ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ
ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ ನ್ಯಾಷನಲ್ ಹ್ಯೂಮನ್ ರೈಟ್ಸ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಹಯೋಗದಲ್ಲಿ ಮಾನವ ಹಕ್ಕು ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಂಕನವಾಡಿಯಲ್ಲಿ ಹಮ್ಮಿಕೊಂಡಿದ್ದು ಜ್ಯೋತಿ ಬೆಳಗಿಸುವ ಮೂಲಕ ದಿವಾನಿ ನ್ಯಾಯಾಧೀಶರಾದ ಮಂಜುನಾಥ ಬಾನಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು
ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸ್ವತಂತ್ರವಾಗಿ ಜೀವಿಸುವ ಹಕ್ಕು ಹೊಂದಿದ್ದಾನೆ. ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ, ನಾವೆಲ್ಲರೂ ಮೂಲಭೂತ ಹಕ್ಕುಗಳನ್ನು ಗೌರವಿಸೋಣ ಎಂದು ನುಡಿದರು
ಕಾರ್ಯಕ್ರಮದ ಅಧ್ಯಕ್ಷತೆ ನ್ಯಾಷನಲ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಬಿ ಯು ಬೈರಕದಾರ ವಹಿಸಿ ಮಾತನಾಡಿದರು
ಈ ಸಂದರ್ಭದಲ್ಲಿ
ಎ ಎ ಮುದಕವಿ. ಅಧ್ಯಕ್ಷರು ನ್ಯಾಯವಾದಿಗಳ ಸಂಘ,
.ಡಿ. ಎಮ್ ನದಾಫ್, ಸಹಾಯಕ ಸರಕಾರಿ ಅಭಿಯೋಜಕರು
ಐ.ಎಂ. ಮುಲ್ಲಾ ಪ್ರಾಂಶುಪಾಲರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ
ಶ್ರೀಮತಿ.ಸವಿತಾ ಮುನ್ಯಾಳ ಪಿ. ಎಸ್ ಐ ರಾಮದುರ್ಗ,.
ಸಮಾಜ ಸೇವಕರಾದ
ಡಿ ಎಫ್ ಹಾಜಿ, ವೆಂಕಟೇಶ್ ಹಿರೇರೆಡ್ಡಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಿಬ್ಬಂದಿ ಮಕ್ಕಳು ಉಪಸ್ಥಿತರಿದ್ದರು.
ಕೈಗಾರಿಕಾ ಸಂಸ್ಥೆಯ ಜೆಟಿಓ ದೇವೇಂದ್ರಪ್ಪ ಬಡಿಗೇರ್ ಸ್ವಾಗತಿಸಿದರು ರಮೇಶ್ ಎಲಗೋಡ ವಂದಿಸಿದರು ವೀರೇಶ್ ಬಳಗೇರ್ ಕಾರ್ಯಕ್ರಮ ನಿರೂಪಿಸಿದರು.



