
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ 16_9_24ರಂದು ನಡೆಯಬೇಕಿದ್ದ್ ಈದ ಮಿಲಾದ್ ಮೆರವಣಿಗೆ 19_9_24ರಂದು ನಡೆಯಿತು, ಕಾರಣ 16-9-24ರಂದು ಗಣೇಶ ಹಬ್ಬದ ನಿಮತ್ಯ ಇಂದು ಮೆರವಣಿಗೆ ನಡೆಯಿತು.
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಸಂಕೇತವಾಗಿರುವ ಈದ್‌ಮಿಲಾದ್ ಹಬ್ಬವನ್ನು ಪಟ್ಟಣದ ಜಾಮಿಯಾ ಮಸ್ಜಿದಯಿಂದ ಮುಂಜಾನೆ 10ಘಂಟೆಯಿಂದ ಸಂಜೆ 4ಘಂಟೆಗೆ ಮೆರವಣಿಗೆ ನಡೆಯಿತು.
ಮುಸ್ಲಿಂ ಬಾಂದವರು ನಗರದ ಪ್ರಮುಖ ಬೀದಿಗಳಲಿ ಮೆರವಣಿಗೆ ಸಾಗಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಬಿಳಿ
ಬಣ್ಣದ ಕುರ್ತಾ ಧರಿಸಿ, ಕೈಯಲ್ಲಿ ಹಸಿರು ಝಂಡಾ ಹಿಡಿದು, ಬೀಸುತ್ತಾ, ಮುಸ್ಲಿಂ ಧರ್ಮದ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಯುವಕರು, ಪುಟ್ಟ ಪುಟ್ಟ ಮಕ್ಕಳು ಭಾಗವಹಿಸಿದ್ದ ಮೆಕ್ಕಾ ಮತ್ತು ಮದಿನಾದ ಸ್ತಬ್ದ ಚಿತ್ರ ನೋಡುಗರ ಕಣ್ಮನ ಸೆಳೆಯುತ್ತಿತ್ತು.
ಮೆರಣಿಗೆಯ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಈ ಸಂಧರ್ಭದಲ್ಲಿ ಅಂಜುಮನ್ ಕಮಿಟಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ಮಾತನಾಡಿದರು,
ಈ ಸಂಧರ್ಭದಲ್ಲಿ ಮುಸ್ಲಿಂ ಧರ್ಮಗುರು ಮೌಲಾನಾ ಜಹುರ್ ಹಾಜಿ,ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ, ಶಬ್ಬೀರ್ ಕಾಜಿ, ಖಜಾಂಚಿ, ಬಶೀರಅಹ್ಮದ್ ರೋಣ, ನಿರ್ದೇಶಕ, ಮಹಮ್ಮದಶಫಿ ಬೆಣ್ಣಿ,ಶಬ್ಬೀರ್ ಪಠಾಣ, ರಸೂಲ್ ಖಾಜಿ ಮೆರವಣಿಗೆಯಲ್ಲಿ ಇನ್ನಿತರರು ಭಾಗವಹಿಸಿದ್ದರು.


