ಅಂಚೆ ಇಲಾಖೆ ಹಾಗೂ ಜೆಸಿಐ ರಾಮದುರ್ಗ ಘಟಕದಿಂದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ನೇಕಾರ ಪೇಠದ ವಿಠ್ಠಲ ಮಂದಿರದಲ್ಲಿ ಅಂಚೆ ಇಲಾಖೆ ಹಾಗೂ ಜೆಸಿಐ ರಾಮದುರ್ಗ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ರಾಮದುರ್ಗ ಅಂಚೆ ನಿರೀಕ್ಷಕ ನಾಗರಾಜ್ ಮಳ್ಳಿ
ಪಾಲ್ಗೊಂಡು ಅವರು ಮಾತನಾಡಿದರು.
ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ತೆರೆದರೆ ನಿಮ್ಮ ಬೇರೆ ಯಾವುದೇ ಬ್ಯಾಂಕಿನಲ್ಲಿ ನಿಮ್ಮ ಹಣ ಇದ್ದರೆ ಆ ಹಣವನ್ನು ನೀವು ನಿಮ್ಮ ಮನೆಯಲ್ಲಿ ಇದ್ದುಕೊಂಡು ಹಣ ಪಡೆಯಬಹುದು. ಅಂಚೆಯ ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ಬಂದು ಹಣವನ್ನು ಸಂದಾಯ ಮಾಡುತ್ತಾರೆ.520 ರೂ. ಸ್ವಲ್ಪ ಹಣ ಇನ್ಸೂರೆನ್ಸ್ ಮಾಡಿದರೆ. ತಮಗೆ ಅಪಘಾತವಾದಲ್ಲಿ ನಿಮಗೆ ಹತ್ತು ಲಕ್ಷ ರೂಪಾಯಿ ಕೇಂದ್ರ ಸರ್ಕಾರ ಸಹಾಯ ಮಾಡಲಿದೆ. ಮತ್ತು ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಸ್ವಲ್ಪ ಹಣ ಸಂದಾಯ ಮಾಡಿಕೊಂಡು ಹೆಣ್ಣು ಮಕ್ಕಳಿಗೆ ಮದುವೆಯ ವಯಸ್ಸಿಗೆ ಬಂದಾಗ ಉಪಯೋಗಿಸಿಕೊಳ್ಳಬಹುದು. ಆರ್.ಡಿ ಅಕೌಂಟ್ ಮಾಡಿ ಐದು ವರ್ಷಕ್ಕೆ ಬಡ್ಡಿ ಸಹಿತವಾಗಿ ಪಡೆಯಬಹುದು. ಹಾಗೂ ಪಿ.ಎಂ.ಎಸ್.ವೈ. ಮತ್ತು ಪಿ.ಎಂ.ಜೆ.ಜೆ.ವೈ. ಪ್ರಧಾನಮಂತ್ರಿಯ ಯೋಜನೆಯ ಕಾರ್ಯಕ್ರಮವನ್ನು ತಾವು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿದರು.
ನೂರಾರು ಗ್ರಾಹಕರು ಇದರ ಉಪಯೋಗವನ್ನು ಪಡೆದುಕೊಂಡರು ಅಂಚೆ ಸಿಬ್ಬಂದಿಯವರು ಸಂಜೆಯವರೆಗೂ ಜನ ಸೇವೆ ಮಾಡಿದರು.
ನೇಕಾರ ಪೇಠದ ಶಾಖೆಯ ಪೋಸ್ಟ್ ಮಾಸ್ಟರ್ ಮಹಾಂತೇಶ ಹೊಸಮನಿ ಸ್ವಾಗತಿಸಿದರು. ದಾವಲ್ ಸಾಬ್ ಅಣ್ಣಿಗೇರಿ ನಿರೂಪಿಸಿದರು. ರಾಮದುರ್ಗ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಪಿ.ಬಿ. ಪಾಟೀಲ ವಂದಿಸಿದರು.

ಈ ವೇಳೆ ರಾಮದುರ್ಗ ಜೆಸಿಐ ಘಟಕಾಧ್ಯಕ್ಷ ತುಕಾರಾಮ ಪಮ್ಮಾರ ಮಾತನಾಡಿ, ಜೆಸಿಐ ಘಟಕವು ಜನರ ಸೇವೆಗಾಗಿ ಶ್ರಮಿಸುತ್ತಿದೆ. ದಶರಥ ಸುಳಿಭಾವಿ ಅವರು ನೇಕಾರ ಪೇಠದಲ್ಲಿ ಅಂಚೆಯ ಜನ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತೋಷವಾಗಿದೆ. ಇದರ ಪ್ರಯೋಜನವನ್ನು ನಾವೆಲ್ಲರೂ ಪಡೆಯೋಣ ಎಂದರು.
ಜೆಸಿಐ ವಲಯ ಉಪಾಧ್ಯಕ್ಷ ಮುರಳಿ ಸುಳಿಭಾವಿ, ನಿವೃತ್ತ ಅಂಚೆ ನೌಕರ ಬಿ.ಎಸ್. ಮುಳ್ಳೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author