ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ನ್ಯಾಷನಲ್ ಹೂಮನ್ ರೈಟ್ಸ್ ಮತ್ತು ಶಬರಿ ಎಕ್ಷಪ್ರೆಸ್ ರೈಲು ಹೋರಾಟ ಸಮಿತಿ ರಾಮದುರ್ಗ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘಟನೆ ಗಳಿಂದ ಮಿನಿ ವಿಧಾನಸೌಧ ಎದುರುಗಡೆ ಅಂಬೇಡ್ಕರ್ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.
ನ್ಯಾಷನಲ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಬಿ ಯು ಬೈರಕದಾರ, ರಾಜೇಶ್ವರಿ ಮೆಟಗುಡ್ಡ ವಕೀಲರು ಮಾತನಾಡಿ ನ್ಯಾಷನಲ್ ಹೂಮನ್ ರೈಟ್ಸ್ ಮತ್ತು ಶಬರಿ ಎಕ್ಷಪ್ರೆಸ್ ರೈಲು ಹೋರಾಟ ಸಮಿತಿ ರಾಮದುರ್ಗ ಹಾಗೂ ವಿವಿಧ ಸಂಘಟನೆಗಳಿಂದ ರಾಮದುರ್ಗ ನಗರದಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಬಹು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಅದರಲ್ಲಿ ಕೆಲವು ಮುಖ್ಯವಾದ ಬೇಡಿಕೆಗಳು 1) ರಾಮದುರ್ಗಕ್ಕೆ ಹೊಸ ರೈಲು ಮಾರ್ಗ 2) ಮಹಾದಾಯಿ ನದಿ ಜೋಡಣೆ 3) ರಾಮದುರ್ಗ ನಗರದಲ್ಲಿ ಮುಖ್ಯವಾಗಿ ರಾಮದುರ್ಗದ ಆಡಳಿತ ಭವನ (ಮಿನಿ ವಿಧಾನ ಸೌಧ) ಹತ್ತಿರ ಮತ್ತು ತೇರಬಜಾರದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ 4) ಶಾಲಾ ಕಾಲೇಜು ಮಕ್ಕಳಿಗೆ ಎಲ್ಲಾ ಬಸಗಳು ಆ ಗ್ರಾಮಗಳಲ್ಲಿ ನಿಲ್ಲಬೇಕು ಮತ್ತು ಶಾಲಾ-ಕಾಲೇಜ ಹತ್ತಿರದಿಂದ ಹೋಗುವ ಪ್ರತಿಯೊಂದು ಬಸ್ಸು ನಿಲ್ಲಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಬೇಕು
ಅದಕ್ಕಾಗಿ ನಾವು ಉಗ್ರ ಹೋರಾಟ ಮಾಡಲು ನಿರ್ಧರಿಸಿದ್ದು ಅದಕ್ಕೆ ಆಸ್ಪದ ಕೊಡದೆ ಈ ಎಲ್ಲಾ ಬೇಡಿಕೆಗಳನ್ನು ಬೇಗನೆ ಈಡೇರಿಸಬೇಕೆಂದು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಷನಲ್ ಹೂಮನ್ ರೈಟ್ಸ್ ಮತ್ತು ಶಬರಿ ಎಕ್ಷಪ್ರೆಸ್ ರೈಲು ಹೋರಾಟ ಸಮಿತಿ ರಾಮದುರ್ಗ, ಕರ್ನಾಟಕ ರಕ್ಷಣಾ ವೇದಿಕೆ ವಿವಿಧ ಸಂಘಟನೆಯ ಪದಾಧಿಕಾರಿಗಳು , ಸಾರ್ವಜನಿಕರು ಉಪಸ್ಥಿತರಿದ್ದರು.



