
ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತ ಜಾಥಾದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು, ಯುವಕರು ಸೇರಿದಂತೆ ಸಾವಿರಾರು ಜನರು ಸಂವಿಧಾನ ಜಾಗೃತ ಜಾಥಾ ಸ್ಥಬ್ದಚಿತ್ರವನ್ನು ಪುಷ್ಪನಮನದೊಂದಿಗೆ ಸಲ್ಲಿಸಿ ಬಳಿಕ ಮುಖ್ಯ ರಸ್ತೆಯಿಂದ ಅಂಬೇಡ್ಕರ ವೃತ್ತದವರೆಗೆ ಮೆರವಣಿಗೆದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಸಂವಿಧಾನ ಜಾಗೃತ ಜಾಥಾದ ಉಸ್ತುವಾರಿ ಬಿ.ಜೆ.ಇಂಡಿ ಮಾತನಾಡಿ, ಸಂವಿಧಾನ ಒಂದು ಆಚರಣೆ ಮಾಡಿ ಸೀಮಿತ ಮಾಡದೇ ತಮ್ಮ ಮನೆ ಮನೆಗಳಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದರು. ಸಂವಿಧಾನ ಮೌಲ್ಯಗಳನ್ನು ಜೀವಂತವಾಗಿರಬೇಕೆಂಬ ಉದ್ದೇಶದಿಂದ ಜಾಗೃತ ಜಾಥಾ ಹಮ್ಮಿಕೊಳ್ಳಲಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಮಾತನ್ನು ಆಡದ ಸ್ಥಿತಿಯಲ್ಲಿದ್ದವರಿಗೆ ಸಂವಿಧಾನದ ಮೂಲಕ ಮಹಿಳೆಯರಿಗೆ ವಾಕ್ ಸ್ವಾತಂತ್ರ್ಯ ನೀಡಿ ಸಮಾನಾಗಿ ಬದುಕುವ ಅವಕಾಶ ಕಲ್ಪಸಿಕೊಟ್ಟಿದೆ. ಆದ್ದರಿಂದ ನಮ್ಮೆಲ್ಲ ಮಹಿಳಾ ಬಂಧುಗಳು ಸಂವಿಧಾನ ಮೌಲ್ಯಗಳನ್ನು ಮರೆಯಬಾರದು ಎಂದರು. ಕಾರ್ಯಕ್ರಮದಲ್ಲಿ ಸಂವಿಧಾನ ಜಾಗೃತ ಜಾಥಾದಲ್ಲಿ ಉಪನ್ಯಾಸಕರಾಗಿ ಎಮ್.ಡಿ.ಆರ್.ಎಸ್ ಶಾಲೆಯ ಶ್ರೀಶೈಲ ನಾವಿ ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವಂತೆ ಮನ-ಮುಟ್ಟುವಂತೆ ತಿಳಿಸಿದರು. ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಶಾಲಾ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಹಾಗೂ ಮುದ್ದು ಮಕ್ಕಳು ಭಾಗವಹಿಸಿದರು. ಮೆರವಣಿಗೆ ನಂತರ ತಾಂಬಾ ಹಾಗೂ ಸುತ್ತಮುತ್ತಲಿನ ಶಾಲೆಯ ಮಕ್ಕಳಿಂದ ಭಾಷಣ, ನೃತ್ಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವದರ ಮೂಲಕ ತಾಂಬಾ ಗ್ರಾಮದಲ್ಲಿ ಹಬ್ಬದ ವಾತವರಣ ಸೃಷ್ಠಿಯಾಗಿತ್ತು.
ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ನೂಡಲ್ ಅಧಿಕಾರಿ ಎಚ್.ಎಸ್. ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಉಪಾಧ್ಯಕ್ಷ ಉಮೆಶ ನಾಟೀಕಾರ, ಗ್ರಾಪಂ ಅಭಿವೃದ್ದಿ ಅಧಿಕಾರಿ ಶ್ರೀಕಾಂತ ಹಡಲಸಂಗ, ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಮಾರಲಾಬಾವಿ, ಹಣಮಂತ ಆರವತ್ತು, ಮಹೇಶ ಸೊಲಂಕರ, ಸಿ.ಆರ್.ಪಿ. ಮಲ್ಲಿಕಾರ್ಜುನ ಸೊನಂದ, ಎಸ್.ವಿ.ವಿ ಸಂಘದ ಮಾಜಿ ಚೇರಮನ ಜಕ್ಕಪ್ಪ ಹತ್ತಳಿ ಪ್ರಕಾಶ ಮುಂಜಿ, ರಾಜಶೇಕರ ಗಂಗನಳ್ಳಿ, ಅಪ್ಪಣ್ಣ ಕಲ್ಲೂರ, ರಾಯಗೊಂಡ ಪೂಜಾರಿ, ರವಿಂದ್ರ ನಡುಗಡ್ಡಿ, ರಾಮಚಂದ್ರ ದೊಡ್ಡಮನಿ, ಸಿದ್ದು ಹತ್ತಳ್ಳಿ, ಯೋಗೆಪ್ಪ ಹೋರಪೇಟಿ, ಬಸವರಾಜ ಸರಸಂಬಿ, ಪರಸು ಬಿಸನಾಳ, ನಾಗೇಶ ಜೋರಾಪುರ, ಮಹ್ಮದ ದಡೇದ, ಕುಲ್ಲಪ್ಪ ಭಜಂತ್ರಿ,ಮಲ್ಲಿಕಾರ್ಜುನ ನಡುಗಡ್ಡಿ, ರಾಯಗೊಂಡ ನಾಟೀಕಾರ ಕಾಮೇಶ ಉಕ್ಕಲಿ, ಸುರೇಶ ನಡುಗಡ್ಡಿ, ಸುರೇಶ ಶಿವಪೂರ, ಉಮೇಶ ಶಿವಪೂರ, ಸತೀಶ ನಾಟೀಕಾರ, ಜೈಭೀಮ ರೂಗಿ, ಹುಚ್ಚಪ್ಪ ಶಿವಪೂರ, ತ್ರೀಮೊರ್ತಿ ನಾಟೀಕಾರ, ಚನ್ನು ಶಿವಪೂರ ಸೇರಿದಂತೆ ಬಂಥನಾಳ ಶಾಲೆಯ ಮುಖ್ಯೋಪಾದ್ಯಾಯರು, ತಾಂಬಾ ಶಾಲೆಯ ಮುಖ್ಯೋಪಾಧ್ಯರು, ಸಹಶಿಕ್ಷಕರು ಹಾಗೂ ಶಿಕ್ಷಕಿಯರು, ಸಿಬ್ಬಂದ್ದಿ ಹಾಗೂ ವಿಧ್ಯಾರ್ಥಿ-ವಿಧ್ಯಾರ್ಥಿನಿಯರು, ಗ್ರಾಮಸ್ಥರು ಹಾಗೂ ಅಂಬೇಡ್ಕರ್ ನಗರದ ಮುಖಂಡರು ಯುವಕರು ಜಾಥಾದಲ್ಲಿ ಪಾಲ್ಗೋಂಡಿದ್ದರು.


