Prashanth Angadi

ಗೋಕಾಕ ತಾಲೂಕಿನಾದ್ಯಾಂತ ಜಗದೀಶ್ ಶೆಟ್ಟರ್ ಗೆ ಬೆಂಬಲ…!!

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಗೋಕಾಕ್ ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಬೀರು ಬಿಸಿಲು ಲೆಕ್ಕಿಸದೆ ಸಾವಿರಾರು ಜನರು ಬೃಹತ್ ರೋಡ್ ಶೋ ನಲ್ಲಿ ಭಾಗ ವಹಿಸಿ ಮೋದಿ ಮೋದಿ ಎಂದು ಘೋಷಣೆ ಕೂಗಿ, ಬಿಜೆಪಿ ಅಭ್ಯರ್ಥಿಗೆ ಜಗದೀಶ್ ಶೆಟ್ಟರ್ ಗೆ ಬೆಂಬಲ ಸೂಚಿಸಿದರು.‌ ಗೋಕಾಕ ಮತ ಕ್ಷೇತ್ರದ ನಭಾಪೂರದಲ್ಲಿ ಖನಗಾಂವ, ಮಿಡಕನಕಟ್ಟಿ, ಶಿಲ್ತಿಭಾಂವಿ, ಮಕ್ಕಳಗೇರಿ, ಕೊಳವಿ, ಬೆಣಚಿನವರ್ಡಿ, ಮೂಲದಿನ್ನಿ, ಮಮದಾಪೂರ, ಹಿರೇನಂದಿ ಗ್ರಾಮಗಳ ಪ್ರಚಾರಾರ್ಥ ಸಮಾರಂಭದಲ್ಲಿ ಭಾಗವಹಿಸಿ, ಮತಯಾಚನೆ…

Read More

ಗೋಕಾಕ್ ಪಟ್ಟಣದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪ್ರಚಾರ ಸಭೆ

ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪರವಾಗಿ ಆಯೋಜನೆ ಮಾಡಲಾಗಿದ್ದ ಪ್ರಚಾರ ಸಭೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿ‌ ಆದ ನಂತರ ನಮಗೆ ಹೆಮ್ಮೆ ಅನಿಸುತ್ತದೆ. ಈ ಹಿಂದೆ ಬಹಳಷ್ಟು ಪ್ರಧಾನಿಗಳನ್ನು ನೋಡಿದ್ದೇನೆ. ಇಂದಿರಾಗಾಂಧಿ ನಂತರ ಗಟ್ಟಿಯಾದ ಪ್ರಧಾನಿ ಅಂದರೆ ಅದು ನರೇಂದ್ರ ಮೋದಿಯವರು. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ನಾಯಕರು ಅಷ್ಟೇ ಅಲ್ಲ ವಿಶ್ವಾನಾಯಕರಾಗಿ ಬೆಳೆದು ನಿಂತಿದ್ದಾರೆ. ಕಳೆದ 10…

Read More

ನಿಯಂತ್ರಣ ಕಳೆದುಕೊಂಡ ಅಮಿತ್ ಶಾ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ಲೋಕಸಭಾ ಚುನಾವಣೆ ಪ್ರಚಾರದ ನಿಮಿತ್ಯ ಬಿಹಾರಕ್ಕೆ ತೆರಳಿದ್ದ ವೇಳೆ ಅಮಿತ್ ಶಾ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಿಢೀರ್ ನಿಯಂತ್ರಣ ಕಳೆದುಕೊಂಡಿದ್ದು, ಅಮಿತ್ ಶಾ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬಿಹಾರದ ಬೆಗೂಸರೈನಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಂಡು ವಾಪಸ್ ಹೋಗುವಾಗ ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿದ್ದಂತೆ ಹಠಾತ್ತನೆ ನಿಯಂತ್ರಣ ತಪ್ಪಿ ಭಾರೀ ಭೀತಿ ಉಂಟು ಮಾಡಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಪೈಲೆಟ್ ನ ನಿಯಂತ್ರಣ ಕಳೆದುಕೊಂಡಿದೆ. ಕೆಲ ಕಾಲ ಆಗಸದಲ್ಲಿ ತಿರುಗಿದೆ. ನಂತರ ಹೆಲಿಕಾಪ್ಟರ್…

