ಗ್ರಾಮ ಪಂಚಾಯಿತ ಗ್ರಂಥಪಾಲಕರಿಗೆ ಸ್ಮಾರ್ಟಪೋನ್‌ಗಳನ್ನು ತಾ.ಪಂ ಇಓ ಪ್ರವೀಣಕುಮಾರ ಸಾಲಿ ವಿತರಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಾಲೂಕು ಪಂಚಾಯಿತ ಸಭಾಭವನದಲ್ಲಿ ತಾಲೂಕಿನ ಗ್ರಾಮ ಪಂಚಾಯತ್ ಗ್ರಂಥಪಾಲಕರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಹಾಗೂ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಪಾಲಕರು ಗ್ರಂಥಾಲಯಗಳಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಗ್ರಂಥಾಲಯಗಳನ್ನು ಜ್ಞಾನ ಭಂಡಾರ ಕೇಂದ್ರಗಳಂತೆ ನಿರ್ಮಾಣ ಮಾಡಬೇಕು. ಇದರಿಂದ ಗ್ರಂಥಾಲಯದತ್ತ ಹೆಚ್ಚಿನ ಓದುಗರ ಆಸಕ್ತಿ ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದರು.
ಶಿಕ್ಷಣ ಫೌಂಡೇಶನನ ಝೋನಲ್ ಮ್ಯಾನೇಜರ ಹಾಗೂ ಬೆಳಗಾವಿ ಮತ್ತು ಧಾರವಾಡ ಜಿಲ್ಲಾ ಕೃತಕ ಬುದ್ಧಿಮತ್ತೆ ತರಬೇತುದಾರ ಶ್ರೀಶೈಲ ಅಥಣಿ ಅವರು, 2024-25ನೇ ವರ್ಷದಲ್ಲಿ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತ ಗ್ರಂಥಾಲಯ ವ್ಯಾಪ್ತಿಯಲ್ಲಿ 16-25 ವರ್ಷ ವಯಸ್ಸಿನ ಯುವಕ ಯುವತಿಯರಿಗೆ ಕೃತಕ ಬುದ್ಧಿ ಮತ್ತೆ ಕಾರ್ಯಕ್ರಮದ ಬಗ್ಗೆ, ಶಿಕ್ಷಣ ಪಿಡಿಯ ಅಪ್ಲಿಕೇಶನ್ ಅಕಾಡೆಮಿಕ್ಸ್, ಡಿಜಿಟಲ್ ಸ್ಕಿಲ್ಸ್ ಹಾಗೂ ಸ್ಟೋರೀಸ್ ಎಂಬ 3 ಭಾಗಗಳನ್ನು ಒಳಗೊಂಡಿದ್ದು ಅಕಾಡೆಮಿಕ್ಸ್ ಅಲ್ಲಿ 8,9,10 ನೇಯ ಹಾಗೂ ಪಿಯಸಿ ತರಗತಿಯ ಪಠ್ಯ ಪುಸ್ತಕದ ಪಾಠಗಳ ವಿಡಿಯೋಗಳಿದ್ದು, ಸ್ಕಿಲ್ಸ್ ಅಲ್ಲಿ ಡಿಜಿಟಲ್ ಸಾಕ್ಷರತೆ ಬಗ್ಗೆ ಅಂದರೆ ಡಿವೈಸ್, ಡಿವೈಸ ಸೆಪ್ಟಿ, ಹಾಡ್ವೇðರ್ ಅಂಡ್ ಸಾಪ್ಟ್ವೇರ್, ಇಂಟರ್ನೆಟ್, ಇಮೇಲ್, ಗೂಗಲ್ ಡ್ರೈವ್ ಹಾಗೂ ಇನ್ನಿತರ ಡಿಜಿಟಲ್ ಸಾಕ್ಷರತೆ ಬಗ್ಗೆ ವಿಡಿಯೋ ಗಳನ್ನು ನೀಡಲಾಗಿದೆ. ಹಾಗೂ ಸ್ಟೋರೀಸ್ ಅಲ್ಲಿ ಚಿಕ್ಕ ಮಕ್ಕಳಿಗಾಗಿ ಕಥೆಗಳನ್ನು ನೀಡಲಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ತಮ್ಮ ವೃತ್ತಿ ಜೀವನಕ್ಕೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಅಳವಡಿಸಲಾಗಿದೆ. ಇದರ ಮುಖಾಂತರ ಗ್ರಾಮೀಣ ಭಾಗದ ಮಕ್ಕಳು ಪ್ರಯೋಜನ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿಕೊಟ್ಟರು.

ಜಿಲ್ಲಾ ಸಂಯೋಜಕರಾದ ಬಾಳಪ್ಪ ಮಡಿವಾಳರ, ರಾಘವೇಂದ್ರ ನಾಯ್ಕ ತರಭೇತಿ ನೀಡಿದರು. ಈ ಸಂದರ್ಭದಲ್ಲಿ ಗ್ರಂಥಪಾಲಕರು ಉಪಸ್ಥಿತರಿದ್ದರು.

About The Author