12 August 2026
Advertisement
ರಾಜ್ಯ

ಲೋಕಾಪೂರ ದಿಂದ ಧಾರವಾಡ ರೈಲ್ವೆ ಮಾರ್ಗಕ್ಕಾಗಿ ಪೂರ್ವಭಾವಿ ಸಭೆ

WhatsApp Group Join Now

ಬಾಗಲಕೋಟ ಜಿಲ್ಲೆ ಲೋಕಾಪೂರದ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಲೋಕಾಪೂರ ಟು ಧಾರವಾಡ ರೈಲ್ವೆ ಮಾರ್ಗ ಯೋಜನೆಯು ಅನುಷ್ಠಾನಗೊಳ್ಳಲೇ ಬೇಕು. ಇಲ್ಲವಾದರೆ ಜನಾಂದೋಲನದ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ್ ಖಾಜಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಬೇಡಿಕೆಯಾದ ಲೋಕಾಪೂರ ಟು ಧಾರವಾಡ ನೂತನ ರೈಲ್ವೆ ಮಾರ್ಗಕ್ಕಾಗಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಲೋಕಾಪೂರ ಪಟ್ಟಣದ ಶ್ರೀ ಶಂಭುಲಿಂಗ ಮಠದಲ್ಲಿ ಹಿರಿಯ ನಾಗರಿಕರ ಸೇವಾ ಸಂಘದ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.

ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ್ ಕಾಜಿಯವರು ಸಭೆಯನ್ನುದ್ದೇಶಿಸಿ ಮಾತನಾಡಿ “ ಲೋಕಾಪೂರ ಟು ಧಾರವಾಡ ರೈಲ್ವೆ ಮಾರ್ಗಕ್ಕಾಗಿ ಕಳೆದ ಎರಡು ದಶಕಗಳಿಂದ ನಿರಂತರ ಹೋರಾಟಗಳು ನಡಿತಿವೆ. 2019 ರಲ್ಲಿ ಈ ಮಾರ್ಗದ ಸಮೀಕ್ಷೆ ನಡೆಸಿದ ಹುಬ್ಬಳ್ಳಿ ರೈಲ್ವೆ ವಲಯದ ಅಧಿಕಾರಿಗಳು ಈ ಯೋಜನೆಯ ಅನುಮೋದನೆಗಾಗಿ ದೆಹಲಿ ರೈಲ್ವೆ ಬೋರ್ಡ್ ಗೆ ವರದಿ ಸಲ್ಲಿಸಿದ್ದರೂ ಈ ವರೆಗೂ ಈ ಯೋಜನೆ ಅನುಷ್ಠಾನಗೊಂಡಿಲ್ಲ.

ಆದ್ದರಿಂದ ಶಾಸಕರು, ಸಂಸದರು ಹಾಗೂ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಮುಂಬರುವ ಅಧೀವೆಶನದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಬೇಕು.ಇಲ್ಲವಾದರೆ ನಾವೆಲ್ಲರೂ ಸೇರಿ ಬೃಹತ್ ಜನಾಂದೋಲನದ ಮೂಲಕ ಉಗ್ರ ಹೋರಾಟ ಮಾಡ್ತೇವೆ” ಎಂದು ಎಚ್ಚರಿಸಿದರು.

ನಂತರ ಮಾತನಾಡಿದ ಸ್ವಾಮೀಜಿಯವರು “ ಲೋಕಾಪೂರ ಟು ಧಾರವಾಡ ರೈಲ್ವೆ ಮಾರ್ಗ ನಿರ್ಮಾಣದಿಂದ ನಮ್ಮ ರಾಜ್ಯ ಅಲ್ಲದೇ ಹೊರ ರಾಜ್ಯದಿಂದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಪ್ರಯೋಜನ ವಾಗುತ್ತದೆ. ಆದ್ದರಿಂದ ಈ ಯೋಜನೆ ಕೂಡಲೇ ಅನುಷ್ಠಾನಕ್ಕೆ ತರಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ” ಎಂದು ತಿಳಿಸಿದರು.

About The Author