ಮುಖ್ಯಮಂತ್ರಿ ಸಿದ್ಧರಾಮಯ್ಯ ಕೊರಳಿಗೆ ಮತ್ತೊಂದು ಬೃಹತ್ ಭೂ ಹಗರಣದ ಕುಣಿಕೆ

WhatsApp Group Join Now

RMV 2ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು BDA ಭೂ ಸ್ವಾಧೀನ ಪಡಿಸಿಕೊಂಡಿದ್ದ ಭೂಪಸಂದ್ರ ಗ್ರಾಮದ ಸರ್ವೆ ನಂ: 20 ಮತ್ತು 21 ರ 6.26 ಎಕರೆ ಸ್ವತ್ತನ್ನು De – notification ಮಾಡಿರುವ ಸಿದ್ಧರಾಮಯ್ಯ ಮತ್ತಿತರರ ವಿರುದ್ಧ ಪ್ರಕರಣ ದಾಖಲು. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಸ್ವಾರ್ಥಕ್ಕಾಗಿ ಕಾನೂನುಬಾಹಿರವಾಗಿ ₹ 400 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ BDA ಸ್ವತ್ತನ್ನು De-notification ಮಾಡಿರುವ ಸಿದ್ಧರಾಮಯ್ಯ

400 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ BDA ಸ್ವತ್ತನ್ನು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ De – notification ಮಾಡಿರುವ ಆರೋಪ. ನಿವೃತ್ತ IAS ಅಧಿಕಾರಿಗಳಾದ ಮಹೇಂದ್ರ ಜೈನ್ ಮತ್ತು ಶಾಂಭಟ್ ಮತ್ತಿತರರ ವಿರುದ್ಧವೂ ಪ್ರಕರಣ ದಾಖಲು

ಈ ಬೃಹತ್ ಭೂ ಹಗರಣದ ವಿರುದ್ಧ “ಕಾನೂನು ರೀತ್ಯಾ ಕ್ರಮ ವಹಿಸಲು ಅನುಮತಿ” (Prosecution Permission) ನೀಡುವಂತೆ ಸಂಪೂರ್ಣ ದಾಖಲೆಗಳೊಂದಿಗೆ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಮಾಡಿರುವ N. R. ರಮೇಶ್ ಭೂಪಸಂದ್ರ ಗ್ರಾಮದ 6.26 ಎಕರೆ ವಿಸ್ತೀರ್ಣದ ಸುಮಾರು 400 ಕೋಟಿ ರೂ. ಗಳಿಗೂ ಅಧಿಕ ಮೌಲ್ಯದ BDA ಸ್ವತ್ತನ್ನು De – notification ಮಾಡಿರುವ ಹಗರಣದ 1,162 ಪುಟಗಳ ಸಂಪೂರ್ಣ ದಾಖಲೆಗಳೊಂದಿಗೆ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವ N. R. ರಮೇಶ್

ಲೋಕಾಯುಕ್ತ ADGP — ಮನೀಷ್ ಕಾರ್ಬಿಕರ್ ಮತ್ತು IGP — ಸುಬ್ರಹ್ಮಣ್ಯೇಶ್ವರ ರಾವ್ ಅವರುಗಳಿಗೆ ಪ್ರತ್ಯೇಕವಾಗಿ ದೂರು ಸಲ್ಲಿಸಿದ N. R. ರಮೇಶ್ ಈ De – notification ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಲೋಕಾಯುಕ್ತದಲ್ಲಿ ಸಿದ್ಧರಾಮಯ್ಯ ಮತ್ತಿತರರ ವಿರುದ್ಧ ದೂರು ದಾಖಲಿಸಿದ್ದ N. R. ರಮೇಶ್.

ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾಗಿದ್ದ ಮಹೇಂದ್ರ ಕುಮಾರ್ ಜೈನ್, ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳಾಗಿದ್ದ ಎನ್. ನರಸಿಂಹಮೂರ್ತಿ, ನಗರಾಭಿವೃದ್ಧಿ ಇಲಾಖೆ ಕಾನೂನು ಕೋಶದ ಅಧಿಕಾರಿಗಳಾಗಿದ್ದ ಎರ್ಮಲ್ ಕಲ್ಪನಾ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಶಾಂಭಟ್ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧವೂ ದೂರು ದಾಖಲಿಸಿದ್ದ N. R. ರಮೇಶ್ ಈ ಬೃಹತ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯ ಸೇರಿದಂತೆ ಎಲ್ಲಾ ಭ್ರಷ್ಟರ / ವಂಚಕರ ವಿರುದ್ಧ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಭೂ ಕಬಳಿಕೆಗೆ ಸಂಚು ಪ್ರಕರಣಗಳನ್ನು ಈ ಹಿಂದೆಯೇ ಲೋಕಾಯುಕ್ತದಲ್ಲಿ ದಾಖಲಿಸಿದ್ದ N. R. ರಮೇಶ್

ಸಿದ್ಧರಾಮಯ್ಯ ನಡೆಸಿರುವ ಈ De – notification ಹಗರಣಕ್ಕೆ ಸಂಬಂಧಿಸಿದಂತೆ 1,162 ಪುಟಗಳ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ N. R. ರಮೇಶ್ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯ ಮತ್ತು ಸಂಬಂಧಪಟ್ಟ ಅಂದಿನ ಹಲವು ಹಿರಿಯ ಅಧಿಕಾರಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಸ್ವತ್ತು ನಷ್ಟ ಉಂಟಾಗಲು ಕಾರಣಕರ್ತರಾಗುವ ಮೂಲಕ ಮತ್ತು ಭ್ರಷ್ಟಾಚಾರ ನಡೆಸಿ – ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿಯ ಪಾಲಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 400 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಸ್ವತ್ತು ಹೋಗಲು ಕಾರಣಕರ್ತರಾಗಿರುತ್ತಾರೆ.

ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ಭೂಪಸಂದ್ರ ಗ್ರಾಮದ ಸರ್ವೆ ನಂ. 20 ರಲ್ಲಿನ 03 ಎಕರೆ 34 ಗುಂಟೆ ಮತ್ತು ಸರ್ವೆ ನಂ. 21 ರಲ್ಲಿ 02 ಎಕರೆ 32 ಗುಂಟೆ ಸೇರಿದಂತೆ ಒಟ್ಟು 06 ಎಕರೆ 26 ಗುಂಟೆ ವಿಸ್ತೀರ್ಣದ ಸುಮಾರು 400 ಕೋಟಿ ರೂ. ಗಳಿಗೂ. ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತು RMV 2ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು 1984 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಭೂಪಸಂದ್ರ ಗ್ರಾಮದ ಪ್ರದೇಶಗಳನ್ನು ಭೂಸ್ವಾಧೀನ ಪಡಿಸಿಕೊಂಡಿತ್ತು. ಹೊಸ ಬಡಾವಣೆಯ ನಿರ್ಮಾಣಕ್ಕೆಂದು ಈ ಜಮೀನಿಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಂಬಂಧಪಟ್ಟ ಭೂ ಮಾಲೀಕರಿಗೆ ಸಲ್ಲಬೇಕಾದ ಪರಿಹಾರದ ಮೊತ್ತವನ್ನು ನಗರ ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿರುತ್ತದೆ.

ತಾನು ಕಾನೂನು ರೀತ್ಯಾ ಭೂ ಸ್ವಾಧೀನಪಡಿಸಿಕೊಂಡ ಸ್ವತ್ತುಗಳನ್ನು ಬಿಡಿಎ ತನ್ನ ಎಂಜಿನಿಯರಿಂಗ್ ಇಲಾಖೆಯ ಮೂಲಕ ಕೋಟ್ಯಾಂತರ ರೂಪಾಯಿ ವೆಚ್ಛ ಮಾಡಿ ಬಡಾವಣೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಕಾನೂನು ರೀತ್ಯಾ 42 ಮಂದಿ ಅರ್ಜಿದಾರರಿಗೆ ಹಂಚಿಕೆಯನ್ನು ಮಾಡಿ “ಸ್ವಾಧೀನ ಪತ್ರ”ವನ್ನು ನೀಡಿರುವುದಲ್ಲದೇ, ಹಂಚಿಕೆದಾರರಿಗೆ ಆಯಾ ನಿವೇಶನಗಳ ಸುಪರ್ದನ್ನೂ ಸಹ ನೀಡಿರುತ್ತದೆ. ಭೂಸ್ವಾಧೀನ ಪಡಿಸಿಕೊಂಡಿದ್ದ 06.26 ಎಕರೆ ವಿಸ್ತೀರ್ಣದ ಸ್ವತ್ತಿನ ಸ್ವಾಧೀನಾನುಭವ ಮತ್ತು ಮಾಲೀಕತ್ವವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ಇರುವ ದಾಖಲೆಗಳು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ದಾಖಲೆಗಳಲ್ಲೂ ಸಹ ನಮೂದಾಗಿರುತ್ತದೆ.

ಕಾನೂನು ರೀತ್ಯಾ ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರದ ಅವಧಿಯಲ್ಲಿ ಈ ಹಿಂದೆಯೇ ಕಾನೂನು ರೀತ್ಯಾ ಪರಿಹಾರದ ಮೊತ್ತವನ್ನು ಪಡೆದಿದ್ದ ಜಮೀನಿನ ಮಾಲೀಕರು ಅತಿಯಾದ ದುರಾಸೆಯಿಂದ ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳಲ್ಲಿ ಸದರಿ ಸ್ವತ್ತನ್ನು De – notification ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಕರ್ನಾಟಕ ಉಚ್ಛ ನ್ಯಾಯಾಲಯದ Writ Petition # 37719, 37720, 37721, 37722, 37723, 37724 and 37725/1992, WP # 3216-17/1993, WP # 7661, 7662, 7663, 7664 and 7665/1993, WP # 11001/1993, WP # 23205/1993, WP # 32221/1993, WP # 15718/1996, WP # 6254/1996 and WA # 679/2002 ಹಾಗೆಯೇ ಕರ್ನಾಟಕ ಉಚ್ಛ ನ್ಯಾಯಾಲಯದ Writ Appeal # 3479, 3480, 3481, 3482, 3483, 3484, 3485, 3486, 3487, 3488, 3489, 3490, 3491, 3492, 3493, 3494, 3495 and 3496/2002, WA # 680/2012, WA # 3497 to 3514/2002 (BDA) ಮತ್ತು ಸರ್ವೋಚ್ಛ ನ್ಯಾಯಾಲಯದ Civil Appeal # 6220/2009 ಕ್ಕೆ ಸಂಬಂಧಿಸಿದಂತೆ ದಿನಾಂಕ 18/11/2015 ರಂದು ಸ್ಪಷ್ಟವಾಗಿ ಸದರಿ ಸ್ವತ್ತು ಬಿಡಿಎ ಮಾಲೀಕತ್ವಕ್ಕೆ ಸೇರಿದ್ದು ಎಂದು ತನ್ನ ತೀರ್ಪಿನಲ್ಲಿ ಹೇಳಿರುತ್ತದೆ.

About The Author