Read More

ಬಿಜೆಪಿಯವರು ಸುಳ್ಳಿನ ಕಾರ್ಖಾನೆ ಇದ್ದಂಗೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಯರಗಟ್ಟಿಯ ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಭಾನುವಾರ ನಡೆದ ಪ್ರಜಾಧ್ವನಿ 2 ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ನವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು ಮೇ 7 ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನೇ ಸ್ಪರ್ಧಿಸಿದ್ದೇನೆ ಎಂದು ತಿಳಿದುಕೊಳ್ಳಿ. ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದರೆ ನನಗೆ ಮತ ಹಾಕಿದಂತೆ.ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. 2014 ರಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಲೋಕಸಭೆಗೆ ನಿಂತು ಸ್ವಲ್ಪ ಮತಗಳಿಂದ ಸೋತಿದ್ದರು….

Read More

ಕಟಕೋಳ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರಚಾರ ಸಭೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಹಾಗೂ ಗೂಡಚಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಬಸವರಾಜ ಸೋಮಗೊಂಡ, ಯಲ್ಲಪ್ಪ ಪರಚನಿ,ಯಲ್ಲಪ್ಪ ಸಾಳುಂಕೆ, ಅಜ್ಜು ಪರಚನ್ನಿ,ರಾಮಣ್ಣ ಕರಬನ್ನಿ, ರಮೇಶ್ ದಳವಾಯಿ, ಆಕಾಶ್ ಎತ್ತಿನಮನೆ ,ದುಂಡಪ್ಪ ದಳವಾಯಿ,ಪ್ರಕಾಶ್ ಮೊಸಗನ್ನಿ ಇವರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು

Read More

ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ವತಿಯಿಂದ ಸಾಮೂಹಿಕ ವಿವಾಹ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಆರೆಬೇಂಚಿ ಕಲ್ಯಾಣ ಮಂಟಪದಲ್ಲಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ವತಿಯಿಂದ133ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ117ನೇ ಡಾ. ಬಾಬು ಜಗಜೀವನ ರಾಮ್ ಜಯಂತಿಯ ಅಂಗವಾಗಿ ಬೆಳಗಾವಿ ಜಿಲ್ಲಾ ಮಟ್ಟದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರಶಾಂತ್ ರಾವ್ ಐಹೋಳೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು‌.ಈ ವೇಳೆ ರಾಜ್ಯಾಧ್ಯಕ್ಷರು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಮತ್ತು ಸಮಾನತೆ ಶ್ರೇಷ್ಠ ಭೂಷಣ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಸ್ಥರು ತಿರಕಪ್ಪ ಕೆ.ಚಿಕ್ಕೇರಿ…

Read More

ವಧುವನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.ವಧುವನ್ನು ಎಳೆದೊಯ್ಯಲು ಯತ್ನಿಸಿದ್ದು ಆಕೆಯ ಹೆತ್ತವರೇ ಆಗಿದ್ದಾರೆ. ಘಟನೆಯ ವೀಡಿಯೊ ವೈರಲ್ ಆಗಿದ್ದು, ವಧುವನ್ನು ಆಕೆಯ ಚೀರಾಟದ ನಡುವೆಯೇ ಎಳೆದಾಡಿರುವುದು ಕಂಡುಬರುತ್ತದೆ.ವರನ ಕುಟುಂಬಸ್ಥರ ಮೇಲೂ ವಧುವಿನ ಮನೆಯವರು ಮೆಣಸಿನ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ. ವರನ ಸಂಬಂಧಿಕರು ಅಸ್ತವ್ಯಸ್ತರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಆಂಧ್ರಪ್ರದೇಶದ ನರಸರಾವ್‌ಪೇಟೆಯ ಕಾಲೇಜೊಂದರಲ್ಲಿ ಪಶುವೈದ್ಯಕೀಯ ವಿಜ್ಞಾನದಲ್ಲಿ ಡಿಪ್ಲೊಮಾ ಓದುತ್ತಿದ್ದಾಗ ಸ್ನೇಹಾ…

