ವಿಜಯಲಕ್ಷ್ಮೀ ದೇವಿ ಇವರಮಾರ್ಗದರ್ಶನದಲ್ಲಿ ಬೆಳಗಾವಿಯ ಎಲ್ಲ ನ್ಯಾಯಾಲಯಗಳಲ್ಲಿ ಮಾರ್ಚ್ 9ರಂದು ಲೋಕ ಅದಾಲತನ್ನು ಹಮ್ಮಿಕೊಳ್ಳಲಾಗಿದೆ.

WhatsApp Group Join Now

ಬೆಳಗಾವಿ : ರಾಷ್ಟ್ರೀಯ
ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ
ಮೇರೆಗೆ ವೈವಾಹಿಕ, ಕೌಟುಂಬಿಕ ಮತ್ತು ಪಾಲು
ವಿಭಾಗಕ್ಕೆ, ಬ್ಯಾಂಕುಗಳಿಗೆ ಸಂಬಂಧಪಟ್ಟ
ಪ್ರಕರಣಗಳು ಹಾಗೂ ಚೆಕ್ ಬೌನ್ಸ, ಭಾರತ ದಂಡ
ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು,
ಹಣಕಾಸಿನ ದಾವೆಗಳು, ಸಿವಿಲ್ ವ್ಯಾಜ್ಯಗಳು,
ಮೋಟಾರ ವಾಹನ ಅಪಘಾತ ಪರಿಹಾರಕ್ಕೆ
ಸಂಬಂಧಪಟ್ಟ ಪ್ರಕರಣಗಳು, ಕಂದಾಯ
ಪ್ರಕರಣಗಳು ಮತ್ತು ಇತರ ಎಲ್ಲಾ ರೀತಿಯ
ರಾಜಿಯಾಗು ಪ್ರಕರಣಗಳ ಕುರಿತು ಹಾಗೂ
ನ್ಯಾಯಾಲಯಗಳಲ್ಲಿ ತನಿಕೆಗೆ ಬಾಕಿ ಇರುವ
ಪ್ರಕರಣಗಳ ಕುರಿತು ಬೆಳಗಾವಿ ಜಿಲ್ಲಾ ಕಾನೂನು
ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ
ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಗೌರವಾನ್ವಿತ
ಎಲ್. ವಿಜಯಲಕ್ಷ್ಮೀ ದೇವಿ ಇವರ
ಮಾರ್ಗದರ್ಶನದಲ್ಲಿ ಬೆಳಗಾವಿಯ ಎಲ್ಲ
ನ್ಯಾಯಾಲಯಗಳಲ್ಲಿ ಹಾಗೂ ಎಲ್ಲಾ ತಾಲೂಕುಗಳ
ನ್ಯಾಯಾಲಯಗಳಲ್ಲಿ ಮಾರ್ಚ:9 ರಂದು
ಬೆಳಿಗ್ಗೆ 11ಘಂಟೆಯಿಂದ ಜಿಲ್ಲೆಯ ಎಲ್ಲಾ
ನ್ಯಾಯಾಧೀಶರ ಹಾಗೂ ವಕೀಲರ ಸಹಯೋಗದಲ್ಲಿ
ಲೋಕ ಅದಾಲತನ್ನು ಹಮ್ಮಿಕೊಳ್ಳಲಾಗಿದೆ.

About The Author