಾಂತೇಶ್, ಪಂಚೆನವರ್ ಶಿವಾನಂದ್, ಹರ್ಲಾಪುರ್ ಗದಿಗೆಪ್ಪ ಕುಂಬಾರ್ ಮತ್ತು ಪಿ ಎಸ್ ಐ ಸಾಹೇಬರು. ಸಿ ಪಿ ಐ ಸಾಹೇಬ್ರು ಹಾಗೂ ನೀರಾವರಿ ಇಲಾಖೆಯ ಪಾಂಡುರಂಗ ನಾಯಕ್ ಹಾಗೂ 3 ಗ್ರಾಮಗಳ ರೈತ ಬಾಂಧವರು ಸೇರಿದ್ದರು.

About The Author