ಕನ್ನೆರಿ ಮಠದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಮೇಲಿನ ನಿರ್ಬಂಧವನ್ನು ಖಂಡಿಸಿ ರಾಮದುರ್ಗದಲ್ಲಿ ಪ್ರತಿಭಟನೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಸವಾದಿ ಶರಣರ ಹಿಂದು ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗದಳ ರಾಷ್ಟ್ರೀಯ ಕಿಸಾನ್ ಸಂಘ ಕರ್ನಾಟಕ ರಕ್ಷಣಾ ವೇದಿಕೆ ಹಿಂದೂಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳಿಗೆ ಮೂರು ಜಿಲ್ಲೆಗೆ ಗಡಿ ದಿಗ್ಬಂಧನ ಮಾಡಿರುವ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ
ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನೆ ತೇರ್ ಬಜಾರ್ ಮೂಲಕ ಸರ್ಕಾರಿ ಆಸ್ಪತ್ರೆಯ ಹುತಾತ್ಮ ಚೌಕ ದಿಂದ ಜೂನಿಪೇಟ್ ಅಂಬೇಡ್ಕರ್ ಮಾರ್ಗವಾಗಿ ಮಿನಿ ವಿಧಾನಸೌಧವರೆಗೂ ಪ್ರತಿಭಟನೆ ಜರುಗಿತು. ಶ್ರೀ ಕನ್ನೇರಿ ಕಾಡಸಿದ್ದೇಶ್ವರ ಮಹಾಸ್ವಾಮಿಗಳಿಗೆ ಮೂರು ಜಿಲ್ಲೆಗೆ ಗಡಿ ದಿಗ್ಬಂಧನ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಘೋಷಣೆಯನ್ನು ಕೂಗಲಾಯಿತು. ಹಾಗೂ 3000ಕ್ಕೂ ಹೆಚ್ಚು ಸಾರ್ವಜನಿಕರ ಸಹಿ ಸಂಗ್ರಹಣೆ ಮಾಡಲಾಗಿತ್ತು.

ತಹಶೀಲ್ದಾರ್ ಕಚೇರಿಗೆ ಬಂದ ಪ್ರತಿಭಟನಾಕಾರರು ತಾಲೂಕ ದಂಡಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಹಾಗೂ ಸಹಿ ಸಂಗ್ರಹದ ಪತ್ರವನ್ನು ಸಲ್ಲಿಸಲಾಯಿತು. ನಂತರ ಮಾತನಾಡಿದ ತಹಶೀಲ್ದಾರ್ ಪ್ರಕಾಶ್ ಹೊಳೇಪ್ಪಗೋಳ ನಿಮ್ಮ ಮನವಿಯನ್ನ ಪ್ರಾಮಾಣಿಕವಾಗಿ ರಾಜ್ಯಪಾಲರಿಗೆ ತಲುಪಿಸುವದಾಗಿ ತಿಳಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ. ಬಸವಾದಿ ಶರಣರ ಹಿಂದೂ ವೇದಿಕೆ. ಹಾಗೂ ವಿಶ್ವ ಹಿಂದೂ ಪರಿಷತ್. ಬಜರಂಗದಳ. ರಾಷ್ಟ್ರೀಯ ಕಿಸಾನ್ ಸಂಘ. ಕರ್ನಾಟಕ ರಕ್ಷಣಾ ವೇದಿಕೆ. ಹಾಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ, ಪ್ರತಿಭಟನೆಯನ್ನು, ನಡೆಸಲಾಯಿತು.

