ಕಾಲೇಜುಗಳಲ್ಲಿ ರೋಸ್ಟರ ಪ್ರಕಾರ ಪ್ರವೇಶ ಮಾಡಿಕೊಂಡ ವಿವರ ಪ್ರದರ್ಶಿಸುಂತೆ ಪರಿಷತ್
ವಿಜಯಪುರ : 2024-25 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆಪ್ರವೇಶ ಪ್ರಾಂರಭವಾಗಿದ್ದು, ಬಹುತೇಕ ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಪ್ರವೇಶ ಪಡೆದ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರದರ್ಶನ ಮಾಡದೇ ಈಗಾಗಲೇ ಪ್ರವೇಶಮುಕ್ತಾಯವಾಗಿವೆ, ಸೀಟ್ ಭರ್ತಿಯಾಗಿವೆ ಎಂಬ ಸಿದ್ದ ಉತ್ತರವನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಇಲಾಖೆಯ ಸುತ್ತೋಲೆಯ ಪ್ರಕಾರ ಪ್ರವೇಶ ಪ್ರಕ್ರಿಯೆ…