Read More

ಕಿತ್ತಲಿ ಗ್ರಾಮದಲ್ಲಿ ಮಾರುತೇಶ್ವರ ರಥೋತ್ಸವ

ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ಕಿತ್ತಲಿ ಗ್ರಾಮದಲ್ಲಿ ಮಾರುತೇಶ್ವರ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಹರ್ಷದ್ವಾರದ ಮಧ್ಯ ಅತ್ಯಂತ ವೈಭವಯುತವಾಗಿ ಜರಗಿತು ದವನದ ಹುಣ್ಣಿಮೆ ಹಾಗೂ ಹನುಮ ಜಯಂತಿ ನಿಮಿತ್ತ ಜರುಗಿದ ಮಾರುತೇಶ್ವರ ರಥೋತ್ಸವಕ್ಕೆ ಹೂವು, ಹಣ್ಣು, ಕಾಯಿ, ಉತ್ತತ್ತಿ, ಲಿಂಬೆಹಣ್ಣು ರಥಕ್ಕೆ ಭಕ್ತಿಯಿಂದ ಅರ್ಪಿಸಿದರು.ಜಾತ್ರೆ ನಿಮಿತ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Read More

ಮತಗಟ್ಟೆವಾರು ಇವಿಎಂ ಹಂಚಿಕೆ: ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ ಲೋಕಸಭಾ ಚುನಾವಣೆಗಾಗಿ 02-ಬೆಳಗಾವಿ ಲೋಕಸಭೆ ಕ್ಷೇತ್ರದ ಮತಗಟ್ಟೆವಾರು ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ವಿಂಗಡಣೆಯನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎರಡನೇ ಹಂತದ ರ್‍ಯಾಂಡಮೈಜೇಷನ್ ಮೂಲಕ ನಿರ್ಧರಿಸಲಾಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಏ.23) ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ರ್‍ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು. ಈಗಾಗಲೇ ಮೊದಲ‌ ಹಂತದ ರ್‍ಯಾಂಡಮೈಜೇಷನ್ ಪೂರ್ಣಗೊಳಿಸಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್ ಗಳಿಗೆ ಕಳಿಸಲಾಗಿದ್ಸು,…

Read More

ಕುಡಿಯುವ ನೀರಿಗಾಗಿ ಹಲ್ಲೆ 14 ಜನರ ಮೇಲೆ ಪ್ರಕರಣ ದಾಖಲು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಸಾರ್ವಜನಿಕ ಬಾವಿಯ ಕುಡಿಯುವ ನೀರು ಬಳಕೆ ಮಾಡಿರುವ ಕುರಿತಂತೆ ಹಲ್ಲೆ, ಬೇದರಿಕೆಯ ಆರೋಪದ ಮೇಲೆ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಸೇರಿದಂತೆ 14 ಜನರ ಮೇಲೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಐಗಳಿ ಗ್ರಾಮದ ಸೈದಪ್ಪಾ ಗಡಾದಿ ಕುಟುಂಬದವರು ಸಾರ್ವಜನಿಕರ ಬಾವಿಯ ನೀರನ್ನು ಬಳಕೆ ಮಾಡುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಸೇರಿದಂತೆ 14 ಜನರು ಮಾತಿಗೆ ಮಾತು ಬೆಳೆಸಿ ಗಲಾಟೆ ನಡೆದಿದೆ.ಅಷ್ಟಕ್ಕೆ ಸುಮ್ಮನಾಗದ…

Read More