ಮಾಜಿ ಸಚಿವರಾದ ಎಚ್ ಆಂಜನೇಯ ರವರಿಗೆ MLC ಸ್ಥಾನ ನೀಡಲು ಕರ್ನಾಟಕ ಮಾದಿಗರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಶೈಲ ರತ್ನಾಕರ್ ಆಗ್ರಹ

WhatsApp Group Join Now

ರಾಜ್ಯದಲ್ಲಿ ಜೂನ್ 17ರಂದು ನಿವೃತ್ತಿ ಹೊಂದಲಿರುವ 11 ಒಐಆ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವು ಭರ್ತಿ ಮಾಡುತ್ತಿರುವ ಖಾಲಿ ಇರುವ ಸ್ಥಾನಕ್ಕೆ ನಾಡ ಕಂಡ ಅಪ್ರತಿಮ ನಾಯಕ ಶೋಷಿತರ ದಮನಿತರ ದಲಿತರ ಗಟ್ಟಿ- ಧ್ವನಿ ಸ್ವಾಭಿಮಾನದ ದೈತ್ಯ, ಸರ್ವಜನಾಂಗದ ನಾಯಕ,ದೇವದಾಸಿ ತಾಯಂದಿರಿಗೆ ತಿಂಗಳ ಮಾಶಾಸನ, ದೇವದಾಸಿ ತಾಯಂದಿರ ಮಕ್ಕಳಿಗೆ ಮದುವೆಗೆ ಪ್ರೋತ್ಸಾಹ ಧನ,ಹೆಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಲು ಪ್ರೋತ್ಸಾಹ ನೀಡಲು ಯೋಜನೆ ಜಾರಿಗೆ ತಂದವರು ಮತ್ತು ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳು, ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನಗಳು ನಿರ್ಮಾಣ, ಅಭಿವೃದ್ಧಿ ನಿಗಮಗಳಲ್ಲಿ ಸಾವಿರಾರು ಕೋಟಿ ಅನುದಾನ ನೀಡಿದ ಧೀಮಂತ ನಾಯಕ ಮಾಜಿ ಸಮಾಜ ಕಲ್ಯಾಣ ಹಾಗೂ ಹಿಂದುಳಿ- ದ ವರ್ಗಗಳ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಎಚ್ ಆಂಜನೇಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಈ ಮೂಲಕ ಕಾಂಗ್ರೆಸ್ ಪಕ್ಷದ ಹೈಕಮಾಂಡರವರಲ್ಲಿ ಮನವಿ ಮಾಡುತ್ತೇವೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅವರ ಅಭಿಮಾನಿಗಳಿದ್ದಾರೆ ಅವರನ್ನು ನಂಬಿಕೊಂಡಿರುವ ಕೋಟಿಗಟ್ಟಲೆ ಕಾರ್ಯಕರ್ತರಿದ್ದಾರೆ ಅವರೆಲ್ಲರಿಗೂ ಕೂಡ ಶಕ್ತಿ ತುಂಬಿ ರಾಜ್ಯದ ಅಭಿವೃದ್ಧಿಗೆ ಆಂಜನೇಯ ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವುದರ ಮುಖಾಂತರ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕೆಂದು ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಜಿ. ಶ್ರೀ ರಾಹುಲ್ ಗಾಂಧಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ. ಡಿ ಕೆ ಶಿವಕುಮಾರ್.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀಎಂ.ಬಿ.ಪಾಟೀಲ ಅವರನ್ನು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಮಾದಿಗ ಸಮುದಾಯದ ಮುಖಂಡರು ನಾಡಿನ ಜನತೆಯ ಪರವಾಗಿ ಆಗ್ರಹ ಪಡಿಸುತ್ತೇವೆ
ಕರ್ನಾಟಕ ಮಾದಿಗರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಶೈಲ ರತ್ನಾಕರ್. ಮಹಾಂತೇಶ್ ಕಾಖಂಡಕಿ. ಮಲ್ಲು ಶೇಷಗೀರ್. ಧರ್ಮಣ್ಣ ಮಾದರ ಸಿದ್ದು ಮಾದರ ಮಮದಾಪೂರ ಸಿದ್ದು ಶೇಗುಣಸಿ ವಿಜಯ್ ಮಾದರ ಪ್ರಕಾಶ್ ದೊಡ್ಡಮನಿ ದಲಿತ ಮುಖಂಡರು ಸೇರಿ ಪತ್ರಿಕಾ ಪ್ರಕಟಣೆ ಮೂಲಕ ಕಾಂಗ್ರೆಸ್ ಪಕ್ಷದ ಹೈಕಮಾಂಡ ರವರನ್ನು ಒತ್ತಾಯಿಸಿದ್ದಾರೆ

About The Author