ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮ ಪಂಚಾಯತಿ ಆವರಣದಲ್ಲಿ ಸುಕ್ಷೇತ್ರ ಗೊಡಚಿ ಶ್ರೀ ವೀರಭದ್ರೇಶ್ವರ ಜಾತ್ರೆಯ ನಿಮಿತ್ಯ ಗುರುವಾರ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಜ್ಯೋತಿ ಬೆಳಗಿಸೋದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು
ವೀರಭದ್ರೇಶ್ವರ ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಬಂದಂತಹ ಭಕ್ತಾದಿಗಳಿಗೆ ಮೂಲ ಸೌಕರ್ಯ ಇಲ್ಲದ ಕಾರಣ ಬೇಸರ ಪಡುವ ಪ್ರಸಂಗಗಳು ನಡೆದಿವೆ. ತಾವು ಗೋಡಚಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರದಿಂದ 5 ಲಕ್ಷ ರೂ. ಅನುದಾನ ಒದಗಿಸಿದರೆ ಟ್ರಸ್ಟಿನವರು ನಿರಾಕರಣೆ ಮಾಡಿರುವುದು ಭಕ್ತಾದಿಗಳ ಬೇಸರಕ್ಕೆ ಕಾರಣವಾಗಿದೆ.
ಆದ್ದರಿಂದ ಈ ದೇವಸ್ಥಾನವನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು ಸರಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.

ಈ ಭಾಗದಲ್ಲಿಯ ಪ್ರಸಿದ್ಧ ಗೊಡಚಿ ವೀರಭದ್ರೇಶ್ವರ ದೇವಸ್ಥಾನವು ವಿವಿಧ ದೇವಸ್ಥಾನಗಳ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು. ಆದರೆ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಹಣವನ್ನು ಇಲ್ಲಿನ ಅಭಿವೃದ್ಧಿಗೆ ಬಳಕೆ ಮಾಡದೇ ಟ್ರಸ್ಟಿಗಳು ವೈಯಕ್ತಿಕ ಬಳಕೆ ಮಾಡಿಕೊಳ್ಳುತ್ತಿರುವುದು ಭಕ್ತಾಧಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂದರು.
ಪ್ರತಿ ವರ್ಷ ವಿವಿಧ ಇಲಾಖೆಗಳಿಂದ ರೈತರಿಗೆ ಬೇಕಾಗುವ ವಸ್ತು ಪ್ರದರ್ಶನಗಳನ್ನು ಇಲ್ಲಿ ನಡೆಸಲಾಗುತ್ತಿದ್ದು, ಇಲಾಖೆಗಳಿಂದ ರೈತರು ಒಳ್ಳೆಯ ಮಾಹಿತಿ ಪಡೆದುಕೊಂಡು ಅದನ್ನು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ತಾಲೂಕು ಪಂಚಾಯತ್ ಇಒ ಬಸವರಾಜ ಐನಾಪೂರ ಮಾತನಾಡಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಇಲ್ಲಿ ಮಳಿಗೆಗಳನ್ನು ಹಾಕಿ ರೈತರಿಗೆ ಸಮರ್ಪಕ ಮಾಹಿತಿ ಒದಗಿಸಲಿವೆ. ಜಾತ್ರೆಗೆ ಬಂದ ಸಾರ್ವಜನಿಕರು ಇಲಾಖೆ ನೀಡುವ ಮಾಹಿತಿಯನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ರಾಜಯೋಗಿನಿ ವೈಶಾಲಿ. ಈರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರೀಮಂತ ಸಂಗ್ರಾಮಸಿಂಹ ಶಿಂಧೆ, ಶ್ರೀಮಂತ ಸಂಜಯಸಿಂಹ ಶಿಂಧೆ,
ಗ್ರಾಮ ಪಂಚಾಯತ ಅಧ್ಯಕ್ಷೆ ಲಕ್ಕವ್ವ ವಗ್ಗರ. ಗ್ರಾಮ ಪಂಚಾಯತ ಉಪಾಧ್ಯಕ್ಷ ಮಾಬುಸುಬಾನಿ ಮುನವಳ್ಳಿ, ತಹಶೀಲ್ದಾರ್‌ಪ್ರಕಾಶ ಹೊಳೆಪ್ಪಗೋಳ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಪ್ರಕಾಶ ಮುಗಳಖೋಡ, ಹೆಸ್ಕಾಂ ಎಇಇ ಶಿವಪ್ರಕಾಶ ಕರಡಿ, ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ, ಸಿಡಿಪಿಒ ಶಂಕರ ಕುಂಬಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನಮಂತ ವಕ್ಕುಂದ, ವಲಯ ಅರಣ್ಯ ಅಧಿಕಾರಿ ದಾನಮ್ಮ ಗುಂಜಗಾವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಮುಖಂಡ ಎಸ್.ಎನ್. ಶಿಂಗಾರಗೊಪ್ಪ, ತಾ.ಪಂ ಎಡಿ ಸೋಮ ರೆಡ್ಡಿ ಹೊಂಗಲ, ಪಿಡಿಓ ಮಂಜುನಾಥ ದೇವರಡ್ಡಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