ಪ್ರತಿಭಟನೆಯಲ್ಲಿ ಹಲವು ಮಠಾಧೀಶರು ಭಾಗವಹಿಸಿದ್ದು ಪ್ರಮುಖವಾಗಿತ್ತು. ಶ್ರೀ ಪರಮ ಪೂಜ್ಯ ಮುಕ್ತಾನಂದ ನಿತ್ಯಾನಂದ ಸಂತ ಸಂಘ ಆಶ್ರಮ ಸಿಂದೋಗಿ ಮುನವಳ್ಳಿ. ಪರಮಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಚರ ಮೂರ್ತೇಶ್ವರ ಮಠ ಗುರ್ಲಹೊಸೂರ ಸವದತ್ತಿ. ಮಣ್ಣಿಕೇರಿಯ ಶ್ರೀಗಳು.ಮತ್ತು ಕೃಷ್ಣಾನಂದ ಮಹಾಸ್ವಾಮಿ ಸೋಮನಾಯಕನ ಹಟ್ಟಿ. ಬಸವಾದಿ ಶರಣರ ಹಿಂದೂ ವೇದಿಕೆಯ ಉತ್ತರ ಪ್ರಾಂತ ಸಂಚಾಲಕರು ಜಯಶಂಕರ ವನ್ನೂರ್. ರಾಮದುರ್ಗ ತಾಲೂಕ ಸಂಯೋಜಕ ಅಂಬರೀಶ್ ಬಟಕುರ್ಕಿ. ಉಪ ಸಂಯೋಜಕ ಭೀಮಸೀ ಭಜಂತ್ರಿ .ಶ್ರೀರಾಮ ಸೇನೆಯ, ಬೆಳಗಾವಿ ಜಿಲ್ಲಾ ವಿಭಾಗಿಯ ಸಂಘಟನಾ ಕಾರ್ಯದರ್ಶಿ ರವಿ ಪೂಜಾರಿ. ಕರ್ನಾಟಕ ರಕ್ಷಣಾ ವೇದಿಕೆಯ, ಅಧ್ಯಕ್ಷ ವಿನಯ್ ಚಂದರಗಿ .ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀ ವಿಜಯೇಂದ್ರ ತೀರ್ಥ ಜೋಷಿ ವೇದಮೂರ್ತಿ ಆನಂದಯ್ಯ ಕುಂಬಾರಗಿರಿ ಮಠ ಶ್ರೀ ವೇದಮೂರ್ತಿ ಆನಂದ ಸ್ವಾಮಿ ದೇವಾಂಗಮಠ. ವಿಶ್ವ ಹಿಂದೂ ಪರಿಷತ್ ತಾಲೂಕ ಅಧ್ಯಕ್ಷ ಪ್ರಕಾಶ್ ಸುಳೇಬಾವಿ. ರಾಷ್ಟ್ರೀಯ ಕಿಸಾನ್ ಸಂಘದ ಮುಖ್ಯಸ್ಥರು ಬಸವರಾಜ್ ಕೋನನ್ನವರ್. ತಾಲೂಕ ಪದಾಧಿಕಾರಿಗಳಾದ ಸುರೇಶ್ ನಂದಪ್ಪನವರ್. ಅಪ್ಪನ ಗೌಡ ಪಾಟೀಲ್. ಮಹಿಳಾ ಯುವ ನಾಯಕಿ ಸುನಿತಾ ತಿಮ್ಮನಗೌಡರ. ವಿಜಯ ಸೇನಾ ಮುಖ್ಯಸ್ಥ .ವಿಜಯ ನಾಯಕ್. ಶ್ರೀದೇವಿ ಮಾದಣ್ಣವರ್. ಶಾಲಿನಿ ಇಳಿಗೆರ್. ಬಿಜೆಪಿಯ ಮಂಡಲ ಅಧ್ಯಕ್ಷರು ಡಾಕ್ಟರ್ ಕೆ.ವಿ ಪಾಟೀಲ್ ಯುವ ನಾಯಕರು ಮಲ್ಲಣ್ಣ ಯಾದವಾಡ. ಮಲ್ಲಿಕಾರ್ಜುನ್ ಭಾವಿಕಟ್ಟಿ ಡಾ. ಬಸವರಾಜ ಮಾದಣ್ಣವರ್ .ಇನ್ನೂ ಹಲವು ಹಿಂದೂ ಮುಖಂಡರು. ಸಾರ್ವಜನಿಕರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author