ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷ ನಗದು, 128 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

WhatsApp Group
Join Now
ಬೆಂಗಳೂರಿನಿಂದ ತುಮಕೂರು ಕಡೆಗೆ ಬರುತ್ತಿದ್ದ
ಕೆಎಸ್‌ಆರ್‌ಟಿಸಿ ಬಸ್ ಪರಿಶೀಲನೆ ನಡೆಸಿದಾಗ ಹಣ ಮತ್ತು
ಚಿನ್ನ ಪತ್ತೆಯಾಗಿದೆ.
ತುಮಕೂರು ನಗರದ ಬಟವಾಡಿ ಬಳಿ ಶುಕ್ರವಾರ ಬೆಳಗಿನ
ಜಾವ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷ ನಗದು, 128 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನಗರದ ಚಿಕ್ಕಪೇಟೆಯ ಗಾರ್ಡನ್
ರಸ್ತೆಯಲ್ಲಿರುವ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ
ಮಾಡುತ್ತಿರುವ ನಾಗಭೂಷಣ್ ಎಂಬುವರು ಹಣ, ಚಿನ್ನ
ತಗೆದುಕೊಂಡು ಬರುತ್ತಿದ್ದರು. ಈ ವೇಳೆ ಪೊಲೀಸರು
ಪರಿಶೀಲನೆ ನಡೆಸಿ, ದುಡ್ಡು ಬಂಗಾರ ಜಪ್ತಿ ಮಾಡಿದ್ದಾರೆ.
ವಿನೋದ್ ಎಂಬುವರಿಗೆ ಸೇರಿದ ಚಿನ್ನ, ಬೆಳ್ಳಿ ಅಂಗಡಿಯಲ್ಲಿ
ಕೆಲಸ ಮಾಡುತ್ತಿದ್ದರು. ಎನ್‌ಇಪಿಎಸ್ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
