
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ವಿದ್ಯಾ ಚೇತನ ಶಾಲೆ ಮುಂದೆ ಇರುವ ಪುರಸಭೆ ಕಾಂಪ್ಲೆಕ್ಸ್ ದಲ್ಲಿ ಗುರುವಾರ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಮದುರ್ಗ ಮೀಡಿಯಾ ಕ್ಲಬ್ ಕಾರ್ಯಾಲಯವನ್ನು ಉದ್ಘಾಟನೆ ಮಾಡುವ ಮೂಲಕ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಕಾ.ನಿ.ಪ ದ್ವನಿ ಸಂಘಟನೆಯ ರಾಮದುರ್ಗ ತಾಲೂಕ ಅಧ್ಯಕ್ಷರಾದ ರಮೇಶ ರಾಯಭಾಗ ನೆರವೇರಿಸಿದರು.
ರಾಮದುರ್ಗ ತಾಲೂಕಿನಲ್ಲಿ ನೂತನವಾಗಿ ಪದಾಧಿಕಾರಿಗಳ ಆಯ್ಕೆಯನ್ನು ಕಾ. ನಿ .ಪ. ಧ್ವನಿ ಸಂಘಟನೆಯ ರಾಜ್ಯದ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ಹಿಂದಿನ ತಿಂಗಳ ಅಂತ್ಯದಲ್ಲಿ ಆಯ್ಕೆ ಮಾಡಿದ ಸಂದರ್ಭದಲ್ಲಿ ನುಡಿದ ಮಾತು ರಾಮದುರ್ಗ ತಾಲೂಕಿನಲ್ಲಿ ಕಾ. ನಿ. ಪ .ಧ್ವನಿ ಸಂಘಟನೆಯ ಕಾರ್ಯಾಲಯ ಮೊದಲು ಉದ್ಘಾಟನೆ ಮಾಡಬೇಕೆಂಬುದಾಗಿ ಹೇಳಿದ್ದರು. ಅದರಂತೆ ಇಲ್ಲಿ ಆಸಕ್ತಿಯನ್ನು ತೆಗೆದುಕೊಂಡ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ಇಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯ ದಿನದಂದು ಕಾರ್ಯಾಲಯ ಉದ್ಘಾಟನೆ ಮಾಡಿದರು
ಈ ವೇಳೆ ಕಾ.ನಿ.ಪ ದ್ವನಿ ಸಂಘಟನೆಯ ರಾಮದುರ್ಗ ತಾಲೂಕ ಅಧ್ಯಕ್ಷರಾದ ರಮೇಶ ರಾಯಭಾಗ ರವರು ಸಂಘಟನೆಯ ಸರ್ವ ಪದಾಧಿಕಾರಿಗಳು ಮತ್ತು ಸಮಸ್ತ ನಾಡಿನ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕ ಕಾರ್ಯಾಧ್ಯಕ್ಷರು. ಗೌರವಾಧ್ಯಕ್ಷರು .ಉಪಾಧ್ಯಕ್ಷರು ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು, ಸಂಘಟನೆಯ ಖಜಾಂಚಿ, ಮತ್ತು ರಾಮದುರ್ಗ ತಾಲೂಕಿನ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸರ್ವ ಪದಾಧಿಕಾರಿಗಳು ಪಾಲ್ಗೊಂಡಿದ್ದರು


