13 August 2026
Advertisement
ರಾಜ್ಯ

ಪತ್ನಿ ಮಾಡಿದ ಕರಿಮಣಿ ಮಾಲೀಕ ನೀನಲ್ಲ ರಿಲ್ಸಗೆ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

WhatsApp Group Join Now

ಚಾಮರಾಜನಗರ ಪತ್ನಿ ಮಾಡಿದ ಕರಿಮಣಿ ಮಾಲೀಕ ನೀನಲ್ಲ ರಿಲ್ಸಗೆ ನೊಂದ ಪತಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಪಿ.ಜಿ.ಪಾಳ್ಯ ಗ್ರಾಮದ ಕುಮಾರ್ (33) ಮೃತ ದುರ್ದೈವಿ. ಮೃತ ಕುಮಾರ್ ನ ಸೋದರ ಮಹಾದೇವಸ್ವಾಮಿ ಮೃತ ಕುಮಾರ್ ಪತ್ನಿ ರೂಪಾ, ರೂಪಾಳ ಸೋದರ ಮಾವ ಗೋವಿಂದ ವಿರುದ್ಧ ದೂರು ದಾಖಲಾಗಿದೆ.

ಸೋದರ ಮಾವ ಹಾಗೂ ಸಹೋದರಿ ಜೊತೆ ಸೇರಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಸ್ನೇಹಿತರು ಕುಮಾರ್ ನ ಗಮನಕ್ಕೆ ತಂದ ವೇಳೆ ದಂಪತಿ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಮನನೊಂದ ಪತಿ ಕುಮಾರ್ ಮನೆ ಮುಂಭಾಗದ ಮರಕ್ಕೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

About The Author