ಅಗಸ್ಟ್ 15 ರಂದು ಜರಗಲಿರುವ ಸ್ವಾತಂತ್ರ್ಯ ದಿನದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ವಹಿಸಿ ಮಾತನಾಡಿದರು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆ ಸಂಯೋಗದಲ್ಲಿ ಅಗಸ್ಟ್ 15 ರಂದು ಜರಗಲಿರುವ ಭಾರತ ಸ್ವಾತಂತ್ರ್ಯ ದಿನಾಚರಣೆ ಕುರಿತು ಗುರುವಾರ ಏರ್ಪಡಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ವಹಿಸಿ ಮಾತನಾಡಿದರು ಬರುವ ಅಗಸ್ಟ್.15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುವುದು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಲ್ಯಾಸ್ಟಿಕ್ ಧ್ವಜದ ಬಳಕೆ ಎಲ್ಲಿಯೂ ಆಗಬಾರದು. ಇದಕ್ಕಾಗಿ ಯಾವುದೇ ಅಂಗಡಿಗಳಲ್ಲಿ ಪ್ಲ್ಯಾಸ್ಟಿಕ್ ಧ್ವಜಗಳ ಮಾರಾಟವಾಗಬಾರದು. ಜನರು ಕೂಡ ಬಳಸಬಾರದು ಎಂದು ಮನವಿ ಮಾಡಿದರು.
ಸ್ವಾತಂತ್ರೋತ್ಸವ ದಿನದಂದು ಮಹಾತ್ಮ ಗಾಂಧೀಜಿ ಫೋಟೋ ಜೊತೆಗೆ ಡಾ. ಬಿ ಆರ್ ಅಂಬೇಡ್ಕರ್ ಅವರ ಫೋಟೋ ಇಟ್ಟು ಪೂಜೆ ಸಲ್ಲಿಸಬೇಕು ಎಂದು ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಾತಂತ್ರ್ಯ ದಿನ ಬೆಳಗ್ಗೆ 7 ಗಂಟೆ 15 ನಿಮಿಷಕ್ಕೆ ನಿಮ್ಮ ನಿಮ್ಮ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ 7 ಗಂಟೆ 45 ನಿಮಿಷಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸುವುದು ಧ್ವಜಾರೋಹಣ ಸಮಯದಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು
8 ಗಂಟೆ30 ನಿಮಿಷಕ್ಕೆ. ವಿದ್ಯಾ ಚೇತನ ಶಾಲೆ , ಹುತಾತ್ಮ ಚೌಕ, ತೇರ ಬಜಾರ್ ದಲ್ಲಿ ಇರುವ ಮಹಾತ್ಮ ಗಾಂಧೀಜಿ ಪುತ್ತಲಿಗೆ ಮಾಲಾರ್ಪಣೆ 9 ಗಂಟೆಗೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸುವು ಇದಾದ ನಂತರ ಅರಮನೆ ಮೈದಾನದ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಜರಿದ್ದರು

About The Author